Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಮುಜಾಫರ್ ನಗರ: ವಲಸೆ ಕಾರ್ಮಿಕರ ಮೇಲೆ ಉತ್ತರ ಪ್ರದೇಶ ಸರ್ಕಾರಿ ಬಸ್ ಹರಿದ ಪರಿಣಾಮ ಆರು ಜನ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ದುರಂತ ಘಟನೆನಯೊಂದು ನಡೆದಿದೆ. ಲಾಕ್ ಡೌನ್ ಕಾರಣದಿಂದ ವಲಸೆ ಕಾರ್ಮಿಕರು ಪಂಜಾಬ್ ನಿಂದ ತಮ್ಮ ಗೋಪಾಲ್ ಗಂಜ್ ನಲ್ಲಿರುವ ತಮ್ಮ ಮನೆಗೆ ನಡೆದುಕೊಂಡು ತೆರಳುತ್ತಿದ್ದರು. ಬುಧವಾರ ರಾತ್ರಿ

ಉಡುಪಿ: ಜಿಲ್ಲೆಯಾದ್ಯಂತ ಮೇ 18ರಿಂದ ಸೆಲೂನುಗಳನ್ನು ಪುನರಾರಂಭಿಸಲು ಷರತ್ತು ಬದ್ದ ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು. ಮೇ 13ರಂದು ಜಿಲ್ಲಾ ಸವಿತಾ ಸಮಾಜದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸದ್ಯದ ಪರಿಸ್ಥಿತಿಗಳನ್ನು

ಹೊಸದಿಲ್ಲಿ: ಒಂದು ಕಾಲದ ಮದ್ಯದ ದೊರೆ, ಉದ್ದೇಶಪೂರ್ವಕ ಸುಸ್ತಿದಾರ ವಿಜಯ್‌ ಮಲ್ಯ ತಮ್ಮ ಸಾಲದ ಹಣವನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡು, ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ. ಬ್ರಿಟನ್‌ನಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಎದುರಿಸುತ್ತಿರುವ ಅವರು ಈ ಹೊಸ ಆಫರ್‌ನ್ನು ಭಾರತ ಸರಕಾರದ‌ ಮುಂದಿಟ್ಟಿದ್ದಾರೆ. ಭಾರತ ಸರಕಾರದ 20 ಲಕ್ಷ ಕೋಟಿ ರೂಪಾಯಿ

 ಮಣಿಪಾಲ : ಅಮೆರಿಕ ಸೇರಿ ಹಲವು ದೇಶಗಳು ಕೋವಿಡ್ ವೈರಸ್‌ನ ತವರು ದೇಶವಾಗಿರುವ ಚೀನ ವಿರುದ್ಧ ಮುಗಿಬಿದ್ದು ಕೋಟಿಗಟ್ಟಲೆ ಡಾಲರ್‌ ನಷ್ಟ ಪರಿಹಾರ ಕೋರಿ ದಾವೆಗಳನ್ನು ಹೂಡಿರುವುದು ಸುದ್ದಿಯಾಗಿತ್ತು. ಆದರೆ ಇದೀಗ ಇಂಥ ದಾವೆಗಳ ಮುಂಚೂಣಿಯಲ್ಲಿರುವ ಅಮೆರಿಕವೇ ತೀರಾ ಮುಜುಗರಕ್ಕೊಳಗಾಗುವ ಪ್ರಸಂಗ ಎದುರಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಹೇಳಿಕೆಯನ್ನು ನಂಬಿ

ಚಿಕ್ಕೋಡಿ: ಕೇವಲ 20 ರು. ಗೆ ಆಸೆಪಟ್ಟ ಮಹಿಳೆಯೊಬ್ಬಳು ನಾಲ್ಕು ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಕೊಂದಿರುವ ದಾರುಣ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. ಚಿಕ್ಕೊಡಿ ತಾಲೂಕಿನ ಜಾಗನೂರು ಗ್ರಾಮದ ಹೊರವಲಯದಲ್ಲಿ ನಡೆದ ಘಟನೆಯಲ್ಲಿ ದಿವ್ಯಾ ವಿನೋದ ಉಗಡೆ (4) ಎಂಬ ಬಾಲಕಿ ಕೊಲೆಯಾಗಿದ್ದಾಳೆ. ಬಾಲಕಿ ಮಹಾರಾಷ್ಟ್ರ ಮೂಲದವಳಾಗಿದ್ದು ಕಬ್ಬಿನ ಕಟಾವಿಗೆ

