Log In
BREAKING NEWS >
ಮುಂಬೈ: 61 ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ, 1 ಸಾವು, ಹಲವರು ಸಿಲುಕಿರುವ ಶಂಕೆ....

ನವದೆಹಲಿ: ಒಂದೇ ದಿನದಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಮತ್ತು ಇತರ ಎರಡು ಕೇಂದ್ರ ಪಡೆಗಳ 580 ಕ್ಕೂ ಹೆಚ್ಚು ಸಿಬ್ಬಂದಿ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ನೇಪಾಳ

ಬೆಂಗಳೂರು: ತರಬೇತಿ ನಿಮಿತ್ತ ಬೆಂಗಳೂರಿನಲ್ಲಿರುವ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ಏಳು ಮಂದಿ ಆಟಗಾರ್ತಿಯರ ಕೊರೋನಾ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್

ನವದೆಹಲಿ: ಮುಚ್ಚಲ್ಪಟ್ಟಿರುವ ತಮಿಳುನಾಡಿನ ಟುಟಿಕೋರಿನ್ ನಲ್ಲಿರುವ ವೇದಾಂತ ಆಕ್ಸಿಜನ್ ಪ್ಲಾಂಟ್ ಕಾರ್ಯ ನಿರ್ವಹಿಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ನೀಡಿದೆ. ಆಮ್ಲಜನಕಕ್ಕಾಗಿ ರಾಷ್ಟ್ರೀಯ ಅಗತ್ಯದ ದೃಷ್ಟಿಯಿಂದ ಈ ಆದೇಶವನ್ನು ನೀಡಿರುವುದಾಗಿ ಉನ್ನತ ನ್ಯಾಯಾಲಯ ತಿಳಿಸಿದೆ. ವೇದಾಂತ ಪ್ಲಾಂಟ್ ತಾಮ್ರ ಕರಗಿಸುವ ಘಟಕವನ್ನು ತೆರೆಯಲು ಮತ್ತು ಕಾರ್ಯನಿರ್ವಹಿಸಲು ಈ ಆದೇಶ ಅನುಮತಿಸಿಲ್ಲ ಎಂದು ಜಸ್ಟೀಸ್ ಡಿವೈ

ಮುಂಬೈ: ಕೋವಿಡ್-19 ನಿಂದ ಮೃತಪಟ್ಟ 22 ಮಂದಿಯ ಮೃತದೇಹವನ್ನು ಒಂದೇ ಆಂಬುಲೆನ್ಸ್ ನಲ್ಲಿ ಚಿತಾಗಾರಕ್ಕೆ ರವಾನೆ ಮಾಡಿರುವ ಘಟನೆ ಮಹಾರಾಷ್ಟ್ರದ ಬೀಡ್ ನಲ್ಲಿ ವರದಿಯಾಗಿದೆ. ವೈದ್ಯಕೀಯ ಸಾಗಣೆ ವಾಹನಗಳ ಕೊರತೆ ಇರುವುದರಿಂದ ಈ ರೀತಿಯಾಗಿದೆ ಎಂದು ಜಿಲ್ಲಾಡಳಿತ ಕಾರಣ ನೀಡಿದೆ. ಬೀಡ್ ನಲ್ಲಿರುವ ಅಂಬಜೋಗೈ ನ ಸ್ವಾಮಿ ರಮಾನಂದ ತೀರ್ಥ ಗ್ರಾಮೀಣ

ಉಡುಪಿ:ಕಳೆದ ಒ೦ದುವರುಷಗಳಿ೦ದ ಬೆತಾಳನ೦ತೆ ಬೆನ್ನತ್ತಿದ ಕೊರೋನಾವನ್ನು ತಡೆಗಟ್ಟಲು ಸರಕಾರವು ಲಾಕ್ ಡೌನ್ ಎ೦ಬ ಮಹಾಪದವನ್ನು ಬಳಕೆಮಾಡಿಕೊ೦ಡು ಕೊರೋನಾ ವಿರುದ್ಧ ಹೋರಾಟ ನಡೆಸಲು ಪಣ ತೊಟ್ಟಿದೆಯಾದರೂ ಕೊರೋನಕ್ಕೆ ಸರಕಾರದ ಯಾವ ಅಸ್ತ್ರ ಲೆಕ್ಕಿಲ್ಲದ೦ತಾಗಿದೆ. ಕಣ್ಣಿಗೆ ಕಾಣದ ಈ ವೈರಸ್ ಈಗಾಗಲೇ ಲಕ್ಷಾ೦ತರ ಜನಪ್ರಣವನ್ನು ತನ್ನ ಸುನಾಮಿ ಅಲೆಗೆ ಬಲಿಪಡೆದುಕೊ೦ಡಿದೆ.ಬಲಿಪಡೆಯುವ ಕೆಲಸವೂ ಇನ್ನೂ

