Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಬೆಂಗಳೂರು: ಅಕ್ರಮವಾಗಿ ರೆಮ್ ಡಿಸಿವಿರ್ ಔಷಧಿ ಮಾರಾಟ ನಡೆಸಿದ್ದ ಮೂವರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಬಸವೇಶ್ವರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು ಸಂಜೀವ್ ಕುಮಾರ್, ಪ್ರತೀಕ್ ಹಾಗೂ ಅಭಿಜಿತ್ ಬಂಧಿತರೆಂದು ಹೇಳಲಾಗಿದೆ. ಪೋಲೀಸರು ಈ ಕಾಳಸಂತೆ ವ್ಯಾಪಾರಿಗಳೊಂದಿಗೆ ರಹಸ್ಯ ಕಾರ್ಯಾಚರಣೆ ನಡೆಸಿ ರೆಮ್ ಡಿಸಿವಿರ್ ಔಷಧಿಗಾಗಿ ಬೇಡಿಕೆ ಇಡುತ್ತಿದ್ದತೆ  ಅವರು

ಪುಣೆ: ಖ್ಯಾತ ಮರಾಠಿ ನಟಿ ಸೊನಾಲಿ ಕುಲಕರ್ಣಿ ಮನೆಗೆ ಆಗಂತುಕನೋರ್ವ ನುಗ್ಗಿದ್ದು, ನಟಿಯ ತಂದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಮಹಾರಾಷ್ಟ್ರದ ಪುಣೆ ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಪುಣೆಯ ನಿಗ್ಡಿಯಲ್ಲಿರುವ ನಟಿ ಸೋನಾಲಿ ಕುಲಕರ್ಣಿ ಅವರ ಅಪಾರ್ಟ್ ಮೆಂಟ್

ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಶುರುವಾದ ಬೆನ್ನಲ್ಲೇ, ರಾಷ್ಟ್ರ ರಾಜಧಾನಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಶನಿವಾರ ಸಂಜೆಯಿಂದಲೇ ಹಲವು ಪ್ರಮುಖ ಬಿಜೆಪಿ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ. ಸೋಮವಾರ ಸಂಜೆ ದೆಹಲಿಗೆ ಬಂದಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಕರ್ನಾಟಕ ಭವನಕ್ಕೆ ಬಾರದೇ ಹೋಟೆಲ್‌ನಲ್ಲಿ ತಂಗಿದ್ದಾರೆ. ಪಕ್ಷದ

ಶ್ರೀನರಸಿ೦ಹ ಜಯ೦ತಿಯ ಪ್ರಯುಕ್ತ ಉಡುಪಿಯ ಶ್ರೀಕಾಣಿಯೂರು ಮಠದಲ್ಲಿ ಮ೦ಗಳವಾರದ೦ದು ನರಸಿ೦ಹ ಜಯ೦ತಿಯನ್ನು ಸರಳವಾಗಿ ಅದ್ದೂರಿಯಿ೦ದ ನೆರವೇರಿಸಲಾಯಿತು.ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಸಕಲ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಶ್ರೀ ನರಸಿ೦ಹ ದೇವರಿಗೆ ಕಲಶಾಭಿಷೇಕ,ಸೀಯಾಳಭಿಷೇಕದೊ೦ದಿಗೆ ಪ೦ಚಾಮೃತ ಅಭಿಷೇಕವನ್ನು ನೆರವೇರಿಸಿ ಪೂಜೆಯನ್ನು ನೆರವೇರಿಸಿದರು. ಕೊರೊನಾ ಲಾಕ್ ಡೌನ್ ಪ್ರಯುಕ್ತವಾಗಿ ಸಾ೦ಕೇತಿಕವಾಗಿ ಸರಳರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ವಿಶಾಖಪಟ್ಟಣಂ: ಆಂಧ್ರಪ್ರದೇಶ-ಒಡಿಶಾ ಗಡಿ ಸಿಲೇರು ನದಿಯಲ್ಲಿ 2 ದೋಣಿಗಳು ಮುಳುಗಡೆಯಾಗಿ ಓರ್ವ ಸಾವನ್ನಪ್ಪಿ 7 ಮಂದಿ ನಾಪತ್ತೆಯಾಗಿದ್ದಾರೆ. ದೋಣಿಗಳಲ್ಲಿದ್ದ  ಕೂಲಿ ಕಾರ್ಮಿಕರು ನೀರುಪಾಲಾಗಿದ್ದಾರೆ. ಮೂವರು ಈಜಿ ದಡ ಸೇರಿ ಸುರಕ್ಷಿತವಾಗಿದ್ದಾರೆ. ವರದಿಗಳ ಪ್ರಕಾರ, ವೈಜಾಗ್ ಏಜೆನ್ಸಿಯ ಎರಡು ದೋಣಿಗಳಲ್ಲಿ ಒಟ್ಟು 13 ಜನ ಪ್ರಯಾಣ ಮಾಡುತ್ತಿದ್ದರು. ಇವರೆಲ್ಲ ಹೈದರಾಬಾದ್‌ನಲ್ಲಿ ಕೂಲಿ‌ ಕೆಲಸ ಮಾಡುತ್ತಿದ್ದರು.