ಬೆಂಗಳೂರು: ಕೊರೋನಾವೈರಸ್ ಕರ್ನಾಟಕದಲ್ಲಿ ದಿನದಿನಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದ್ದು ಗುರುವಾರ ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಮತ್ತೆ 22 ಮಂದಿಗೆ ಸೋಂಕು ತಗುಲಿದೆ. ಅಲ್ಲದೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತಲಾ ಒಬ್ಬರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದ ಒಟ್ತಾರೆ ಸೋಂಕಿತರ ಸಂಖ್ಯೆ 981ಕ್ಕೆ ತಲುಪಿದ್ದು ಸಾವನ್ನಪ್ಪಿರುವವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ದಕ್ಷಿಣ

ಕಾಬೂಲ್: ಆಫ್ಘಾನಿಸ್ತಾನದ ಹೆರಿಗೆ ಆಸ್ಪತ್ರೆಯೊಂದರಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ನವಜಾತ ಶಿಶುಗಳು ಮತ್ತು ದಾದಿಯರು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಉಗ್ರಗಾಮಿ ಕೃತ್ಯಗಳು ಏರಿಕೆ, ಕೊರೋನಾ ಸೋಂಕು ಉಲ್ಬಣ ಮತ್ತು ವಿದೇಶಿ ಮಿಲಿಟರಿ ಬೆಂಬಲವನ್ನು ಕಡಿಮೆ ಮಾಡುವುದು ಸೇರಿದಂತೆ ಅಸಂಖ್ಯಾತ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗ ಆಫ್ಘಾನಿಸ್ತಾನದಲ್ಲಿ ಹಿಂಸಾಚಾರ ಸಂಭವಿಸಿದೆ. ಮುಂಜಾನೆ ನಡೆದ ದಾಳಿಯ ನಂತರ

ಮಾಸ್ಕೋ: ಸೇಂಟ್ ಪೀಟರ್ಸ್ಬರ್ಗ್ ನ  ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೆಂಟಿಲೇಟರ್ ಗಳಲ್ಲಿದ್ದ ಐವರು ಕೊರೋನಾವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ನಿಗಾ ಅಧಿಕಾರಿಗಳು ಹೇಳಿದ್ದಾರೆ. ಸ್ಟೇಟ್ ಟಾಸ್ ನ್ಯೂ ಏಜನ್ಸಿ ಜತೆಗೆ ಮಾತನಾಡಿದ ತುರ್ತು ನಿಗಾ ಅಧಿಕಾರಿಗಳು ಆಸ್ಪತ್ರೆಯ ತೀವ್ರ

ಸ್ಪೈನ್: ಈ ಅಜ್ಜಿ ಎರಡೂ ವಿಶ್ವಯುದ್ಧ ಮತ್ತು ಸ್ಪೈನ್ ನ ನಾಗರಿಕ ಯುದ್ಧಗಳನ್ನು ನೋಡಿದ್ದರು. ಇಂದು ಇಡೀ ವಿಶ್ವ ಕೊರೊನಾ ವೈರಸ್ ಸೋಂಕಿನಲ್ಲಿ ನಲುಗಿ ಹೋಗಿದೆ. ಅದರಲ್ಲೂ ಸ್ಪೈನ್ ಸೇರಿದಂತೆ ಯುರೋಪ್‌ನಲ್ಲಿ ಅತಿ ಹೆಚ್ಚು ಸಂಕಷ್ಟವನ್ನು ಬೀರಿದೆ. ಇಂದು ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಸ್ಪೈನ್ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಇಳಿ ವಯಸ್ಸಿನವರಿಗೆ

ಉಡುಪಿ: ದನದ ಕೊಟ್ಟಿಗೆಯೊಂದರಲ್ಲಿ ಜೋಡಿ ಹೆಬ್ಬಾವು ಮತ್ತು 31 ಮೊಟ್ಟೆಗಳು ಸಿಕ್ಕಿದ್ದು, ಸ್ಥಳೀಯರು ಅವುಗಳನ್ನು ನೋಡಿ ಬೆರಗಾಗಿದ್ದಾರೆ. ಉಡುಪಿಯ ಕಟಪಾಡಿಯ ರಾಮಚಂದ್ರ ಪೈ ಎಂಬುವರ ಹಳೆಯ ಹಟ್ಟಿ ಕೊಟ್ಟಿಗೆಯಲ್ಲಿ ಒಂದು ಹೆಬ್ಬಾವು 16 ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಇದನ್ನು ಗಮನಿಸಿದ ಮನೆಯ ಮಾಲೀಕ ರಾಮಚಂದ್ರ ಪೈ, ಉರಗ ತಜ್ಞ ಮನು