Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಮಗನೊಬ್ಬ  ಲಾಡ್ಜ್‌ನಲ್ಲಿ ತಂಗಿದ್ದ ತಂದೆಯನ್ನು ಮೊದಲ ಮಹಡಿಯಿಂದ ಕಾಲುಗಳನ್ನು ಹಿಡಿದು ದರದರನೆ ನೆಲಮಹಡಿಯವರೆಗೆ ಎಳೆದೊಯ್ದಿದ್ದಾನೆ. ಮಂಗಳೂರು ದೇರಳಕಟ್ಟೆ  ಖಾಸಗಿ ಲಾಡ್ಜ್‌ನಲ್ಲಿ ಜೂನ್ 29 ರ ಸೋಮವಾರ ಈ ಘಟನೆ ನಡೆದಿದೆ. 15 ದಿನಗಳ ಹಿಂದೆ ಮುಂಬೈನಿಂದ ಮಂಗಳೂರಿಗೆ ಬಂದಿದ್ದರಿಂದ ತಂದೆ

ಮಂತ್ರಾಲಯ: ಜುಲೈ 2 ರಿಂದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಗೆ ದರ್ಶನ ಕಲ್ಪಿಸಲು ನಿರ್ಧರಿಸಿರುವುದಾಗಿ ಶ್ರೀ ಮಠದ ವ್ಯವಸ್ಥಾಪಕ ವೆಂಕಟೇಶ ಜೋಷಿ ಹೇಳಿದ್ದಾರೆ.  ಕೇಂದ್ರ, ರಾಜ್ಯ ಸರ್ಕಾರ ಹಾಗೂ ಮುಜರಾಯಿ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಮಠದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. 10 ವರ್ಷದೊಳಗಿನ ಮಕ್ಕಳು, 25

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 1,105 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, 19 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 14295ಕ್ಕೇರಿಕೆಯಾಗಿದೆ. ಒಟ್ಟು 7685 ಮಂದಿ ಚೇತರಿಕೆ ಹೊಂದಿದ್ದು, 6382 ಸಕ್ರಿಯ ಪ್ರಕರಣಗಳಿವೆ. 230 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 738, ಬಳ್ಳಾರಿಯಲ್ಲಿ 76, ದಕ್ಷಿಣ ಕನ್ನಡದಲ್ಲಿ 32, ಬೀದರ್‌ನಲ್ಲಿ

ಅನಂತ್ ನಾಗ್: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಖುಲ್ಚೊಹರ್ ಪ್ರದೇಶದಲ್ಲಿ ಸೋಮವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ. ಅವರ ಗುರುತುಗಳನ್ನು ಪತ್ತೆಹಚ್ಚಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಮೊನ್ನೆ 26ರಂದು ಟ್ರಾಲ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಸಹ

ಬೆಂಗಳೂರು: 1ರಿಂದ 5ನೇ ತರಗತಿಯ ವರೆಗೆ ಮತ್ತೆ ಆನ್‌ಲೈನ್‌ ಶಿಕ್ಷಣ ಜಾರಿಯಾಗಿದೆ. ಈ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಬೇಡವೆಂದು ರದ್ದು ಮಾಡಿದ್ದ ಸರಕಾರ ಈಗ ನಿಯಮಿತ ಅವಕಾಶ ನೀಡಿ ಹೊಸ ಆದೇಶ ಹೊರಡಿಸಿದೆ. ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯದ ಮಾರ್ಗಸೂಚಿ ಮತ್ತು ರಾಜ್ಯ ಹೈಕೋರ್ಟ್‌ ಸಲಹೆ ಯಂತೆ ಆನ್‌ಲೈನ್‌ ಶಿಕ್ಷಣದ ಕುರಿತಾಗಿ

