Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಬೆಂಗಳೂರು: ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರವಾದ ಕಾರಣ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಜುಲೈ ಮೂರನೇ ವಾರದಲ್ಲಿ ಮುಹೂರ್ತ ನಿಗದಿಪಡಿಸಿರುವ ರಾಜ್ಯ ಸರ್ಕಾರ ಶನಿವಾರ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ ಸೈಟ್ sslc.karnataka.gov.in ನಲ್ಲಿ ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆಯಾಗಿದೆ. ಇಲಾಖೆ

ಬೆಂಗಳೂರು: ಕೃಷ್ಣ ಮತ್ತು ಭೀಮಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಶನಿವಾರ ನಡೆದ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಕ್ಷಣಕ್ಷಣದ ಮಾಹಿತಿ, ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಲಾಯಿತು ಎಂದು ಮುಖ್ಯಮಂತ್ರಿ ಬಿ

ನವದೆಹಲಿ: ಕೋವಿಡ್ ಸೋಂಕು ಇಳಿಕೆಯಾಗುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳು ಲಾಕ್ಡೌನ್ ತೆರವುಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಹಾಗೂ ಕೆಲವು ಪ್ರದೇಶಗಳಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇದರಿಂತ ಸೋಂಕು ಹೆಚ್ಚಾಗುವ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆ ಹಾಗೂ ಕೊರೋನಾ ಮಾರ್ಗಸೂಚಿ ಕಠಿಣವಾಗಿ ಪಾಲನೆ

ನವದೆಹಲಿ: 2019ರಿಂದ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯ ಗ್ರಾಹಕರು ಹೂಡಿಕೆ ಮಾಡಿರುವ ಹಣ ಕಡಿಮೆಯಾಗಿದ್ದರೂ ಕೂಡ 2020ರಲ್ಲಿ ವ್ಯಕ್ತಿಗಳು ಮತ್ತು ಘಟಕಗಳು ಹೂಡಿಕೆ ಮಾಡಿರುವ ಹಣದಲ್ಲಿ ಬದಲಾವಣೆಗಳಿಗೆ ಸಂಭವನೀಯ ಕಾರಣಗಳ ಮತ್ತು ವಿವರಗಳನ್ನು ಸ್ವಿಸ್ ಬ್ಯಾಂಕ್ ಅಧಿಕಾರಿಗಳಿಂದ ಕೇಂದ್ರ ಹಣಕಾಸು ಸಚಿವಾಲಯ ಕೇಳಿದೆ. ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ

ಉಡುಪಿ: ಕೊರೊನಾ ಸಂಕಷ್ಟ ಸಂದರ್ಭದಲ್ಲಿ ದೇಶದ ಲಕ್ಷಾಂತರ ಮಂದಿ ಬಿಜೆಪಿ ಕಾರ್ಯಕರ್ತರು ಕೊರೊನಾ ವಾರಿಯರ್ ಗಳಾಗಿ ಕೆಲಸ ಮಾಡಿದ್ದಾರೆ. ಶವ ಸಂಸ್ಕಾರದಿಂದ ತೊಡಗಿ, ಲಸಿಕಾ ಕೇಂದ್ರಗಳಲ್ಲೂ ದುಡಿದಿದ್ದಾರೆ. ಆಹಾರ ಕಿಟ್, ಔಷಧೀಯ ಸಲಕರಣೆ ವಿತರಣೆ ಮಾಡಿದ್ದಾರೆ. ಅವರೆಲ್ಲರ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.

ಮೆಡಕ್: ನೆಲಸಮಗೊಳಿಸಿದ ತನ್ನ ಮನೆಯ ಮರದ ತುಂಡುಗಳಿಂದ ತಾನೇ ಮಾಡಿಕೊಂಡ ಚಿತೆಗೆ ಹಾರಿ  70 ವರ್ಷದ ರೈತನೊಬ್ಬ ಜೀವಂತ ದಹನವಾಗಿರುವ ಘಟನೆ ಮೇಡಕ್ ಜಿಲ್ಲೆಯ ವೇಮುಲಾಘಾಟ್ ಗ್ರಾಮದಲ್ಲಿ ನಡೆದಿದೆ. ಮಲ್ಲಣ್ಣ ಸಾಗರ್ ಜಲಾಶಯ ನಿರ್ಮಾಣಕ್ಕಾಗಿ ಮನೆ ಕಳೆದುಕೊಂಡವರಿಗೆ ತೆಲಂಗಾಣ ಸರ್ಕಾರದಿಂದ ಪುನರ್ವಸತಿ ಕಾಲೋನಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾಲೋನಿಯಲ್ಲಿ 2 ಬಿಹೆಚ್ ಕೆ

