Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ನವದೆಹಲಿ: ಆಗ್ನೇಯ ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ಬುಧವಾರ ನಸುಕಿನ ಜಾವ ಅಗ್ನಿ ದುರಂತ ಸಂಭವಿಸಿ 120ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿವೆ. ತುಘಲಕಾಬಾದ್ ನ ವಾಲ್ಮೀಕಿ ಮೊಹಲ್ಲಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಅಗ್ನಿ ಹೊತ್ತಿ ಉರಿಯಲಾರಂಭಿಸಿದ ಕೂಡಲೇ ಮಧ್ಯರಾತ್ರಿ 1.30ರ ಹೊತ್ತಿಗೆ 22 ಅಗ್ನಿಶಾಮಕ ಎಂಜಿನ್ ಗಳು ಬಂದು ಬೆಂಕಿಯನ್ನು ನಂದಿಸಿದವು. ಘಟನೆಯಲ್ಲಿ

ಜಮ್ಮು-ಕಾಶ್ಮೀರ: ಕಣಿವೆ ನಾಡು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಂಗಾನ್ ಪ್ರದೇಶದಲ್ಲಿ ಬುಧವಾರ ನಸುಕಿನ ಜಾವ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಉಗ್ರರ ಇರುವಿಕೆ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಉಗ್ರರು

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಆತನಿಗೆ ಸಹಾಯ ಮಾಡಿದ್ದ ಮತ್ತೋರ್ವನನ್ನು ಬಂಧಿಸಿದ್ದಾರೆ. ಗುಲಾಮ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ರವಿ ಪೂಜಾರಿ ಮಾಡುವ ಕೃತ್ಯಕ್ಕೆ, ಸುಲಿಗೆಗೆ ನೆರವು ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಗುಲಾಮ್ ನನ್ನು ಬಂಧಿಸಿ, ನ್ಯಾಯಾಲಯದ

ಗಂಗಾವತಿ: 15 ವರ್ಷಗಳ ಹಿಂದೆ ಪತ್ನಿಯಿಂದಲೆ ತನ್ನ ಗಂಡನನ್ನು ಕೊಲೆ ಮಾಡಿ ಮನೆಯಲ್ಲಿ ಹೂತ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಡಿವೈಎಸ್ಪಿ ಡಾ.ಚಂದ್ರಶೇಖರ  ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಯನಗರದಲ್ಲಿರುವ ಲಕ್ಷ್ಮೀ ಸಿಂಗ್ ತನ್ನ ಗಂಡ ಪಂಪಾಪತಿ ಅಲಿಯಾಸ್ ಶಂಕರ ಸಿಂಗ್ ಅವರನ್ನು ಕೊಲೆ

ಕಲ್ಯಾಣಪುರ : ದುಬಾಯಿಯಿಂದ ಆಗಮಿಸಿ ಕ್ವಾರಂಟೈನ್ ನಲ್ಲಿ ಇದ್ದು ಅವಧಿ ಮುಗಿದ ಬಳಿಕ ಮನೆಗೆ ಬಂದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದ್ದು ಇದೀಗ ವ್ಯಕ್ತಿ ವಾಸವಾಗಿರುವ ಕಲ್ಯಾಣಪುರದ ಅಪಾರ್ಟ್ ಮೆಂಟನ್ನು ಸೀಲ್ ಡೌನ್ ಮಾಡಲಾಗಿದೆ. ಹದಿನಾಲ್ಕು ದಿನಗಳ ಕ್ವಾರಂಟೈನ್ ಮುಗಿಸಿ ಬರುವ ಸಮಯದಲ್ಲಿ ಅವರ ಗಂಟಲು ದ್ರವ ಪರೀಕ್ಷೆಯ ವರದಿ

ನವದೆಹಲಿ:ಭಾರತೀಯ ಅಧಿಕಾರಿಗಳನ್ನು ಹಿಂಬಾಲಿಸಿ ಗೂಢಚರ್ಯೆ ನಡೆಸುತ್ತಿದ್ದ ದೆಹಲಿಯಲ್ಲಿರುವ ಪಾಕಿಸ್ತಾನ ಹೈ ಕಮೀಷನ್ ನ ಇಬ್ಬರು ಅಧಿಕಾರಿಗಳು ಹಾಗೂ ಚಾಲಕನನ್ನು ಭಾನುವಾರ ಬಂಧಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಈ ಅಧಿಕಾರಿಗಳಿಗೆ ಪಾಕಿಸ್ತಾನ ಸೇನೆಯ ಜತೆ ಸಂಪರ್ಕ ಇದ್ದಿರುವುದಾಗಿ ಮೂಲಗಳು ಹೇಳಿರುವುದಾಗಿ