ಹಿರಿಯ ಕನ್ನಡ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೊದಲ ಮಹಿಳೆ ಗೀತಾ ನಾಗಭೂಷಣ್ ಅವರು ಹೃದಯಾಘಾತದಿಂದ ನಿಧನರಾದರು. ಕಲಬುರಗಿ ನಗರದ ಸ್ವಸ್ತಿಕ ನಗರದಲ್ಲಿ ವಾಸವಾಗಿದ್ದ 78 ಗೀತಾ ನಾಗಭೂಷಣ್ ಇವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 1942,

ಉಡುಪಿ: ಶ್ರೀಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕ ನಡೆಯುವ ಮುನ್ನ ರವಿವಾರ ಗರ್ಭಗುಡಿ ಯನ್ನು ಶುಚಿಗೊಳಿಸುವ “ಉಧ್ವರ್ತನೆ’ ಸೇವೆ ನಡೆಯಿತು. ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಬೆಳಗ್ಗಿನ ಪಂಚಾಮೃತಾಭಿಷೇಕದ ವರೆಗಿನ ಪೂಜೆ ನಡೆಸಿದ ಬಳಿಕ ಶುಚಿಗೊಳಿಸುವ ಕೆಲಸ ಆರಂಭ ಗೊಂಡಿತು. ಬೆಳಗ್ಗೆ 5 ಗಂಟೆಯಿಂದ 7.30ರವರೆಗೆ ಶುಚಿಗೊಳಿಸಲಾಯಿತು. ಕೃಷ್ಣಾಪುರ,

ಉಡುಪಿ: ಕರಾವಳಿ ಬೈಪಾಸ್ ನಿಂದ ಉಡುಪಿ ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಬನ್ನಂಜೆಯಯಲ್ಲಿರುವ ಹೊಟೇಲೊಂದರ ಅಡುಗೆ ತಯಾರಕನಿಗೆ ಇಂದು ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಹೊಟೇಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ವರದಿ ಪಾಸಿಟಿವ್ ಬಂದ ಕಾರಣ ಇದೀಗ ಈ ಹೊಟೇಲನ್ನು ಸೀಲ್

ಸುರತ್ಕಲ್: ಇಲ್ಲಿಗೆ ಸಮೀಪದ ಜೋಕಟ್ಟೆ ನಿವಾಸಿ 51ರ ಹರೆಯದ ಮಹಿಳೆ ಅನಾರೋಗ್ಯ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಗಂಟಲ ದ್ರವ ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ. ಇಂದು ಬೆಳಗ್ಗೆ ಸುರತ್ಕಲ್ ನಿವಾಸಿ 31ರ ಹರೆಯದ ಯುವಕ ಹಾಗೂ ಬಂಟ್ವಾಳ ನಿವಾಸಿ ವೃದ್ಧೆ ಮೃತಪಟ್ಟಿದ್ದು

ಕಠ್ಮಂಡು: ನೇಪಾಲ ಸರಕಾರ ಪತನ­ಗೊಳಿಸಲು ಭಾರತ ಸಂಚು ರೂಪಿಸುತ್ತಿದೆ ಎಂದು ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇರ ಆರೋಪ ಮಾಡಿದ್ದಾರೆ. ಹೊಟೇಲ್‌ಗ‌ಳಲ್ಲಿ ಕುಳಿತುಕೊಂಡು ಭಾರತ ವತಿಯಿಂದ ಸರಕಾರ ಪತನಗೊಳಿಸಲು ಯತ್ನ ಮಾಡ­ಲಾ­ಗುತ್ತಿದೆ. ಇಂಥ ಯತ್ನಕ್ಕೆ ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದು ರವಿವಾರ ಹೇಳಿದ್ದಾರೆ. ಚೀನ ಪ್ರೇರಿತವಾಗಿ ಭಾರತದ ಸ್ಥಳಗ­ಳನ್ನು ನೇಪಾಲದ ಭೂಪಟದಲ್ಲಿ ಸೇರ್ಪ­ಡೆಗೊಳಿಸಿದ