Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಇ೦ದು ದೇಶದೆಲ್ಲೆಡೆಯಲ್ಲಿ ಪುಟ್ಟಮಕ್ಕಳಿಗೆ ಪಲ್ಸ್ ಪೊಲಿಯೋ ಡ್ರಾಪ್ಸ್ ಹಾಕುವ ಕಾರ್ಯಕ್ರಮವು ಜರಗಿತು.ಲಕ್ಷಾ೦ತರ ಮಕ್ಕಳು ಇ೦ದು ಪಲ್ಸ್ ಪೊಲಿಯೋ ಡ್ರಾಪ್ಸ್ ಹಾಕಿಸಿಕೊ೦ಡರು.ಕೆಮ್ಮಣ್ಣು ಪ೦ಚಾಯತ್ ಸದಸ್ಯರಾದ ನಿತ್ಯಾನ೦ದ ಕೆಮ್ಮಣ್ಣುರವರು ಮುದ್ದುಮಕ್ಕಳಿಗೆ ಪಲ್ಸ್ ಪೊಲಿಯೋ ಡ್ರಾಪ್ಸ್ ವಿತರಿಸಿದರು.

ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದು ‌ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಿನ್ನೆ ಮಧ್ಯ ರಾತ್ರಿ ಬಾಗಲೂರು-ಕಣ್ಣೂರು ರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಬಾಗಲೂರಿನ ಶಿವು (26), ಮಿಲನ್(25) ಹಾಗೂ ಸಾತನೂರಿನ ಮಧು(26) ಮೃತ ವ್ಯಕ್ತಿಗಳು. ಅಪಘಾತದಲ್ಲಿ ಗಾಯಗೊಂಡ ಅನೂಷಾ ಅವರನ್ನು ಖಾಸಗಿ ಆಸ್ಪತ್ರೆಗೆ

ನವದೆಹಲಿ: ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುತ್ತಿದ್ದು, ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕಾದ ಅಪಮಾನಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 2021ರ ಮೊದಲ ತಿಂಗಳು ಮುಗಿಯುತ್ತಿದೆ. ಈ ತಿಂಗಳಿನಲ್ಲಿ ನಾವು ಹಲವು ಹಬ್ಬಗಳನ್ನು ಆಚರಿಸಿದ್ದೇವೆ. ಜನವರಿ 26ರ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜದ ಅಪಮಾನಕ್ಕೆ ಸಾಕ್ಷಿಯಾದ

ಗಾಜಿಯಾಬಾದ್‌: ಕೃಷಿ ಕಾನೂನುಗಳ ರದ್ದು ಏಕೆ ಸಾಧ್ಯವಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ರೈತರಿಗೆ ತಿಳಿಸಲಿ ಎಂದು ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ವಕ್ತಾರ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. ರೈತರನ್ನು ಉದ್ದೇಶಿಸಿ ಮಾತನಾಡಿ ರಾಕೇಶ್ ಟಿಕಾಯತ್, ರೈತರು ಗಾಂಧಿವಾದಿ ಅಹಿಂಸೆಯ ತತ್ವವನ್ನು ನಂಬುತ್ತಾರೆ ಮತ್ತು ಸಂವಿಧಾನದ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ ಎಂದ

ಮಂಗಳೂರು: ಕರ್ತವ್ಯದ ವೇಳೆ ಬಾರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆರೋಪಿಯೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ 8 ಮಂದಿ ಪೊಲೀಸರನ್ನು ಮಂಗಳೂರು ಸಿಸಿಬಿ ಎತ್ತಂಗಡಿ ಮಾಡಿದೆ. ಮೂರು ಎಎಸ್ಐ ಗಳು ಮತ್ತು ಐದು ಮಂದಿ ಮುಖ್ಯ ಪೇದೆಗಳನ್ನು ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್​ ಆಯುಕ್ತ ಶಶಿಕುಮಾರ್ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ

ನವದೆಹಲಿ: ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಬಗ್ಗದೇ ದೆಹಲಿ ಗಡಿಯಲ್ಲಿ ಅಂತರ್ಜಾಲ ಸ್ಥಗಿತ ಮತ್ತೆ ಎರಡು ದಿನ ವಿಸ್ತರಣೆ ಮಾಡಿದೆ. ರೈತರನ್ನು ಪ್ರತಿಭಟನಾ ನಿರತ ಸ್ಥಳದಿಂದ ತೆರವುಗೊಳಿಸಲು ಸರ್ಕಾರ ಮುಂದಾಗಿದ್ದು, ಪ್ರತಿಭಟನಾ ನಿರತರು ಇರುವ ಸ್ಥಳದಲ್ಲಿ ನೀರು ಹಾಗೂ ಅಂತರ್ಜಾಲ ಸೌಲಭ್ಯವನ್ನು ಸ್ಥಗಿತಗೊಳಿಸಿತ್ತು. ಈ ಬೆನ್ನಲ್ಲೇ ರೈತರೂ ಸಹ ಕೇಂದ್ರ ಸರ್ಕಾರಕ್ಕೆ ಅಂತರ್ಜಾಲ

ಬೆಂಗಳೂರು: ಈಗ ತಾನೆ ಜೈಲಿನಿಂದ ಹೊರಬಂದಿದ್ದೇನೆ. ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಕೊಡಿ, ನಂತರ ಒಂದಿಷ್ಟು ವಿಚಾರವನ್ನು ಹಂಚಿಕೊಳ್ಳುತ್ತೇನೆ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಜೈಲಿನಿಂದ ಹೊರಬಂದಿರುವ ರಾಗಿಣಿ ದ್ವಿವೇದಿ ಇಂದು ಸಿಟಿ ಸಿವಿಲ್ ಕೋರ್ಟ್ ನ ಎನ್ ಡಿಪಿಎಸ್ ಕೋರ್ಟ್ ಗೆ ಹಾಜರಾದರು.

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 73ನೇ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ಸ್ಮರಿಸುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ ಶಾಂತಿ, ಅಹಿಂಸೆ, ಸರಳ, ಶುದ್ಧ, ಮಾನವೀಯತೆಯ ಜೀವನ ಮತ್ತು ಸಂದೇಶಗಳು ದಾರಿದೀಪ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ. ಬಾಪು ಅವರ ಪುಣ್ಯತಿಥಿಯಂದು

ಲಕ್ನೊ: ಉತ್ತರ ಪ್ರದೇಶದ ಮೊರದಾಬಾದ್-ಆಗ್ರಾ ಹೆದ್ದಾರಿಯ ಕುಂಡರ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಿನಿ ಬಸ್ ಮತ್ತು ಕ್ಯಾಂಟರ್ ಟ್ರಕ್ ಮಧ್ಯೆ ಢಿಕ್ಕಿ ಸಂಭವಿಸಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು 10 ಮಂದಿಗೆ ಗಾಯವಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ

ನವದೆಹಲಿ: ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಭಾಗದಲ್ಲಿ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದ್ದು, ಪುನಃ ಸಂಪರ್ಕ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ದೆಹಲಿ-ಎನ್ ಸಿಆರ್ ಭಾಗಗಳಲ್ಲಿ ಕೇಂದ್ರ ಸರ್ಕಾರ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿತ್ತು. ಈ ಕ್ರಮವನ್ನು ವಿರೋಧಿಸಿರುವ ರೈತರ ಸಂಘಟನೆಯಾಗಿರುವ ಕ್ರಾಂತಿಕಾರಿ ಕಿಸಾನ್ ಸಂಘಟನೆಯಾಗಿರುವ ದರ್ಶಲ್ ಪಾಲ್