ಸಿನಿಮಾ ಬಿಟ್ಟು ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸ್ಯಾಂಡಲ್ವುಡ್ ನ ಕ್ವೀನ್ ರಮ್ಯಾ ಇದೀಗ ಕೆಲ ವರ್ಷಗಳಿಂದ ರಾಜಕೀಯದಲ್ಲೂ ಹೆಚ್ಚಾಗಿ ಕಾಣಿಸುತ್ತಿಲ್ಲ. ಇದೇ ವಿಚಾರವಾಗಿ ಕೆಲ ಅಭಿಮಾನಿಗಳು ನಾನಾ ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆಲ್ಲಾ ರಮ್ಯಾ ಉತ್ತರ ನೀಡಿದ್ದಾರೆ. ನಿನ್ನೆ ಇನ್ ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ರಮ್ಯಾ, ಸದ್ಯಕ್ಕೆ ಸಿನಿಮಾ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಎರಡು ವಾರಗಳ ಕಾಲ ಕೊರೋನಾ ಕರ್ಫ್ಯೂ ಜಾರಿಗೊಳಿಸಿ ತೀರ್ಮಾನ ಕೈಗೊಂಡಿದೆ. ರಾಜ್ಯ ಸರ್ಕಾರದ ನಿರ್ಧಾರ ಹಿನ್ನಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೊಸ

ನವದೆಹಲಿ: ವಿಧಾನಸಭಾ ಚುನಾವಣೆ, ವಿವಿಧ ಲೋಕಸಭೆ ಉಪಚುನಾವಣೆ ನಡೆದ ರಾಜ್ಯಗಳಲ್ಲಿ ಮತ ಎಣಿಕೆ ದಿನದಂದು ಮತ ಎಣಿಕೆಗೆ ಮೊದಲು ಅಥವಾ ನಂತರ ಎಲ್ಲಾ ಬಗೆಯ ವಿಜಯೋತ್ಸವಗಳನ್ನು ನಿಷೇಧಿಸಿ ಚುನಾವಣಾ ಆಯೋಗ ಮಂಗಳವಾರ ಆದೇಶಿಸಿದೆ. ಕೊರೋನಾವೈರಸ್ ಹರಡುವಿಕೆ ತಪ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೇ 2 ರಂದು ಕರ್ನಾಟಕದ ಬೆಳಗಾವಿ

ಚೆನ್ನೈ: ಕೋವಿಡ್-19 ರ ಮಾರಕ ಎರಡನೇ ಅಲೆಯೊಂದಿಗೆ ದೇಶವು ಹೋರಾಡುತ್ತಿರುವಾಗಲೂ ರಾಜಕೀಯ ರ್ಯಾಲಿಗಳಿಗೆ ಅವಕಾಶ ನೀಡಿದ್ದ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ಬಲವಾಗಿ ಖಂಡಿಸಿದೆ.  ಅಲ್ಲದೆ ಜನರ ಸಾವಿಗೆ ಚುನಾವಣಾ ಆಯೋಗವೇ ಕಾರಣ. ಅದರ ವಿರುದ್ಧ ದೂರು ದಾಖಲಾಗಬೇಕು ಎಂದು ಹೇಳಿದೆ. ರ್ಯಾಲಿಗಳಲ್ಲಿ ಕೊರೋನಾ ನಿಯಮ

ಚಿತ್ರದುರ್ಗ: ಮಿನಿ ಟ್ರಕ್ ಪಲ್ಟಿಯಾಗಿ ಆರು ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮೃತರನ್ನು ಸೆಲ್ವಿ (35), ದೀಪಿಕಾ (6) ಮತ್ತು ನೀಲಮ್ಮ (29) ಎಂದು ಗುರುತಿಸಲಾಗಿದೆ. ಮೃತರೆಲ್ಲಾ ಗುತ್ತಿಗೆ ಕಾರ್ಮಿಕರಾಗಿದ್ದು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ ಎಂದು ಪೋಲೀಸರು