ಚೆನ್ನೈ: ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶಾದ್ಯಂತ ಸೋಂಕು ನಿವಾರಕ ಸಿಂಪಡಣೆ ಭರದಿಂದ ಸಾಗಿದೆ. ಇದರ ನಡುವೆಯೇ ಚೆನ್ನೈನಲ್ಲೋರ್ವ ಖತರ್ನಾಕ್ ಕಳ್ಳ ಎಟಿಎಂಗೆ ಸೋಂಕು ನಿವಾರಕ ಸಿಂಪಡಣೆ ಮಾಡುವ ನೆಪದಲ್ಲಿ 8.2 ಲಕ್ಷ ಹಣವನ್ನು  ಎಗರಿಸಿದ್ದಾನೆ. ಹೌದು.. ಚೆನ್ನೈನ ಎಂಎಂಡಿಎ ಈಸ್ಟ್ ಮುಖ್ಯರಸ್ತೆಯಲ್ಲಿರುವ ಎಟಿಎಂ ಕಿಯೋಸ್ಕ್ ನಲ್ಲಿ ಸೋಂಕು ನಿವಾರಣೆ

ಉಡುಪಿ: ಕೋವಿಡ್‌-19 ಹೆಮ್ಮಾರಿ ಮನುಷ್ಯನಿಗೆ ಮಾತ್ರವಲ್ಲದೆ ಹಲವಾರು ಉದ್ಯಮಕ್ಕೂ ದೊಡ್ಡ ಕಂಟಕವಾಗಿ ಪರಿಣಮಿಸಿದ್ದು, ಇದರಿಂದ ಹೊಟೇಲು ಉದ್ಯಮವೂ ಅಪಾರ ನಷ್ಟಕ್ಕೆ ಒಳಗಾಗಿದೆ. ಜೂನ್‌ 8ರ ಬಳಿಕ ಜಿಲ್ಲೆಯಲ್ಲಿ ಹೊಟೇಲುಗಳು ಬಾಗಿಲು ತೆರೆದುಕೊಳ್ಳಲಿವೆ. ಸರಕಾರ ಈಗಾಗಲೇ 5.0 ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಿದೆ. ಹೊಟೇಲುಗಳು ಪುನಾರಂಭಕ್ಕೆ ಸಜ್ಜಾಗುತ್ತಿವೆ. ಲಾಕ್‌ಡೌನ್‌ ತೆರವಾದರೂ ಹೊಟೇಲ್‌ಗ‌ಳನ್ನು ಮತ್ತೆ ಪ್ರಾರಂಭ

ಮುಂಬೈ:ಇತ್ತೀಚೆಗಷ್ಟೇ ಅಂಫಾನ್ ಚಂಡಮಾರುತ ಪಶ್ಚಿಮಬಂಗಾಳದಲ್ಲಿ ಅಪಾರ ಹಾನಿ ಮಾಡಿದ್ದ ಬೆನ್ನಲ್ಲೇ ಇದೀಗ ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಹಾದು ಬರಲಿರುವ ನಿಸರ್ಗ ಚಂಡಮಾರುತದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದಿರುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ. ಸೋಮವಾರ ಬೆಳಗ್ಗೆ ವಾಯುಭಾರ ಕುಸಿತವಾಗುವ ನಿಟ್ಟಿನಲ್ಲಿ ಆಗ್ನೇಯ ಹಾಗೂ ಅರಬ್ಬಿ

ಮುಂಬೈ: ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ (42ವರ್ಷ) ಕಿಡ್ನಿ ಸಮಸ್ಯೆಯಿಂದ ಸೋಮವಾರ ಮುಂಜಾನೆ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಬಾಲಿವುಡ್ ನಲ್ಲಿ ಸಹೋದರ ಸಾಜಿದ್ ಜತೆ ಸೇರಿ ಸಂಗೀತ ನಿರ್ದೆಶಿಸುತ್ತಿದ್ದ ಇವರು ಸಾಜಿದ್-ವಾಜಿದ್ ಎಂದೇ ಜನಪ್ರಿಯಗೊಂಡಿದ್ದರು. ಸಲ್ಮಾನ್ ಖಾನ್ ನಟನೆಯ ವಾಂಟೆಡ್, ದಬಾಂಗ್, ಏಕ್ ಥಾ ಟೈಗರ್ ಸಿನಿಮಾಗಳಲ್ಲಿ ಸಾಜಿದ್,