ಮಡಿಕೇರಿ: ಅಂತರರಾಜ್ಯ ಪ್ರಯಾಣಕ್ಕಾಗಿ ನಕಲಿ ಕೋವಿಡ್ ಟೆಸ್ಟ್ ವರದಿ ನೀಡುತ್ತಿದ್ದ ಪತ್ರಕರ್ತನನ್ನು ಮಡಿಕೇರಿ ಪೊಲಿಸರು ಬಂಧಿಸಿದ್ದಾರೆ. ವಿಜಯವಾಣಿ ಪಬ್ಲಿಕೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಅಬ್ದಲ್ ಅಜೀಜ್ ಎಂಬ ಪತ್ರಕರ್ತನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 420, 471ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೋವಿಡ್ ನೆಗಟಿವ್

ಬೆಂಗಳೂರು: ಕಳೆದ 48 ದಿನಗಳಲ್ಲಿ ಕೊರೋನಾ ಎರಡನೇ ಅಲೆಗೆ ನ್ಯಾಯಾಂಗದ 16 ಸಿಬ್ಬಂದಿ ಮತ್ತು 190 ವಕೀಲರು ಬಲಿಯಾಗಿರುವುದು ದುರಾದೃಷ್ಟಕರ ಎಂದು ಕರ್ನಾಟಕ ಹೈಕೋರ್ಟ್ ಬೇಸರ ವ್ಯಕ್ತ ಪಡಿಸಿದೆ. ಬೆಂಗಳೂರಿನ ಅಡ್ವೊಕೇಟ್ಸ್ ಅಸೋಸಿಯೇಷನ್ (ಎಎಬಿ) ಭಾನುವಾರ ಆಯೋಜಿಸಿದ್ದ ಮೂರನೇ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ, ಈ

ಭುವನೇಶ್ವರ/ಕೋಲ್ಕತ್ತಾ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಯಾಸ್ ಚಂಡಮಾರುತ ಪ್ರಭಾವ ತೀವ್ರಗೊಂಡಿದ್ದು, ಮೇ 26ರಂದು ಒಡಿಶಾ-ಪಶ್ಚಿಮ ಬಂಗಾಳ ತೀರವನ್ನು ದಾಟಿ  ತೀವ್ರ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಾಡಿದ್ದು ಬುಧವಾರ ಅಪರಾಹ್ನ ಹೊತ್ತಿಗೆ ಯಾಸ್ ಚಂಡಮಾರುತ ಒಡಿಶಾ ಪಶ್ಚಿಮ ಬಂಗಾಳ ತೀರದಲ್ಲಿ ಪ್ಯಾರದೀಪ್ ಮತ್ತು

ನವದೆಹಲಿ: ಮಹಾಮಾರಿ ಕೊರೋನಾ ಭೀಕರತೆ ಸೃಷ್ಟಿಸುತ್ತಿದ್ದು ದೇಶದಲ್ಲಿ ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಕುಟುಂಬದ ಸುರಕ್ಷೆಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ. ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಕಂಪನಿಯ ನೌಕರನ ಕುುಟಂಬಕ್ಕೆ ಮುಂದಿನ 60 ವರ್ಷದ ತನಕ ವೇತನ

ಬಡಜನರ ಕಣ್ಮಣಿ, ಕೊಡುಗೈದಾನಿ,ಎಲ್ಲರ ಮಿತ್ರ, ಯುವ ಮುಂದಾಳು , ಸಾರ್ವಜನಿಕ ಸೇವೆಯಲ್ಲಿ ಅಪಾರವಾದ ವಿಶ್ವಾಸ ಪಾತ್ರರಾಗಿದ್ದ ಹಾಗೂ ತೋನ್ಸೆ ಪಂಚಾಯತ್ ಉಪಾಧ್ಯಕ್ಷರಾಗಿದ್ದ ನಿತ್ಯಾನಂದ ಕೆಮ್ಮಣ್ಣು ಇಂದು (ಸೋಮವಾರ)ನಿಧನರಾದರು. ಈ ಹಿಂದೆ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಗ್ರಾಮದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಾ೦ಗ್ರೆಸ್ ಪಕ್ಷದ ನಾಯಕರಾಗಿದ್ದರೂ ಪಕ್ಷಭೇದವನ್ನು ದೂರವಿಟ್ಟು ಎಲ್ಲರನ್ನು