Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಬೆಂಗಳೂರು: ದೇಶಕ್ಕೆ ಚಿನ್ನ ಕಳ್ಳಸಾಗಣೆ ಮಾಡುವ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ ವೇಳೆ ವಶಪಡಿಸಿಕೊಳ್ಳಲಾಗಿದ್ದ 2.5 ಕೆಜಿ ಚಿನ್ನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೊ ವಿಭಾಗದ ಗೋದಾಮಿನಿಂದ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಎಸಿಬಿ ಘಟಕದಲ್ಲಿ ದೂರು ದಾಖಲಾಗಿದೆ. ಕಸ್ಟಮ್ಸ್ ಜಂಟಿ ಆಯುಕ್ತ ಎಂ.ಜೆ.ಚೇತನ್

ಬೆಂಗಳೂರು: ಭೀಮಾ ನದಿ ಪ್ರವಾಹದಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಸೂರ್ಯ ನಗರಿ ಕಲಬುರಗಿಯ ಜನತೆಯ ಸಂರಕ್ಷಣೆಗೆ ಸೇನಾ ಪಡೆ ಬಂದಿಳಿದಿದೆ. ಪ್ರವಾಹದಿಂದ ನಲುಗಿಹೋಗಿರುವ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಜೊತೆಗೆ ನೆರೆಯ ರಾಯಚೂರಿಗೂ ಇದೀಗ ಮಹಾಪ್ರವಾಹ ವ್ಯಾಪಿಸಿದ್ದು, ಈ ನಾಲ್ಕು ಜಿಲ್ಲೆಗಳ್ಲಲಿ ಮತ್ತೆ ಕಟ್ಟೆಚ್ಚರ ಘೋಷಿಸಲಾಗಿದೆ. ನದಿ ತೀರದ ಗ್ರಾಮಗಳ ಜನರ

ಉಡುಪಿ: ಯಕ್ಷಗಾನ ಕ್ಷೇತ್ರದ ಹಿರಿಯ ಮದ್ದಲೆ  ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ (101) ಶನಿವಾರ ರಾತ್ರಿ ನಿಧನರಾಗಿದ್ದಾರೆ. 1919ರ ಡಿಸೆಂಬರ್‌ 15ರಂದು ಉಡುಪಿಯ ಹಿರಿಯಡ್ಕದಲ್ಲಿ ಜನಿಸಿದ್ದ ಗೋಪಾಲ ರಾವ್ ಹಿರಿಯಡ್ಕ ಯಕ್ಷಗಾನ ಮೇಳದಲ್ಲಿ ಮದ್ದಲೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಡಗುತಿಟ್ಟಿನ ಏರು ಮದ್ದಲೆ ನುಡಿಸುವುದರಲ್ಲಿ ಪ್ರವೀಣರಾಗಿದ್ದ ರಾವ್  ಪರ್ಡೂರು

ಶ್ರೀ ಕೃಷ್ಣ ಮಠದಲ್ಲಿ ಶರನ್ನವರಾತ್ರಿಯ ಪರ್ವದಿನದಲ್ಲಿ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭತೀರ್ಥಶ್ರೀಪಾದರು ಶ್ರೀ ಕೃಷ್ಣ ದೇವರಿಗೆ "ಸತ್ಯಭಾಮೆ" ಅಲಂಕಾರ ಮಾಡಿದರು. ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.

ತೊಟ್ಟ೦ನ ದಿವ೦ಗತ ಮುದ್ದುರವರ ಧರ್ಮಪತ್ನಿಯಾದ ಶ್ರೀಮತಿ ಬೀಯು(93)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಅ.11ರ೦ದು ಸ್ವಗೃಹದಲ್ಲಿ ನಿಧನಹೊ೦ದಿದ್ದಾರೆ.ಮೃತರು ಮೂರು ಗ೦ಡು ಮತ್ತು ಐದು ಮ೦ದಿ ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಮಂಗಳೂರು:ಕೊರೊನಾ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಮಂಗಳೂರು ದಸರೋತ್ಸವವನ್ನು ಅಕ್ಟೋಬರ್ 17 ರ ಶನಿವಾರ ಕುದ್ರೋಳಿ ಗೋಕರ್ನಾಥೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಿದರು. ಮಂಗಳೂರು ದಸರ ಉದ್ಘಾಟನೆಯ ನಂತರ ಮಾತನಾಡಿದ ಡಾ.ಆರತಿ ಕೃಷ್ಣ ಅವರು, "ಕುದ್ರೋಳಿಯಲ್ಲಿ ಮಂಗಳೂರು ದಸರಾ ಉದ್ಘಾಟನೆ ಮಾಡಿರುವುದು ನನಗೆ ಒಂದು ಗೌರವದ

ಮೈಸೂರು: ಕೊರೋನಾ ಆತಂಕದ ನಡುವೆಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಜಯದೇಯ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಖ್ಯಾತ ವೈದ್ಯ ಡಾ.ಸಿ.ಎನ್. ಮಂಜುನಾಥ್ ಅವರು ಶನಿವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಇದರಿಂದ ಸಾಂಸ್ಕೃತಿಕ ನಗರಿಯಲ್ಲಿ ದಸರಾ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ವಿಶ್ವವಿಖ್ಯಾತ ಮೈಸೂರು ದಸರಾ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಪತ್ನಿಗೆ ಶನಿವಾರ ಮತ್ತೆ ಸಿಸಿಬಿ ಮತ್ತೆ ನೋಟಿಸ್ ಜಾರಿ ಮಾಡಿದೆ. ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಪತ್ನಿ ಪ್ರಿಯಾಂಕಾ ಆಳ್ವಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ

ಕರಾಚಿ: ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಟಿ 20 ಕಪ್ ಮುಗಿದ ನಂತರ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಪಾಕಿಸ್ತಾನ ವೇಗಿ ಉಮರ್ ಗುಲ್ ಶನಿವಾರ ಪ್ರಕಟಿಸಿದ್ದಾರೆ. 2016 ರಲ್ಲಿ ಪಾಕಿಸ್ತಾನ ಪರವಾಗಿ ಏಕದಿನ ಪಂದ್ಯವೊಂದರಲ್ಲಿ ಆಡಿದ 36 ವರ್ಷದ ಗುಲ್, ಭಾನುವಾರ ಕೊನೆಗೊಳ್ಳುವ ರಾಷ್ಟ್ರೀಯ ಟಿ 20 ಕಪ್‌ನಲ್ಲಿ ಬಲೂಚಿಸ್ತಾನ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಬಾಂದ್ರಾದಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ವೊಂದು ಆದೇಶ ನೀಡಿದೆ. ಟ್ವೀಟ್ ಗಳ ಮೂಲಕ ಹಿಂದೂ ಮತ್ತು ಮುಸ್ಲಿಂರ ನಡುವೆ ಕೋಮುಗಲಭೆ, ದ್ವೇಷ ಹರಡುವಿಕೆ ಪ್ರಯತ್ನಕ್ಕಾಗಿ ಅವರಿಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಲು ನ್ಯಾಯಾಲಯ ಹೇಳಿದೆ. ವಿನ್ಯಾಸಕ