Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸ೦ಭ್ರಮದ ಲಕ್ಷದೀಪೋತ್ಸವ... ........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಉಡುಪಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿನ ಬೈಲೂರಿನಲ್ಲಿ ಹೆದ್ದಾರಿಯ ಪಕ್ಕದಲ್ಲಿರುವ ಮರಗಳಿಗೆ ರಿಬ್ಬನ್ ನಿ೦ದ ಕಟ್ಟಲಾಗಿದೆ. ಅದರೆ ಇದು ವಾಹನ ಚಾಲಕರಿಗೆ ಅಪಾಯದ ತಿರುವು ಎ೦ವ ಸೂಚನೆಯೋ ಅಥವಾ ಮು೦ದಿನ ದಿನಗಳಲ್ಲಿ ಕೊಡಲಿ ಏಟಿಗೆ ಬಲಿಪಡೆದುಕೊಳ್ಳುವ ಮರಗಳೆ೦ಬ ಸೂಚನೆಯೋ ಎ೦ಬುವುದು ಸ೦ಶಯಕ್ಕೆ ಎಡೆಮಾಡಿಕೊಟ್ಟಿದೆ. ಅರಣ್ಯ ಇಲಾಖೆಯು ಈ ಬಗ್ಗೆ ತಕ್ಷಣವೇ ಈ ಮರಗಳನ್ನು

ಮಂಗಳೂರು: ಮೀನು ಸಾಗಾಟ ಮಾಡುವ ವಾಹನದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಗುಂಪನ್ನು ಇಂದು ಬೆಳಿಗ್ಗೆ ಮಂಗಳೂರಿನ ಪಂಪ್ ವೆಲ್ ಬಳಿ ವಶಕ್ಕೆ ಪಡೆಯಲಾಗಿದೆ. ಟ್ರಕ್ ನಲ್ಲಿ ಗೋ ಮಾಂಸವನ್ನು ಸಾಗಾಟ ಮಾಡಲಾಗುತ್ತಿತ್ತು. ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ಟ್ರಕ್ ನ್ನು ಬಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿ ಕಂಕನಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದ ಹೈದರಾಬಾದ್ ನಗರದ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚರಿಸದಂತಾಗಿದೆ. ಹೈದರಾಬಾದ್ ನ ಕೆಲವು ಪ್ರದೇಶಗಳಲ್ಲಿ ಶನಿವಾರ ಸಂಜೆ 150 ಮಿ.ಮೀ ಗೂ ಹೆಚ್ಚಿನ ಮಳೆಯಾಗಿದೆ. ಪ್ರವಾಹದ ಹೊಡೆತಕ್ಕೆ ಸಿಲುಕಿ ಶನಿವಾರ

ಬೆಂಗಳೂರು: ದೇಶಕ್ಕೆ ಚಿನ್ನ ಕಳ್ಳಸಾಗಣೆ ಮಾಡುವ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ ವೇಳೆ ವಶಪಡಿಸಿಕೊಳ್ಳಲಾಗಿದ್ದ 2.5 ಕೆಜಿ ಚಿನ್ನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೊ ವಿಭಾಗದ ಗೋದಾಮಿನಿಂದ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಎಸಿಬಿ ಘಟಕದಲ್ಲಿ ದೂರು ದಾಖಲಾಗಿದೆ. ಕಸ್ಟಮ್ಸ್ ಜಂಟಿ ಆಯುಕ್ತ ಎಂ.ಜೆ.ಚೇತನ್

ಬೆಂಗಳೂರು: ಭೀಮಾ ನದಿ ಪ್ರವಾಹದಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಸೂರ್ಯ ನಗರಿ ಕಲಬುರಗಿಯ ಜನತೆಯ ಸಂರಕ್ಷಣೆಗೆ ಸೇನಾ ಪಡೆ ಬಂದಿಳಿದಿದೆ. ಪ್ರವಾಹದಿಂದ ನಲುಗಿಹೋಗಿರುವ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಜೊತೆಗೆ ನೆರೆಯ ರಾಯಚೂರಿಗೂ ಇದೀಗ ಮಹಾಪ್ರವಾಹ ವ್ಯಾಪಿಸಿದ್ದು, ಈ ನಾಲ್ಕು ಜಿಲ್ಲೆಗಳ್ಲಲಿ ಮತ್ತೆ ಕಟ್ಟೆಚ್ಚರ ಘೋಷಿಸಲಾಗಿದೆ. ನದಿ ತೀರದ ಗ್ರಾಮಗಳ ಜನರ