ನವದೆಹಲಿ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಭಯೋತ್ಪಾದನಾ-ವಿರೋಧಿ ಕಾನೂನಡಿಯಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿ ಹೋರಾಟಗಾರರಿಗೆ ಜಾಮೀನು ನೀಡಿಕೆ ವಿಚಾರವಾಗಿ ದೆಹಲಿ ಹೈಕೋರ್ಟ್ ಬೆನ್ನಿಗೆ ನಿಂತಿರುವ ಸುಪ್ರೀಂ ಕೋರ್ಟ್ ಜಾಮೀನು ಆದೇಶವನ್ನು ಎತ್ತಿಹಿಡಿದಿದೆ. ಮೂವರು ವಿದ್ಯಾರ್ಥಿ ಹೋರಾಟಗಾರರಾದ ನತಾಶಾ ನರ್ವಾಲ್, ದೇವಾಂಗನಾ ಹಾಗೂ ಆಸಿಫ್‌ ಇಕ್ಬಾಲ್‌ ರಿಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ

ರಾಜಾ೦ಗಣದ ಮೇಲ್ಭಾಗದಲ್ಲಿನ ರೂಫ್ ಟಾಪ್ ನಲ್ಲಿ ಅಳವಡಿಸಲಾದ ಸೋಲಾರ್ ಪಾನೆಲ್ ನೋಟ.( ಚಿತ್ರ:ಟಿ.ಜಯಪ್ರಕಾಶ್ ಕಿಣಿ,ಉಡುಪಿ.) ಹೌದು ಉಡುಪಿಯ ಪ್ರಸಿದ್ಧ ದೇವಾಲಯವಾದ ಶ್ರೀಕೃಷ್ಣಮಠದಲ್ಲಿ ವಿದ್ಯುತ್ ಉತ್ಪಾದನೆಯನ್ನು ಮಾಡುವ ಮಹತ್ವದ ಕಾರ್ಯವೊ೦ದು ಕಳೆದ ಕೆಲವು ದಿನಗಳಿ೦ದ ಆರ೦ಭವಾಗಿದೆ. ಶ್ರೀಕೃಷ್ಣಮಠಕ್ಕೆ ಮ೦ಜೂರಾದ ವಿದ್ಯುತ್ ಪರಿಮಿತಿ 150ಕೆ.ವಿ ಯಾಗಿದೆ. ಇದರ ಶೇಕಡಾ 85 ರಿ೦ದ 90ರಷ್ಟು ವಿದ್ಯುತ್

ಉಡುಪಿ, ಜೂ, 18 :ಜಿಲ್ಲೆಯಲ್ಲಿ ವೀಕೆಂಡ್‌‌ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ಅವರು, "ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ವೀಕೆಂಡ್‌‌ ಕರ್ಫ್ಯೂ ವೇಳೆ ಬೆಳಗ್ಗೆ 6 ರಿಂದ ಮದ್ಯಾಹ್ನ

ಕೊರೊನಾ ವೈರಸ್​ ಎರಡನೇ ಅಲೆ ಜೋರಾದ ಪರಿಣಾಮ ಹಲವು ಕಡೆಗಳಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗಿತ್ತು. ಇದರಿಂದ ಅನೇಕರು ಕೆಲಸ ಇಲ್ಲದೆ ಮನೆಯಲ್ಲಿ ಕೂರುವುದು ಅನಿವಾರ್ಯ ಆಗಿತ್ತು. ಸಿನಿಮಾ ಮತ್ತು ಧಾರಾವಾಹಿ ಶೂಟಿಂಗ್​ ಕೂಡ ಸ್ಥಗಿತ ಆಗಿದ್ದರಿಂದ ಕಲಾವಿದರು ಮತ್ತು ತಂತ್ರಜ್ಞರ ಪರಿಸ್ಥಿತಿ ಸಹ ಹೀನಾಯ ಆಯಿತು. ಪರಿಣಾಮವಾಗಿ ಇಬ್ಬರು