BREAKING NEWS > |
ಸಿಡ್ನಿ: ಸಮುದ್ರದ ದಂಡೆಗೆ ಬಂದು ಬಿದ್ದ ಸುಮಾರು 270 ತಿಮಿಂಗಿಲಗಳನ್ನು (ವೇಲ್ಸ್) ಸಾಗರ ಜೈವಿಕತಜ್ಞರು ರಕ್ಷಿಸಲು ಹರಸಾಹಸಪಟ್ಟ ಘಟನೆ ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪದಲ್ಲಿ ಸೋಮವಾರ ನಡೆದಿದೆ. 270ರಲ್ಲಿ ಕನಿಷ್ಠ 27 ಪೈಲಟ್ ತಿಮಿಂಗಿಲಗಳು ಈಗಾಗಲೇ ಸಾವನ್ನಪ್ಪಿವೆ. ಪೈಲಟ್ ತಿಮಿಂಗಿಲಗಳು ಡಾಲ್ಫಿನ್ ಪ್ರಭೇದಕ್ಕೆ ಸೇರಿದ್ದು, 7 ಮೀ. ಉದ್ದ ಮತ್ತು 3
ಬೆಂಗಳೂರು: ಹಾಡಹಗಲೇ ಆಭರಣಗಳ ಮಳಿಗೆಗೆ ನುಗ್ಗಿರುವ ಇಬ್ಬರು ದುಷ್ಕರ್ಮಿಗಳು, ಮಳಿಗೆಯ ಕೆಲಸಗಾರನಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಒಂದೂವರೆ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ, 3.96 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಜಾಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಾಲಹಳ್ಳಿಯ ಎಂಇಎಸ್ ರಸ್ತೆಯ ವಿನೋದ್ ಬ್ಯಾಂಕರ್ಸ್ ಅಂಡ್ ಜ್ಯುವೆಲರ್ಸ್ ಮಳಿಗೆಯಲ್ಲಿ
ವಾಷಿಂಗ್ ಟನ್: 2024 ರ ವೇಳೆಗೆ ಚಂದ್ರನ ಮೇಲೆ ಮೊದಲ ಮಹಿಳೆ ಹಾಗೂ ಮತ್ತೋರ್ವ ಪುರುಷನನ್ನು ಕಳುಹಿಸುವುದಕ್ಕೆ ನಾಸಾ ಆರ್ಟೆಮಿಸ್ ಯೋಜನೆಯನ್ನು ಘೋಷಿಸಿದೆ. ಚಂದ್ರನ ಮೇಲ್ಮೈ ನ ಕುರಿತು ಹೆಚ್ಚು ಸಂಶೋಧನೆ ನಡೆಸುವ ಉದ್ದೇಶದಿಂದ ನಾಸಾ ಈ ಯೋಜನೆಯನ್ನು ಘೋಷಿಸಿದ್ದು, 1972 ರ ಅಪೋಲೋ ಲೂನಾರ್ ಮಿಷನ್ ಬಳಿಕ ಮೊದಲ ಚಂದ್ರನಿಗೆ
ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 2020 ಟೂರ್ನಿಯ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ 10 ರನ್ ಗಳಿಂದ ಗೆಲುವು ಸಾಧಿಸಿದೆ. ಸೈನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು 19. 4 ಓವರ್ ಗಳಲ್ಲಿ ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾದ ಆರ್ ಸಿಬಿ ಶುಭಾರಂಭ
ತಿರುವನಂತಪುರ: 2008ರಲ್ಲಿ ನಡೆದಿದ್ದ ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿ ಮತ್ತು ಲಷ್ಕರ್ ಇ- ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕೆಯ ಆಧಾರದ ಮೇಲೆ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಕೇಂದ್ರಿಯ ತನಿಖಾ ತಂಡ ಸೋಮವಾರ ಬಂಧಿಸಿದೆ. ಬಂಧಿತರನ್ನು ಉತ್ತರ ಪ್ರದೇಶದ ಗುಲ್ ನವಾಜ್ ಮತ್ತು ಕಣ್ಣೂರು ಬಳ್ಳಿಯ ಕೊಂಡತ್ ನಿವಾಸಿ ಶೋಯೆಬ್
ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ರಾಜ್ಯಸಭೆಯಲ್ಲಿ ಕೋಲಾಹಲ ಮಾಡಿ ಅಮಾನತು ಶಿಕ್ಷೆಗೊಳಪಟ್ಟಿರುವ 8 ರಾಜ್ಯಸಭೆ ಸದಸ್ಯರು ಸಂಸತ್ ಆವರಣದಲ್ಲಿ ಆಹೋರಾತ್ರಿ ಧರಣಿ ನಡೆಸಿದ್ದಾರೆ. ಕೃಷಿ ಮಸೂದೆ ಅಂಗೀಕಾರದ ವೇಳೆ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಮತ್ತು ಉಪ ಸಭಾಪತಿ ಅವರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪ ಮತ್ತು ಅಶಿಸ್ತಿನ ವರ್ತನೆ
ಮುಂಬೈ: ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸಂಭವಿಸಿದ್ದ ಬಹುಮಹಡಿ ಕಟ್ಟಡ ಪ್ರಕರಣದಲ್ಲಿ ಈವರೆಗೂ ಸಾವನ್ನಪ್ಪಿರುವವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಸತತ 24 ಗಂಟೆಗಳ ನಂತರವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ವಾಣಿಜ್ಯ ನಗರಿ ಮುಂಬೈ ಸಮೀಪದಲ್ಲೇ ಇರುವ ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿರುವ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ನಿನ್ನೆ ಮೂರು ಮಹಡಿ ಕಟ್ಟದ ಕುಸಿದು ಬಿದ್ದಿತ್ತು. ಈ
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ ಕೆಲ ನಟಿಯರನ್ನಷ್ಟೇ ಬಂಧಿಸಲಾಗಿದೆ. ಆದರೆ ನಟರನ್ನೇಕೆ ಬಂಧಿಸಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ. ತಮ್ಮ ಜನ್ಮದಿನದಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಎರಡು ವಾರಗಳ ಹಿಂದೆ ಸಿಸಿಬಿ ಅಧಿಕಾರಗಳಿಗೆ ನನ್ನ ಬಳಿಯಿದ್ದ ಮಾಹಿತಿ ನೀಡಿದ್ದೇನೆ.
ಬೆಂಗಳೂರು ; ಡ್ರಗ್ ಮಾಫಿಯಾ ಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಅರ್ಜಿ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಎನ್ ಡಿ ಪಿ ಎಸ್ ವಿಶೇಷ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ಸಂದರ್ಭ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಆದುದರಿಂದ ರಾಗಿಣಿ ಹಾಗೂ
ಕೊಚ್ಚಿ: ಭಾರತೀಯ ನೌಕಾಪಡೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಯುದ್ಧನೌಕೆಗೆ ಇಬ್ಬರು ಮಹಿಳಾ ಪೈಲಟ್ ಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ ಲಿಂಗ ಸಮಾನತೆಗೆ ದಾರಿ ಮಾಡಿಕೊಡಲಾಗಿದೆ. ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರು ಸೋಮವಾರ ಕೊಚ್ಚಿಯ ನೌಕಾ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಐಎನ್ಎಸ್