ಉಡುಪಿ: ಯಕ್ಷಗಾನ ಕ್ಷೇತ್ರದ ಹಿರಿಯ ಮದ್ದಲೆ  ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ (101) ಶನಿವಾರ ರಾತ್ರಿ ನಿಧನರಾಗಿದ್ದಾರೆ. 1919ರ ಡಿಸೆಂಬರ್‌ 15ರಂದು ಉಡುಪಿಯ ಹಿರಿಯಡ್ಕದಲ್ಲಿ ಜನಿಸಿದ್ದ ಗೋಪಾಲ ರಾವ್ ಹಿರಿಯಡ್ಕ ಯಕ್ಷಗಾನ ಮೇಳದಲ್ಲಿ ಮದ್ದಲೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಡಗುತಿಟ್ಟಿನ ಏರು ಮದ್ದಲೆ ನುಡಿಸುವುದರಲ್ಲಿ ಪ್ರವೀಣರಾಗಿದ್ದ ರಾವ್  ಪರ್ಡೂರು

ಶ್ರೀ ಕೃಷ್ಣ ಮಠದಲ್ಲಿ ಶರನ್ನವರಾತ್ರಿಯ ಪರ್ವದಿನದಲ್ಲಿ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭತೀರ್ಥಶ್ರೀಪಾದರು ಶ್ರೀ ಕೃಷ್ಣ ದೇವರಿಗೆ "ಸತ್ಯಭಾಮೆ" ಅಲಂಕಾರ ಮಾಡಿದರು. ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.

ತೊಟ್ಟ೦ನ ದಿವ೦ಗತ ಮುದ್ದುರವರ ಧರ್ಮಪತ್ನಿಯಾದ ಶ್ರೀಮತಿ ಬೀಯು(93)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಅ.11ರ೦ದು ಸ್ವಗೃಹದಲ್ಲಿ ನಿಧನಹೊ೦ದಿದ್ದಾರೆ.ಮೃತರು ಮೂರು ಗ೦ಡು ಮತ್ತು ಐದು ಮ೦ದಿ ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಮಂಗಳೂರು:ಕೊರೊನಾ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಮಂಗಳೂರು ದಸರೋತ್ಸವವನ್ನು ಅಕ್ಟೋಬರ್ 17 ರ ಶನಿವಾರ ಕುದ್ರೋಳಿ ಗೋಕರ್ನಾಥೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಿದರು. ಮಂಗಳೂರು ದಸರ ಉದ್ಘಾಟನೆಯ ನಂತರ ಮಾತನಾಡಿದ ಡಾ.ಆರತಿ ಕೃಷ್ಣ ಅವರು, "ಕುದ್ರೋಳಿಯಲ್ಲಿ ಮಂಗಳೂರು ದಸರಾ ಉದ್ಘಾಟನೆ ಮಾಡಿರುವುದು ನನಗೆ ಒಂದು ಗೌರವದ

ಮೈಸೂರು: ಕೊರೋನಾ ಆತಂಕದ ನಡುವೆಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಜಯದೇಯ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಖ್ಯಾತ ವೈದ್ಯ ಡಾ.ಸಿ.ಎನ್. ಮಂಜುನಾಥ್ ಅವರು ಶನಿವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಇದರಿಂದ ಸಾಂಸ್ಕೃತಿಕ ನಗರಿಯಲ್ಲಿ ದಸರಾ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ವಿಶ್ವವಿಖ್ಯಾತ ಮೈಸೂರು ದಸರಾ