Log In
BREAKING NEWS >
ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿ ರಾಜ್ಯದಲ್ಲಿ ಹಲವೆಡೆ ಇನ್ನೆರಡು ದಿನ ಮಳೆ

ಬೆಂಗಳೂರು: 77 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಅಡಿ ಬೈಕ್ ಮಾಲೀಕನಿಗೆ 42,500 ರೂ. ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಡಿವಾಳ ಸಂಚಾರಿ ಪೋಲೀಸರ ಕಾರ್ಯಾಚರಣೆ ವೇಳೆ ಬೈಕ್ ಸವಾರ ಅರುಣ್ ಕುಮಾರ್ ಇಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಮತ್ತು

ದಕ್ಷಿಣ ಕನ್ನಡ(ಅ.30): ಕೃಷಿತೋಟಕ್ಕೆ ನುಗ್ಗಿದ ಆನೆ ಹಿಂಡಿನಿಂದ ಮರಿಯಾನೆಯೊಂದು ಬೇರ್ಪಟ್ಟು ಕೃಷಿ ತೋಟದಲ್ಲಿ ಉಳಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಎಂಬಲ್ಲಿ ನಡೆದಿದೆ. ಕಾಡಿನಲ್ಲಿ ಆಹಾರದ ಕೊರತೆ ಕಂಡು ಬರುವ ಸಂದರ್ಭದಲ್ಲಿ ದಟ್ಟಾರಣ್ಯದಲ್ಲಿರುವ ಕಾಡಾನೆಗಳ ಗುಂಪು ಕಾಡಿನಂಚಿನಲ್ಲಿರುವ ಕೃಷಿತೋಟಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುವುದು ಸಾಮಾನ್ಯವಾಗಿದೆ. ಇದೇ ರೀತಿ

ಬ್ರಾಟಿಸ್ಲಾವಾ: ಸತತ 30 ವರ್ಷಗಳ ಪ್ರಯತ್ನದ ಬಳಿಕ ಕಂಪನಿಯೊಂದು ತನ್ನ ಕನಸನ್ನು ನನಸಾಗಿಸಿಕೊಂಡಿದ್ದು, ಹಾರುವ ಕಾರನ್ನು ಆವಿಷ್ಕರಿಸಿದೆ. ಈ ಕಾರ್ ನೆಲದ ಮೇಲೆ ಓಡುತ್ತೆ, ಮಾತ್ರವಲ್ಲದೆ ಆಕಾಶದಲ್ಲಿಯೂ ಹಾರುತ್ತದೆ. ಹೌದು, ಯೂರೋಪ್‍ನ ಸ್ಲೋವಾಕಿಯಾ ದೇಶದ ಕ್ಲೈನ್ ವಿಷನ್ ಕಂಪನಿ ಏರ್ ಕಾರ್ ತಯಾರಿಸುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದೆ. ಇತ್ತೀಚಿನ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗ ತೊರೆದು ನಂತರ ರಾಜಕೀಯ ಕ್ಷೇತ್ರ ಸೇರಿದ ಮೇಲೆಯೂ ಸಿನಿಪ್ರೇಮಿಗಳಿಗೆ ಅವರ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ.ಕಳೆದೊಂದು ವರ್ಷದಿಂದ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದ ರಮ್ಯಾ ಇದೀಗ ಮತ್ತೆ ಸಕ್ರಿಯವಾಗಿದ್ದಾರೆ. ಆಗಾಗ ಅಭಿಮಾನಿಗಳೊಂದಿಗೆ ತಮ್ಮಿಷ್ಟದ ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟದ್ದು 2003ರಲ್ಲಿ ಪುನೀತ್ ರಾಜ್

ಮೈಸೂರು: ಎರಡು ತಲೆ ಹಾವಿನ ಒಂದು ಉರಗದೊಂದಿಗೆ ಐವರು ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದೆ. ಬಂಧಿತರನ್ನು ದೊಡ್ಡಯ್ಯ, ಹೇಮಂತ್, ಯೋಗೇಶ್, ರವಿ ಮತ್ತು ಭರಮಗೌಡ ಎಂದು ಗುರುತಿಸಿರುವುದಾಗಿ ಅರಣ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಆರೋಪಿಗಳು ಹಾವನ್ನು ಕಾರಿನಲ್ಲಿ ಕಳ್ಳಸಾಗಣೆ ಮಾಡುತ್ತಾ ಮೈಸೂರಿಗೆ ಹೊರಟಿದ್ದಾರೆ ಎಂಬ ಸುಳಿವಿನ ಮೇರೆಗೆ ಇಲಾಖೆ ಸಿಬ್ಬಂದಿ ಸಿದ್ದಲಿಂಗಪುರ ಬಳಿ

