Log In
BREAKING NEWS >
ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ......ಪರ್ಯಾಯ ಪ೦ಚಶತಮಾನೋತ್ಸವ-ಪರ್ಯಾಯದ ಮೆರವಣಿಗೆಯನ್ನು ನೆನಪಿಸುವ ಮೆರವಣಿಗೆಗೆ ರಾಜ್ಯ ವಿಧಾನ ಸಭಾ ಸ್ವೀಕರ್ ರವರಿ೦ದ ಬಣ್ಣದ ಕೊಡೆ ಅರಳಿಸಿ ಚಾಲನೆ....

ಉಡುಪಿ:ಶ್ರೀ ವಾದಿರಾಜ ಶ್ರೀಪಾದರಿಂದ ಪ್ರಾರಂಭಿಸಲ್ಪಟ್ಟ ದ್ವೈವಾರ್ಷಿಕ ಪರ್ಯಾಯದ ಪಂಚಶತಮಾನೋತ್ಸವ ಕಾರ್ಯಕ್ರಮವು ನಮ್ಮ ಪರ್ಯಾಯಾವಧಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯ. ದಿನಾಂಕ: 16-01-2021 ಶನಿವಾರದಿಂದ ದಿ.: 23-01-2021 ಶನಿವಾರದ ತನಕ ನಡೆಯುವ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಧಾರ್ಮಿಕ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಭಿನ್ನ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಸಾಧನೆಗೈದ

ಉಡುಪಿ:ಶ್ರೀಕೃಷ್ಣ ಮಠದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಂಕಲ್ಪದಂತೆ 50 ಲಕ್ಷ ರೂಪಾಯಿ ವೆಚ್ಚದ 2.5 ಕೆ.ಜಿ ಚಿನ್ನದಿಂದ ನಿರ್ಮಿಸಿದ "ಸುವರ್ಣ ಛತ್ರ"ವನ್ನು ಅಷ್ಟಮಠಾಧೀಶರೊಡಗೂಡಿ ಪರ್ಯಾಯ ಶ್ರೀಪಾದರು ಮಕರ ಸಂಕ್ರಮಣದ ಪರ್ವಕಾಲವಾದ ಗುರುವಾರದ೦ದು(ಇಂದು) ಶ್ರೀಕೃಷ್ಣ ದೇವರಿಗೆ ಅರ್ಪಿಸಿದರು.

ಬೆಂಗಳೂರು: ಹಿರಿಯ ಶಾಸಕ ಉಮೇಶ್ ಕತ್ತಿ, ಸಿಪಿ ಯೋಗೇಶ್ವರ್, ಎಂಟಿಬಿ ನಾಗರಾಜ್ ಸೇರಿದಂತೆ ನೂತನವಾಗಿ ಏಳು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅದರಂತೆ ನೂತನ ಸಚಿವರಾಗಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್

ಚೆನ್ನೈ: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆ ವಿಕೆ ಶಶಿಕಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಇದೇ ಜನವರಿ 27ರಂದು ಬೆಂಗಳೂರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಅವರನ್ನು ತಮಿಳುನಾಡು ಮಾಜಿ ಸಚಿವೆ ಎಸ್.ಗೋಕುಲ ಇಂದಿರಾ ಹೊಗಳಿದ್ದಾರೆ. ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿ ಉದಯಾನಿಧಿ ಸ್ಟಾಲಿನ್ ಅವರ ಹೇಳಿಕೆ

ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಜನವರಿ ೨೮ ರಿಂದ ಫೆಬ್ರವರಿ ೫ ರವರೆಗೆ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ತೀರ್ಮಾನಿಸಿದೆ. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಂಪ್ರದಾಯದಂತೆ

ಇ೦ದು ಏಳ್ಳು ಅ೦ದರೆ ಏಳು ಅಮವಾಸೆಗಳು ಇ೦ದು ಒ೦ದೆ ದಿನದಲ್ಲಿ ಬರುವುದರಿ೦ದಾಗಿ ಇ೦ದು ಸಾವಿರಾರುಮ೦ದಿ ಸಮುದ್ರ ಸ್ನಾನಮಾಡಿದರು ತಮ್ಮ ತಮ್ಮ ದೇಹದಲ್ಲಿರುವ ಚರ್ಮರೋಗ ಇನ್ನಿತರ ದೋಷಗಳಿಗೆ ಮೋಕ್ಷಸಾಧನೆ ಇ೦ದು ಒಳ್ಳೆಯ ದಿನವಾಗಿದೆ. ಕೆಲವರು ಇ೦ದು ತಮ್ಮ ತಮ್ಮ ಪಿತೃಗಳಿಗೆ ತರ್ಪಣವನ್ನು ಸಮರ್ಪಿಸಿದರು.

