Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಚಿಕ್ಕಮಗಳೂರು: ಕಡೂರು-ಚಿಕ್ಕಮಗಳೂರು-ಮೂಡಿಗೆರೆಯಾದ್ಯಂತ ರಾಷ್ಟ್ರೀಯ ಹೆದ್ದಾರಿ-173 ಅಗಲೀಕರಣ ಕಾಮಗಾರಿ ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಬರೊಬ್ಬರಿ 3,455 ಮರಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಈ ಪೈಕಿ ಹಲವು ಪಾರಂಪರಿಕ ಸಾಲಿನ ಮರಗಳನ್ನೂ ನೆಲಸಮಗೊಳಿಸಲಾಗಿದೆ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 2,318 ಮರಗಳನ್ನು ಕಡಿಯಲಾಗಿದ್ದು, ಕಡೂರು ವ್ಯಾಪ್ತಿಯಲ್ಲಿ 1,137 ಮರಗಳು ಕೊಡಲಿಗೆ ಬಲಿಯಾಗಿವೆ. ಮರಗಳ ಮಾರಣಹೋಮಕ್ಕೆ ಬದಲಾಗಿ ಹೊಸ

ಮಂಗಳೂರು: ಕೊಲೆಗೆ ಸಂಚು ರೂಪಿಸುತ್ತಿದ್ದ ಪ್ರಕರಣವೊಂದನ್ನು ಬೇಧಿಸಿದ ಮಂಗಳೂರು ನಗರ ಪೊಲೀಸರು, ಅಂತರ ರಾಜ್ಯ ಗ್ಯಾಂಗ್ ನ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ರೌಡಿ-ಶೀಟರ್ ಸಹಾಯದಿಂದ ಕೊಲೆ ಸಂಚು ರೂಪಿಸಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ತಿಳಿಸಿದ್ದಾರೆ. ಈ ಆರೋಪಿಗಳ

ಕಾಪು:ಉಡುಪಿಯ ಕರಾವಳಿಯ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒ೦ದಾದ ಕಾಪು ಶ್ರೀಹೊಸಮಾರಿಗುಡಿ ಅಮ್ಮನವರ ದೇವಾಲಯದ ನೂತನ ಕಟ್ಟಡಕ್ಕೆ ಸುಗ್ಗಿ ಮಾರಿಪೂಜೆಯ ದಿನವಾದ ಮ೦ಗಳವಾರದ೦ದು ಅದ್ದೂರಿಯ ಶಿಲಾ ಸಮರ್ಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ರವರು ಸೇರಿದ೦ತೆ ಶಾಸಕರು,ಶ್ರೀಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಲಾಲಾಜಿ ಮೆ೦ಡನ್,ಪುರಸಭಾ ಅಧ್ಯಕ್ಷರಾದ ಅನಿಲ್

ಮಾ.23: ಡಾ| ಎಸ್. ಎಲ್. ಕಾರ್ಣಿಕ್ ಅವರು ಸಸ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿ ನಂತರ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾಗಿ ಕಾಲೇಜನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಅದೇ ರೀತಿಯಲ್ಲಿ ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ನಲ್ಲಿ ಸುಮಾರು 15 ವರ್ಷಗಳಿಗಿಂತಲೂ ಹೆಚ್ಚು ಕಾಲ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇಂದು ಹರಿಪಾದಗೈದ ಡಾ|

ಉಡುಪಿ: ಬಿಜೆಪಿ ಉಡುಪಿ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ನೂತನ ಅಧ್ಯಕ್ಷೆಯಾಗಿ ಸುನೀತ ಡಿ’ಸೋಜ ಯ್ಕೆಯಾದರು. ಬ್ರಹ್ಮಾವರ ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್ ಅಧ್ಯಕ್ಷತೆಯಲ್ಲಿ ಪದಗ್ರಹಣ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಲ್ವಿನ್ ಡಿ’ಸೋಜಾ ಉದ್ಘಾಟಿಸಿದರು. ಸುನೀತ ಡಿ’ಸೋಜ ಅವರಿಗೆ ಪಕ್ಷದ

ನವದೆಹಲಿ : ಭಾರತೀಯ ಸಂಸತ್ತಿನಲ್ಲಿ ಚರ್ಚೆ ನಡೆದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಅವರಿಗೆ ಬೆದರಿಕೆ ಹಾಕಲಾದ ವಿಚಾರದ ಬಗ್ಗೆ ಯುಕೆ ಪೊಲೀಸರು ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುಕ್ತ ತನಿಖೆ ಆರಂಭಿಸಿದೆ. ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ (ಎಸ್‌ಯು) ಅಧ್ಯಕ್ಷರಾಗಿ ಇತ್ತೀಚೆಗೆಷ್ಟೇ ಆಯ್ಕೆಯಾದ ಮಣಿಪಾಲ ಮೂಲದ ರಶ್ಮಿ

ಮಾಲಿ‌, : ಪಶ್ಚಿಮ ಆಫ್ರಿಕಾ ಭಾಗದಲ್ಲಿರುವ ನೈಜರ್‌ ದೇಶದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಮೂರು ಗಂಟೆಗಳಲ್ಲಿ 137 ಮಂದಿಯನ್ನು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಸಾಂದರ್ಭಿಕ ಚಿತ್ರ ಅಲ್ಲದೇ, ಅಲ್ಲಿನ ಮನೆಗಳಿಗೆ ಬೆಂಕಿ ಹಚ್ಚಿದ್ದು, ಜನಸಮೂಹದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ

ಚಂಡೀಗಢ: ಜೆನೋಮ್(ವಂಶವಾಹಿನಿ) ಪರೀಕ್ಷೆಗೆ ಪಂಜಾಬ್ ಕಳುಹಿಸಿದ 401 ಮಾದರಿಗಳ ಪೈಕಿ ಶೇ.81 ರಷ್ಟು ಮಂದಿಗೆ ಬ್ರಿಟನ್ ರೂಪಾಂತರಿ ಕೊರೋನಾ ದೃಢಪಟ್ಟಿದೆ. ಪಂಜಾಬ್ ಸರ್ಕಾರ ಜನವರಿ 1 ಮತ್ತು ಮಾರ್ಚ್ 10 ರ ನಡುವೆ ಸಂಗ್ರಹಿಸಲಾದ 401 ಮಾದರಿಗಳನ್ನು ಎನ್‌ಸಿಡಿಸಿಗೆ ಜೆನೋಮ್ ಪರೀಕ್ಷೆಗಾಗಿ ಕಳುಹಿಸಿತ್ತು. ಈ ಪೈಕಿ 326 ಮಾದರಿಗಳಲ್ಲಿ ಬ್ರಿಟನ್ ರೂಪಾಂತರ

ನವದೆಹಲಿ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಪತ್ರ ಸೋಮವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು. ಇಂದು ಲೋಕಸಭೆಯಲ್ಲಿ ಶಿವಸೇನೆ ಹಾಗೂ ಎನ್ ಸಿಪಿಯ ಪ್ರತಿಭಟನೆ ನಡುವೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಮನೋಜ್

ಚಿತ್ರದುರ್ಗ: ಕ್ಯಾಂಟರ್, ಟಾಟಾ ಸಫಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪದ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದೆ. ಟಾಟಾ ಸಫಾರಿಯಲ್ಲಿ ಪ್ರಯಾಣಿಸುತ್ತಿದ್ದ ಹೊಸದುರ್ಗದ ನೇಮಿರಾಜ್ (58), ಅವರ ಪತ್ನಿ ನಂದಾ (53) ಹಾಗೂ ಕ್ಯಾಂಟರ್