ಜಮ್ಮು: ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರ ಅಡಗುದಾಣ ಧ್ವಂಸಗೊಳಿಸಿ, ಚೀನಾದ ಪಿಸ್ತೂಲ್ ಮತ್ತು ಸ್ಫೋಟಕಗಳೂ ಒಳಗೊಂಡಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿವೆ. ಗಂಭೀರ್ ಮುಘಲನ್ ಅರಣ್ಯದ ಸಮೀಪ, ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಯೋಧರು ಶುಕ್ರವಾರ ಉಗ್ರಗಾಮಿಗಳು ಅಡಗುತಾಣದಲ್ಲಿ

ಸುಳ್ಯ: ದಕ್ಷಿಣ ಕನ್ನಡ ಸುಳ್ಯ ತಾಲೂಕು ದೇವರಗುಡಿ ಜಲಪಾತದಲ್ಲಿ ಅರೆಬೆತ್ತಲಾಗಿ ಫೋಟೋಶೂಟ್ ನಡೆಸಿ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ್ದ ಮಾಡೆಲ್ ಬೃಂದಾ ಅರಸ್ ಜನರ ಆಕ್ರೋಶದ ನಂತರ ಕ್ಷಮೆ ಯಾಚಿಸಿದ್ದಾರೆ. ಸುಳ್ಯದ ತೋಡಿಕಾನ ದೇವರಗುಡಿ ಜಲಪಾತ ಸ್ಥಳೀಯರ ಧಾರ್ಮಿಕ ನಂವಿಕೆಯ ಪ್ರತೀಕವಾಗಿದ್ದು ಈ ಜಲಪಾತದ ಸಮೀಪವೇ ಪ್ರಾಚೀನ ದೇಗುಲ

ನವದೆಹಲಿ: ಇಡೀ ಜಗತ್ತಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ಎಲ್ಲ ದೇಶಗಳಲ್ಲೂ ಪ್ರತೀ ನಿತ್ಯ ಲಕ್ಷಾಂತರ ಸಂಖ್ಯೆ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಈ ಒಂದು ದೇಶದಲ್ಲಿ ಕಳೆದ 200 ದಿನಗಳಿಂದ ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲ. ಹೌದು

ತುಮಕೂರು: ಶಿರಾ ಉಪಚುನಾವಣಾ ಅಖಾಡದಲ್ಲಿ ಕಾಂಚಾಣದ ಸದ್ದು ಜೋರಾಗಿದ್ದು, ಕಳ್ಳಂಬೆಳ್ಳ ಚೆಕ್ ಪೋಸ್ಟ್ ಬಳಿ ರೂ.64.40 ಲಕ್ಷ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್'ಯುವಿ ಕಾರಿನಲ್ಲಿ ಕುಳಿತಿದ್ದ ಮೂವರು ವ್ಯಕ್ತಿಗಳು ಬೆಂಗಳೂರಿನಿಂದ ಚೆನ್ನಗಿರಿಗೆ ತೆರಳುತ್ತಿದ್ದರು. ಈ ವೇಳೆ ಕಳ್ಳಂಬೆಳ್ಳ ಚೆಕ್ ಪೋಸ್ಟ್ ಬಳಿ ಕಾರನ್ನು ಪರಿಶೀಲನೆ ನಡೆಸಲಾಗಿದ್ದು, ಕಾರಿನಲ್ಲಿದ್ದ ರೂ.64.4

ಉಡುಪಿ: ಪ್ರಸಿದ್ಧ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ದೇವಸ್ಥಾನದ ನೂತನ ಆಡಳಿತ ಸಮಿತಿ ಅಧ್ಯಕ್ಷರಾಗಿ ಮಣಿಪಾಲ ಕೆಎಂಸಿ ಮೆಡಿಸಿನ್ ವಿಭಾಗ ಮುಖ್ಯಸ್ಥ ಹಾಗೂ ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಡಾ. ರವಿರಾಜ್ ಆಚಾರ್ಯ ಸರ್ವಾನುಮತದಿಂದ ಆಯ್ಕೆಯಾದರು. ನೂತನ ಸದಸ್ಯರಾಗಿ ನಾಗರಾಜ ಶೆಟ್ಟಿ