Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಬದೌನ್(ಉತ್ತರ ಪ್ರದೇಶ): ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಭಯಾನಕ ನೆನಪುಗಳನ್ನು ಮರಳಿ ತರುವ ಪ್ರಕರಣವೊಂದರಲ್ಲಿ, ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಘೈತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೇವಾಲಿ ಗ್ರಾಮದಲ್ಲಿ ಭಾನುವಾರ ಈ

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇದೇ 11ರಂದು ಕೈಗೆತ್ತಿಕೊಳ್ಳಲಿದೆ. ಅವುಗಳಲ್ಲಿ ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಸಂಬಂಧಪಟ್ಟ ಅರ್ಜಿಗಳು ಕೂಡ ಸೇರಿವೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡು, ರೈತರ ಪ್ರತಿಭಟನೆಯಲ್ಲಿ ಯಾವುದೇ

ನವದೆಹಲಿ: ಭಾರತ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಸಂಶೋಧಿಸಿರುವ ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (Medium-Range Surface-to-Air Missile-MRSAM) ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಭಾರತ ಮತ್ತು ಇಸ್ರೇಲ್‌ಗಳು ಕಳೆದ ವಾರ ಮಧ್ಯಮ ಪ್ರಮಾಣದ ಭೂಮಿಯಿಂದ ವಾಯುವಿಗೆ ಚಿಮ್ಮುವ ಕ್ಷಿಪಣಿ (ಎಂಆರ್‌ಎಸ್‌ಎಎಂ) ರಕ್ಷಣಾ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ

ಬೆಂಗಳೂರು:  ನಗರದ ಕೆ ಆರ್ ಮಾರುಕಟ್ಟೆ ಬಳಿಯಿರುವ ಜಲಕಂಟೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತನ ಕಲ್ಲಿನ ವಿಗ್ರಹಗಳು, ಕೊಳ ಪತ್ತೆಯಾಗಿದ್ದು, ಪುರತಾತ್ವ ಇಲಾಖೆಯಿಂದ ಹೆಚ್ಚಿನ ಪರಿಶೀಲನೆ ನಡೆಸಿ ಮುಂದಿನ ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಉದಯ್ ಗರುಡಾಚಾರ್ ಹೇಳಿದ್ದಾರೆ. ಕೋಟೆ ಶಾಲೆಯ ಬಳಿ

 ಉಡುಪಿಯ ಶ್ರೀಕೃಷ್ಣಮಠದಲ್ಲಿ ಪ್ರತಿವರ್ಷದ ವಾಡಿಕೆಯ೦ತೆ ನಡೆಯುವ ಸಪ್ತೋತ್ಸವವು ಈ ಬಾರಿ ಜನವರಿ 9ರಿ೦ದ ಆರ೦ಭಗೊಳ್ಳಲಿದೆ.ರಥೋತ್ಸವಕ್ಕೆ ಈಗಾಗಲೇ ಭರದ ಸಿದ್ದತೆಯನ್ನು ನಡೆಸಲಾಗುತ್ತಿದೆ.ಈಗಾಗಲೇ ಚಿಕ್ಕರಥ ಹಾಗೂ ಹದರಥವನ್ನು ನಿರ್ಮಿಸಲಾಗಿದ್ದು ಹಲವು ಉತ್ಸವಗಳು ನಡೆದಿದೆಯಾದರೂ ಬ್ರಹ್ಮರಥೋತ್ಸವವು ಮಕರಸ೦ಕ್ರಮಣದ೦ದು ನಡೆಯಲಿರುವುದರಿ೦ದ ರಥಕಟ್ಟುವ ಕೆಲಸವು ಭರದಿ೦ದ ನಡೆಯುತ್ತಿದೆ. ಈ ಬಾರಿಯ ರಥೋತ್ಸವಕ್ಕೆ ಪರ್ಯಾಯದ ಸ೦ದರ್ಭದಲ್ಲಿ ಮಾಡಲ್ಪಟ್ಟ೦ತೆ ರಥಬೀದಿಯನ್ನು

ಉಡುಪಿ: ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆಯಲ್ಲೇ ಹೃದಯಾಘಾತವಾಗಿ ಕಲಾವಿದನೊಬ್ಬ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದ ಶಿರಿಯಾರದಲ್ಲಿರುವ ಕಾಜ್ರಲ್ಲಿ ಸಮೀಪದ ಕಲ್ಕಟ್ಟೆಯಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ನಡೆದ ಘಟನೆಯಲ್ಲಿ ಮಂದರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಅಸುನೀಗಿದ್ದಾರೆ. 'ಮಹಾಕಲಿ ಮಗಧೇಂದ್ರ' ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ

ಸೇಡಂ: ಸೇಡಂ ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ (88) ನಿಧನರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಶಾಸಕ ಬಸವಂತರೆಡ್ಡಿ ನಿನ್ನೆ (ಜನವರಿ ೪) ಸಂಜೆ ಸೇಡಂನ ಮೋತಕಪಲ್ಲಿ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೋತಕಪಲ್ಲಿ ಗ್ರಾಮದ ಬಸವಂತರೆಡ್ಡಿ 1989 ಹಾಗೂ 1999 ಎರಡು ಬಾರಿ ಸೇಡಂ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿದ್ದರು. 1978 ರಲ್ಲಿ ರಾಜಕೀಯ ಪ್ರವೇಶ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಲೋಕಾರ್ಪಣೆಗೊಳಿಸಿದ್ದಾರೆ. ನೈಸರ್ಗಿಕ ಅನಿಲ ಪೈಪ್ಲೈನ್ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿರುವ ಪ್ರಧಾನಿ ಮೋದಿಯವರು, 450 ಕಿ.ಮೀ ಉದ್ದದ ನೈಸರ್ಗಿಕ ಪೈಪ್‌ಲೈನ್ ಅನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡುತ್ತಿರುವುದು ಗೌರವದ ವಿಚಾರ. ಇದು ಭಾರತಕ್ಕೆ, ವಿಶೇಷವಾಗಿ

ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಡಿಡಿಎ ಕಾಯ್ದೆಯಡಿ ಅಧಿಕಾರವನ್ನು ಚಲಾಯಿುಸುವುದು ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪರಿಸರ ಸಚಿವಾಲಯದ ಅನುಮತಿಯ ಶಿಫಾರಸುಗಳು ಮಾನ್ಯವಾಗಿದ್ದು ಸೂಕ್ತವಾಗಿದೆ. ನಾವು ಅದನ್ನು ಎತ್ತಿಹಿಡಿಯುತ್ತೇವೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ನಿರ್ಮಾಣ ಕಾಮಗಾರಿ ಆರಂಭಿಸಲು ಪರಂಪರಾ ಸಂರಕ್ಷಣಾ

ಶಿಮ್ಲಾ: ಉತ್ತರ ಭಾರತದಲ್ಲಿ ಹಕ್ಕಿಜ್ವರ ತೀವ್ರಗೊಂಡಿದ್ದು, ವಿವಿಧ ದೇಶಗಳಿಂದ ಹಿಮಾಚಲ ಪ್ರದೇಶಕ್ಕೆ ಬಂದಿದ್ದ ಸಾವಿರಾರು ವಲಸೆ ಪಕ್ಷಿಗಳು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿವೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿರುವ ಪಾಂಗ್ ಡ್ಯಾಮ್‌ ನದಿಯ ಸುತ್ತಮುತ್ತ 1800ಕ್ಕೂ ಅಧಿಕ ವಲಸೆಗಳು ಮೃತಪಟ್ಟಿದ್ದು,. ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