Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.60 ಕೋಟಿ ಡೋಸ್ ಕೋವಿಡ್ -19 ಲಸಿಕೆ ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ, ಇನ್ನೂ 2.67 ಲಕ್ಷ ಡೋಸ್‌ಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಇದುವರೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 21 ಕೋಟಿಗೂ ಹೆಚ್ಚು ಡೋಸ್ ಲಸಿಕೆ

ಬೆಳಗಾವಿ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 4.5ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದ ಪೊಲೀಸರ ಮೇಲೆಯೇ ಆ ಚಿನ್ನ ಕದ್ದ ಆರೋಪ ಬಂದಿದ್ದು, ಪ್ರಕರಣ ಸಂಬಂಧ ಹಲವು ಪೊಲೀಸರ ವರ್ಗಾವಣೆ ಮಾಡಲಾಗಿದೆ. ಹೌದು.. ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದ್ದು, ರಕ್ಷಣೆ ನೀಡಬೇಕಾದ ಪೊಲೀಸರೇ ಭಕ್ಷಕರಾದ ಪ್ರಕರಣವಾಗಿದೆ. ಮಂಗಳೂರಿನಿಂದ ಬೆಳಗಾವಿ ಮೂಲಕ ಕೊಲ್ಲಾಪುರಕ್ಕೆ ಕಾರಿನಲ್ಲಿ

ನವದೆಹಲಿ: ಡಿಎಲ್ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, 'ಡಿಎಲ್ಎಫ್ ಲಂಚ ಪ್ರಕರಣದಲ್ಲಿ ಸಿಬಿಐ ಮಾಜಿ ರೈಲ್ವೆ

ಬೀಜಿಂಗ್: ನೈರುತ್ಯ ಚೀನಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಮೂವರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್‌ ಮಾಪಕದಲ್ಲಿ 7.3ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿಗಳು ಕಾರ್ಯಾರಣೆಯಲ್ಲಿ ತೊಡಗಿದ್ದಾರೆ. ಇದಾದ ಕೆಲವೇ ಗಂಟೆಗಳ ನಂತರ ಉತ್ತರಕ್ಕೆ ಸುಮಾರು 1,000 ಕಿ.ಮೀ. ದೂರವಿರುವ ಉತ್ತರ ಚೀನಾದ ಕಿಂಗ್‌‌ ಹೈ

ಇ೦ದು ಶನಿವಾರ ಉಡುಪಿ ಶ್ರೀ ಲಕ್ಷ್ಮೀವೆ೦ಕಟೇಶ ದೇವರಿಗೆ ವಿಶೇಷ ಅಲ೦ಕಾರ ವನ್ನು ಹಾಗೂ ಉತ್ಸವ ಮೂರ್ತಿಗೆ ದೇವಳದ ಪ್ರಧಾನ ಅರ್ಚಕರಾದ ರಾದ ದಯಾಘನ್ ಭಟ್ ರವರು ಅಲ೦ಕಾರವನ್ನು ನೆರವೇರಿಸಿದರು. ಗಿರೀಶ್ ಭಟ್ ಹಾಗೂ ದೇವಳದ ಸಿಬ್ಬ೦ದಿವರ್ಗದವರು ಸಹಕರಿಸಿದರು.

ಮಂಗಳೂರು: ಖ್ಯಾತ ಛಾಯಾಗ್ರಾಹಕ ಡೆನಿಸ್ ಸ್ಟುಡಿಯೋದ ಡೆನಿಸ್ ರೆಗೊ ಶನಿವಾರ ನಿಧನರಾಗಿದ್ದಾರೆ. ಡೆನಿಸ್ ಅವರು ಮೂರು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಛಾಯಾಗ್ರಹಣ ಜಗತ್ತಿನಲ್ಲಿ ಡೆನಿಸ್ ಅವರು ಪರಿಚಿತ ಮುಖ. ಅವರ ಫೋಟೋ ಸ್ಟುಡಿಯೋ ಬಲ್ಮಠದಲ್ಲಿದೆ. ಇನ್ನು 50 ವರ್ಷಗಳಿಂದ ಛಾಯಾಗ್ರಾಹಣ ಕ್ಷೇತ್ರದಲ್ಲಿದ್ದು,

(ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ) ಉಡುಪಿ ಜಿಲ್ಲೆಯ ಕೇ೦ದ್ರ ಸ್ಥಾನವಾಗಿರುವ ಮಣಿಪಾಲಕ್ಕೆ ಹೋಗುವುದೆ೦ದರೆ ಇದೀಗ ಬಹಳ ಜಾಗರೂಕತೆಯಿ೦ದಲೇ ಹೋಗ ಬೇಕಾದ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ವಿವಿಧಕಡೆಯಿ೦ದಲೂ ಸೇರಿದ೦ತೆ ಹೊರರಾಜ್ಯಗಳಿ೦ದಲೂ ಆರೋಗ್ಯದಿ೦ದ ಚಿಕಿತ್ಸೆಗಾಗಿ ಬರುವವರ ಸ೦ಖ್ಯೆಯೇ ಹೆಚ್ಚಾಗಿದ್ದು ಜೊತೆಗೆ ವಿದ್ಯಾಸ೦ಸ್ಥೆಗಳು,ಕೈಗಾರಿಕೆಗಳು, ಜಿಲ್ಲಾಧಿಕಾರಿಗಳ ಕಚೇರಿಯು ಇಲ್ಲಿ ಇರುವುದರಿ೦ದಾಗಿ ಜನ ಸ೦ಚಾರವ೦ತೂ ಕಡಿಮೆಯಿಲ್ಲ. ವಾಹನ ಸ೦ಚಾರವು ಬಹಳ

ಕೋಲ್ಕತ್ತಾ: ನಾರದ ಸುದ್ದಿವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿರುವ ಪಶ್ಚಿಮ ಬಂಗಾಳ ಸರ್ಕಾರದ ಇಬ್ಬರು ಸಚಿವರು ಸೇರಿದಂತೆ ನಾಲ್ವರು ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿರಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಕೋಲ್ಕತ್ತಾ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ನೇತೃತ್ವದ ವಿಭಾಗೀಯ ಪೀಠದ ನ್ಯಾಯಾಧೀಶರು ಇಂದು ವಿಚಾರಣೆ

ನವದೆಹಲಿ: ಚಿಪ್ಕೊ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಬಹುಗುಣ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಪರಿಸರ ಕಾರ್ಯಕರ್ತರಾಗಿದ್ದ ಸುಂದರ್ ಲಾಲ್ ಬಹುಗುಣ, ಕಾಡುಗಳು ಮತ್ತು ಹಿಮಾಲಯ ಪರ್ವತಗಳ ನಾಶವನ್ನು ತಪ್ಪಿಸಲು ಗ್ರಾಮಸ್ಥರ ಮನವೊಲಿಸಲು ಶಿಕ್ಷಣ ನೀಡುವ ಸಲುವಾಗಿ ತಮ್ಮ ಜೀವನವನ್ನೇ

ಭುವನೇಶ್ವರ/ಗಡ್ಚಿರೊಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಸುಕಿನ ಜಾವ ನಡೆದ ಭಾರೀ ಎನ್ ಕೌಂಟರ್ ನಲ್ಲಿ ಕನಿಷ್ಠ 13 ನಕ್ಸಲೀಯರು ಪೊಲೀಸರ ಗುಂಡಿನ ದಾಳಿಗೆ ಹತರಾಗಿದ್ದಾರೆ. ಗಡ್ಚಿರೋಲಿ ಅರಣ್ಯ ಪ್ರದೇಶದ ಎಟಪಲ್ಲಿ ಎಂಬಲ್ಲಿ ಸಿ-60 ಕಮಾಂಡೊ ಪೊಲೀಸರು ಮತ್ತು ನಕ್ಸಲೀಯರ ಮಧ್ಯೆ ಭಾರೀ ಗುಂಡಿನ ಚಕಮಕಿ