Log In
BREAKING NEWS >
ಮಂಗಳೂರು ಕಡಲ ತೀರದಲ್ಲಿ ಟೌಕ್ಟೇ ಚಂಡಮಾರುತ ಅಬ್ಬರಕ್ಕೆ ಸಿಲುಕಿದ್ದ 9 ಮಂದಿಯ ರಕ್ಷಣೆ: ನೌಕಾಪಡೆ ಸಿಬ್ಬಂದಿಗೆ ಮುಖ್ಯಮಂತ್ರಿ ಧನ್ಯವಾದ...

ನವದೆಹಲಿ: ಸೋಮವಾರ ಬೆಳಗ್ಗೆ ಬಂಧಿತರಾಗಿರುವ ಮೂವರು ಟಿಎಂಸಿ ನಾಯಕರು ಸೇರಿದಂತೆ 5 ಮಂದಿ ವಿರುದ್ಧ ನಾರದ ರಹಸ್ಯ ಕಾರ್ಯಾಚರಣೆ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಲಿದೆ. ರಾಜಕಾರಣಿಗಳು ಲಂಚ ತೆಗೆದುಕೊಳ್ಳುವುದು ಕ್ಯಾಮರಾದಲ್ಲಿ ಸೆರೆಯಾದ ಪ್ರಕರಣ ಇದಾಗಿದ್ದು, ಪಶ್ಚಿಮ ಬಂಗಾಳ ಸರ್ಕಾರದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈಗಾಗಲೇ ಸಿಬಿಐ ತೃಣಮೂಲ ಕಾಂಗ್ರೆಸ್ ನಾಯಕರಾದ ಫಿರಾದ್ ಹಕಿಮ್,

ಮುಂಬೈ: ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕುತಪ್ಪಿ ಸಂಚರಿಸಿದ ಘಟನೆ ವರದಿಯಾಗಿದೆ. ಟೌಕ್ಟೆ  ಚಂಡಮಾರುತ ಮೇ.17 ರಂದು ಸಂಜೆ ಗುಜರಾತ್ ನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನ  ಬಾಂಬೆ ಹೈ ಏರಿಯಾದ ಹೀರಾ ಆಯಿಲ್ ಫೀಲ್ಡ್ಸ್ ನಿಂದ ಬಾರ್ಜ್ P305 ದಿಕ್ಕಾಪಾಲಾಗಿದ್ದು, ಈ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಅಭಿವೃದ್ಧಿಪಡಿಸಿರುವ ಕೋವಿಡ್ ವಿರುದ್ಧ ರೋಗಿಗಳಿಗೆ ನೀಡುವ ಔಷಧಿ 2ಡಯಾಕ್ಸಿ-ಡಿ-ಗ್ಲೂಕೋಸ್ ನ್ನು ಸೋಮವಾರ ದೆಹಲಿಯಲ್ಲಿ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದರು. ಡಿಆರ್ ಡಿಒ ಅವರ ನೆರವಿನಿಂದ, ರಕ್ಷಣಾ ಸಚಿವರ ಸಹಕಾರದಿಂದ ಮೊದಲ ದೇಶೀಯ

ಮಂಗಳೂರು: ಟೌಕ್ಟೇ ಚಂಡಮಾರುತದ ಅಬ್ಬರದ ಅಲೆಗೆ ಸಿಲುಕಿ ಮಂಗಳೂರು ತೀರದ ಮೂಲ್ಕಿ ಬಳಿ ಕಲ್ಲುಬಂಡೆಯ ಪಕ್ಕ ದೋಣಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ 9 ಮಂದಿಯನ್ನು ಭಾರತೀಯ ನೌಕಾಪಡೆ ಸಿಬ್ಬಂದಿ ಸೋಮವಾರ ಬೆಳಗ್ಗೆ ರಕ್ಷಿಸಿದ್ದಾರೆ. ನೌಕಾಪಡೆಯ ಹೆಲಿಕಾಪ್ಟರ್ ಮತ್ತು ಹಡಗಿನ ನೆರವಿನಿಂದ ಸಿಕ್ಕಿಹಾಕಿಕೊಂಡಿದ್ದವರನ್ನು ಒಂದು ದಿನವಿಡೀ ಕಾರ್ಯಾಚರಣೆ ನಡೆಸಿ ಕಾಪಾಡಿದ್ದಾರೆ ಎಂದು ಕರ್ನಾಟಕ

