Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಕಳೆದ ಬಾರಿಗಿ೦ತಲೂ ಈ ಬಾರಿ ದೇಶದ ಎಲ್ಲಾ ರಾಜ್ಯಗಳಲ್ಲಿ ಮಳೆರಾಯನ ಆರ್ಭಟದಿ೦ದ ರೈತರು ಕ೦ಕೆಟ್ಟುಹೋಗಿದ್ದಾರೆ. ಒ೦ದೆಡೆ ಕೊರೋನಾ ಕಾಟ ಎಲ್ಲರ ಪ್ರಾಣವನ್ನು ಹಿ೦ಡಿತೆಗೆದಿದೆ.ಎಲ್ಲಾ ವ್ಯವಹಾರಗಳು ನೆಲಕಚ್ಚಿಹೋಗಿವೆ. ಎಲ್ಲರೂ ನಷ್ಟದಿ೦ದ ಕಷ್ಟಕರವಾದ ಜೀವನವನ್ನು ನಡೆಸುತ್ತಿದ್ದಾರೆ. ಎಲ್ಲರ ಚಿನ್ನ ಬ್ಯಾ೦ಕ್,ಫೈನಾಸ್ ಖಜಾನೆಗಳಿಗೆ ಸೇರುತ್ತಿವೆ. ಮಳೆಯಿ೦ದಾಗಿ ಡ್ಯಾ೦ಗಳಲ್ಲಿ ನೀರಿನ ಮಟ್ಟವು ದಿನದಿ೦ದ ದಿನಕ್ಕೆ ಹೆಚ್ಚಿ

ನ್ಯೂಯಾರ್ಕ್‌: ಭಾರತೀಯ ಮೂಲದ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ಮಗುವಿಗೆ ಜನ್ಮ ನೀಡಿ, ಅನಂತರ ಆ ಮಗುವನ್ನು ಬಾತ್‌ರೂಮಿನ ಕಿಟಕಿಯಿಂದ ಹೊರಕ್ಕೆಸೆದ ಭಯಾನಕ ಘಟನೆ ವರದಿಯಾಗಿದೆ. ನ್ಯೂಯಾರ್ಕ್‌ನ ಕ್ವೀನ್ಸ್‌ನ ನಿವಾಸಿಯಾಗಿ ರುವ 23 ವರ್ಷದ ಸಬಿತಾ ಡೂಕ್ರಮ್‌ ವಿರುದ್ಧ ಪೊಲೀ ಸರು ಈಗ ಕೊಲೆಯತ್ನದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ. ತಾನು ಸ್ನಾನ

ಮೂಡುಬಿದಿರೆ: ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡುಬಿದಿರೆ ಶಿಕ್ಷಕಿ ಪದ್ಮಾಕ್ಷಿ ಇಂದು ಮೃತಪಟ್ಟಿದ್ದಾರೆ. ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ಶಿಕ್ಷಕಿಗೆ ಸೆ. 29ರಂದು ಕೋವಿಡ್-19 ದೃಢಪಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಿಕ್ಷಕಿಗೆ ಎರಡನೇ ಹಂತದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್

ಬಾಗಲಕೋಟೆ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಚಿತ್ತಾ ಮಳೆ ಎಡಬಿಡದೇ ಸುರಿಯುತ್ತಿದ್ದು ರೈತರು, ಸಾಕಪ್ಪಾ ಸಾಕು, ನಿಲ್ಲೋ ಮಳೆರಾಯ ಎಂದು ಕೇಳುವಂತಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 10.6 ಎಂ.ಎಂ ಮಳೆ ಸುರಿದೆ. ಆದರೆ, ನಿರಂತರ ಜಿಟಿಜಿಟಿ ಮಳೆಯಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ. ಕಷ್ಟಪಟ್ಟು ಬೆಳೆದ

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ರ ಮುಂಬೈ ನಿವಾಸಕ್ಕೆ ದಾಳಿ ನಡೆಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದಾನೆ. ಬಾಲಿವುಡ್ ನ ವಿವೇಕ್ ಒಬೆರಾಯ್ ಮೈದುನನಾಗಿರುವ ಆದಿತ್ಯ ಆಳ್ವ ಸದ್ಯ

ನವದೆಹಲಿ: ಟಿಆರ್‌ಪಿ ಹಗರಣದ ಕುರಿತು ಮುಂಬೈ ಪೊಲೀಸ್ ತನಿಖೆಯನ್ನು ಪ್ರಶ್ನಿಸಿ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಸುಪ್ರೀಂ ಕೋರ್ಟ್ ಅನ್ನು ಕೇಳುವ ಮೊದಲು ಬಾಂಬೆ ಹೈಕೋರ್ಟ್ ಅನ್ನು ಮೊದಲು ಸಂಪರ್ಕಿಸಬೇಕು ಎಂದು ಚಾನಲ್ ಗೆ ಸೂಚಿಸಿದೆ. “ನಿಮ್ಮ

ಮುಂಬೈ:ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ಎನ್ ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ) ಮುಖಂಡ ಸಂಜಯ್ ಶಿಂದೆ(55ವರ್ಷ) ಜೀವಂತವಾಗಿ ದಹನವಾಗಿರುವ ದಾರುಣ ಘಟನೆ ಮುಂಬೈನ ನಾಸಿಕ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆ ಪಿಂಪಾಲ್ ಗಾಂವ್ ಬಸ್ವಂತ್ ಟೋಲ್ ಪ್ಲಾಝಾ ಸಮೀಪ ಸಂಭವಿಸಿದೆ.

ಬೆಂಗಳೂರು: ವಿಜಯಪುರ, ಕಲುಬುರಗಿ, ಕರಾವಳಿ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಸತತ ಮಳೆಯಿಂದ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿ ಜನರು ಭಯಭೀತರಾಗಿದ್ದಾರೆ. ಕೆಲವರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ನೀರು ಹೊರಹಾಕಲು ಹೈರಾಣರಾಗಿದ್ದಾರೆ. ಮಳೆಯಿಂದಾಗಿ

ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ ಕೊರೋನಾ ವೈರಸ್ ನಿ೦ದಾಗಿ ಕಳೆದ ಮಾರ್ಚ್ ತಿ೦ಗಳಿ೦ದ ರಸ್ತೆಯಲ್ಲಿ ವೇಗದ ಮಿತಿಯಿಲ್ಲದೇ ರಾಜಾರೋಷವಾಗಿ ಓಡಾಡುತ್ತಿದ್ದ ಬಸ್ ಗಳಿಗೆ ಇದೀಗ ಕೊರೋನ ತಡೆಯೊಡ್ಡಿದೆ. ನಿಮಿಷ

ಉಡುಪಿ : ಉಡುಪಿ ಜಿಲ್ಲೆಯ ಕಟಪಾಡಿ ಬಳಿ ಆಟೋರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ ಕುರ್ಕಾಲಿನ ಮಹಿಳೆಯ 50ಸಾವಿರ ರೂಪಾಯಿ ಮರಳಿಸಿ ಮಾನವೀಯತೆ ಮೆರೆದ ಆಟೋರಿಕ್ಷಾ ಚಾಲಕ ಮಾನವೀಯತೆ ಮೆರೆದಿದ್ದಾನೆ. ಅಂಬಲಪಾಡಿ ಜಯ ಶೆಟ್ಟಿ  ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ  ಬಂದಿದ್ದು, ಇಳಿಯುವಾಗ ಗಡಿಬಿಡಿಯಲ್ಲಿ 50ಸಾವಿರ ರೂಪಾಯಿ