ಮಧುಬನಿ: ಮೂಕ ಹಾಗೂ ಕಿವಿ ಕೇಳದ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕಣ್ಣಿಗೆ ಹರಿತವಾದ ಆಯುಧದಿಂದ ಹಾನಿ ಮಾಡಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಆಕೆಯ ಎರಡು ಕಣ್ಣುಗಳಿಗೂ ಹಾನಿಯಾಗಿದೆ, ಆದರೆ ಆಕೆ ಸಂಪೂರ್ಣವಾಗಿ ದೃಷ್ಠಿ ಕಳೆದುಕೊಂಡಿದ್ದಾಳೆಯೇ ಎಂಬ ಬಗ್ಗೆ ಇನ್ನೂ ತಿಳಿದಿಲ್ಲ,  ವೈದ್ಯರು

ನವದೆಹಲಿ: ಸೂಕ್ಷ್ಮ ವಲಯಗಳನ್ನು ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನವರಿ 31ರ ಹೊತ್ತಿಗೆ ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಂಡ ಅಂಗನವಾಡಿಗಳ ಕಾರ್ಯನಿರ್ವಹಣೆ ಇನ್ನೂ ಆರಂಭಗೊಂಡಿಲ್ಲ. ಈ ತಿಂಗಳ ಆರಂಭದಲ್ಲಿ ಶಾಲಾ

ರಾಯ್ ಪುರ: ಚತ್ತೀಸ್ ಘಡದಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಭೀಕರ ಎನ್ಕೌಂಟರ್ ನಡೆದಿದ್ದು, ಈ ಘಟನೆಯಲ್ಲಿ ಕುಖ್ಯಾತ ಮಾವೋ ನಾಯಕನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಚತ್ತೀಸ್ ಘಡದ ದಾಂತೇವಾಡದಲ್ಲಿ ಈ ಘಟನೆ ನಡೆದಿದ್ದು, ಮಾವೋವಾದಿಗಳ ಇರುವಿಕೆ ಕುರಿತು ಖಚಿತ ಮಾಹಿತಿ ಪಡೆದ ಸಿಎಎಫ್ ನ 17ನೇ ಬೆಟಾಲಿಯನ್

ಉಡುಪಿಯ ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸ೦ಘದ 3ನೇ ವಾರ್ಷಿಕೋತ್ಸವ ಮ೦ಗಳವಾರದ೦ದು ಉಡುಪಿಯ ಶ್ರೀಕೃಷ್ಣಮಠದ ಪಾರ್ಕಿ೦ಗ್ ಪೇಲ್ಸ್ ಬಳಿಯಲ್ಲಿನ ಹೊಟೇಲ್ ಮಥುರಾ ಕ೦ಫರ್ಟ್ ನಲ್ಲಿ ಅದ್ದೂರಿಯಾಗಿ ಜರಗಿತು. 3ನೇ ವಾರ್ಷಿಕೋತ್ಸವದ ಉದ್ಘಾಟನೆಯನ್ನು ಉಡುಪಿಯ ಡಿವೈಎಸ್ಪಿ ಯವರಾದ ಜೈಶ೦ಕರ್ ದೀಪವನ್ನು ಬೆಳಕಿಸಿ ಶುಭಹಾರೈಸಿದರು. ಸಮಾರ೦ಭದ ಅಧ್ಯಕ್ಷತೆಯನ್ನು ಉಡುಪಿಯ ಖ್ಯಾತ ಬಿಲ್ಡರ್ ಜೆರ್ರಿವಿನ್ಸೆ೦ಟ್