ಕುಂದಾಪುರ, ಮೇ.17 : ಇತ್ತೀಚೆಗಷ್ಟೆ ಸಂಚಾರಕ್ಕಾಗಿ ತೆರೆಯಲಾದ ಫ್ಲೈಓವರ್‌‌ನಲ್ಲಿ ಇನ್ನೋವಾ ಕಾರೊಂದು ಪಲ್ಟಿಯಾಗಿ, ಮಹಿಳೆಯೊಬ್ಬರು ಮೃತಪಟ್ಟು ಚಾಲಕ ಸೇರಿದಂತೆ ಎಂಟು ಜನರು ಗಾಯಗೊಂಡ ಘಟನೆ ರವಿವಾರ ನಡೆದಿದೆ. ಸಾವನ್ನಪ್ಪಿದ ಮಹಿಳೆಯನ್ನು ಹಟ್ಟಿಕುದ್ರು ನಿವಾಸಿ ವಸಂತಿ (35) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಹಟ್ಟಿಕುದ್ರು ನಿವಾಸಿಗಳಾದ ರತ್ನಾಕರ ಪೂಜಾರಿ (54), ಶಾರದಾ (45), ಪ್ರೇಮಾ

ಕಾಪು ಮೇ.16: ಕಾಪು ಸಮೀಪದ ಕಾಣ ಬಳಿ ಟಗ್ ವೊಂದು ಕಲ್ಲಿಗೆ ಡಿಕ್ಕಿ ಹೊಡೆದು 9 ಜನ ಸಿಬ್ಬಂದಿಗಳು ಅಪಾಯದಲ್ಲಿರುವ ಘಟನೆ ‌ನಡೆದಿದೆ. ನವಮಂಗಳೂರು ಬಂದರಿನ ಹೊರವಲಯದಲ್ಲಿ ಮೂರಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋರಂಗಲ ಆಪರೇಷನ್ ಮೈನ್ ಟಗ್ ಇದಾಗಿದೆ. ಟಗ್ ನಲ್ಲಿ 9 ಮಂದಿ ಸಿಬ್ಬಂದಿ ಗಳು ಹಾಗೂ ಅಪಾರ

ಉಡುಪಿ: ವೈದ್ಯಕೀಯ ಆಮ್ಲಜನಕ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ದೇಶದ ಇತರ 9 ಸ್ಥಳಗಳಲ್ಲಿ ಆಮ್ಲಜನಕ ಘಟಕಗಳನ್ನು ನಿರ್ಮಿಸಲಾಗುವುದು ಎಂದು ಭಾರತೀಯ ಅನಿಲ ಪ್ರಾಧಿಕಾರ (ಜಿಎಐಎಲ್‍) ತಿಳಿಸಿದೆ. ಪ್ರೆಷರ್ ಸ್ವಿಂಗ್ ಅಡ್ಸಾರ್ಬ್‍ ಷನ್‍ (ಪಿಎಸ್‍ಎ) ವೈದ್ಯಕೀಯ ಆಮ್ಲಜನಕ ಸ್ಥಾವರ ನಿರ್ಮಾಣದ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.

ಕಾಸರಗೋಡು: ಜಿಲ್ಲೆಯಲ್ಲಿ ಗಾಳಿ ಮಳೆ ಇಂದೂ ಮುಂದುವರಿದಿದ್ದು, ಮಂಜೇಶ್ವರ ತಾಲೂಕಿನಲ್ಲಿ ಎರಡು ಮನೆಗಳು ಪೂರ್ಣವಾಗಿ, ನಾಲ್ಕು ಮನೆಗಳು ಭಾಗಶಃ ಹಾನಿಗೊಂಡಿದೆ. ಶಿರಿಯ ತೀರದ 23 ಕುಟುಂಬಗಳ 110 ಮಂದಿಯನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದ್ದು, ಕಾಸರಗೋಡು ತಾಲೂಕಿನ ಕಸಬಾ ಬೀಚ್ ಪರಿಸರದ ನಾಲ್ಕು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇನ್ನು ವೆಳ್ಳರಿಕುಂಡುವಿನಲ್ಲಿ ಒಂದು ಮನೆ ಹಾನಿ

ಬೆಂಗಳೂರು: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಜಿಲ್ಲೆ ನಲುಗಿ ಹೋಗಿದೆ. ಕಳೆದ 24 ಗಂಟೆಯಿಂದ ಮೂರು ಕರಾವಳಿ ಜಿಲ್ಲೆಗಳು ಮತ್ತು ಮೂರು ಮಲೆನಾಡು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ಮಳೆಯಾಗುತ್ತಿದೆ. ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಇದುವರೆಗೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 73 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ವಿಪತ್ತು

ನವದೆಹಲಿ: ತೌಕ್ತೆ  ಚಂಡಮಾರುತದ ಸುಳಿಗೆ ಸಿಲುಕಿರುವ ಭಾರತದ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ 100 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಿದೆ. ಹೌದು.. ಈ ಹಿಂದೆ ಚಂಡಮಾರುತದ ನಿರ್ವಹಣೆಗೆ ರವಾನಿಸಲಾಗಿರುವ ಎನ್ ಡಿಆರ್ಎಫ್ ತಂಡಗಳ ಪ್ರಮಾಣವನ್ನು ಇಮ್ಮಡಿಗೊಳಿಸಲಾಗಿದ್ದು, ಒಟ್ಟು 100 ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್, ಗೋವಾ ಮತ್ತು