Log In
BREAKING NEWS >
ಚು೦..ಚು೦..ಚಳಿಯಲಿ ಅದಮಾರು ಪರ್ಯಾಯ ಮಹೋತ್ಸವದ ಮೆರವಣಿಗೆ ಆರ೦ಭ-ಬೃಹತ್ ಜನಸ್ತೋಮದ ನಡುವೆ ಭಾರೀ ಪೂಲೀಸ್ ಬ೦ದೋಬಸ್ತಿನಲ್ಲಿ ಅದಮಾರುಶ್ರೀಗಳು ರಥಬೀದಿಯತ್ತ ......ನಗರದ ಶಾಲಾ ಕಾಲೇಜಿಗೆ ಶನಿವಾರದ೦ದು ರಜೆ ......

ಬಳ್ಳಾರಿ: ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಬೆಂಬಲಿಸಿ ದೇಶಭಕ್ತ ನಾಗರಿಕ ವೇದಿಕೆಯಿಂದ ನಗರದಲ್ಲಿ ಗುರುವಾರ ಬೃಹತ್ ಮೆರವಣಿಗೆ ನಡೆಸಲಾಯಿತು. ನಗರದ ನಗರೂರ್ ನಾರಾಯಣ ಪಾರ್ಕ್ ಬಳಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ವೇದಿಕೆಯ ಸಾವಿರಾರು ಸಂಖ್ಯೆಯ ಕಾರ್ಯಕರ್ತರು

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಪ್ರಾಣೇಶ ಕುಲಕರ್ಣಿ ಮೇಲೆ ವಿದ್ಯಾರ್ಥಿ ಗುಂಪು ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪಿನ ನಡುವೆ ಹುಡುಗಿ ವಿಚಾರವಾಗಿ ಘರ್ಷಣೆ ನಡೆದಿತ್ತು. ಇದಕ್ಕೆ ಸಂಬಂಧಿಸಿ ಉಪನ್ಯಾಸಕರು ಉಭಯ ಗುಂಪುಗಳ ವಿದ್ಯಾರ್ಥಿಗಳನ್ನು ಕರೆದು ವಿಚಾರಿಸಿದ್ದರು. ಒಂದು ತಂಡದ

ತುಮಕೂರು: ನಾಗರಿಕ ತಿದ್ದುಪಡಿ ಕಾಯ್ದೆಯನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ  ಮೋದಿ ಅವರು, ಕಾಯ್ದೆ ವಿರುದ್ಧ ಆಂಧೋಲನ ಆರಂಭಿಸುವ ಮೂಲಕ ವಿಪಕ್ಷ  ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಂಸತ್ತಿನ ವಿರುದ್ಧವೇ ಆಂಧೋಲನ ನಡೆಸುತ್ತಿದೆ ಎಂದು ಕಿಡಿಕಾರಿದರು. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಪೂಜೆ ನೆರವೇರಿಸಿದರು. ನಂತರ ತಮ್ಮ ಭೇಟಿಯ ಸ್ಮರಣಾರ್ಥ ಮಠದ ಆವರಣದಲ್ಲಿ ಬಿಲ್ವಪತ್ರೆ ಗಿಡ ನೆಟ್ಟು ನೀರೆರೆದರು. ಅಲ್ಲದೆ ಲಿಂಗೈಕ್ಯ ಶಿವಕುಮಾರ ಶ್ರೀಗಳ ವಸ್ತು ಸಂಗ್ರಹಾಲಯ ಶಂಕುಸ್ಥಾಪನೆ ನೆರವೇರಿಸಿದರು. ಜನವರಿ

ತುಮಕೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 115 ವರ್ಷಗಳಲ್ಲಿ ಕಾಣದಂತಹ ಬರ ಮತ್ತು ನೆರೆ ಪರಿಸ್ಥಿತಿ ಉಂಟಾಗಿದ್ದು, ಅದರ ಪರಿಹಾರವಾಗಿ 50 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೇದಿಕೆಯಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದರು. ಆದರೆ ಸಿಎಂ ಮನವಿಗೆ ಸ್ಪಂದಿಸದ ಪ್ರಧಾನಿ

ಅಮೃತಸರ್: ಗುರುದ್ವಾರದಲ್ಲಿ ಪ್ರಾರ್ಥನೆ ಮುಗಿಸಿ ಹಿಂತಿರುಗಿತ್ತಿದ್ದ ಸ್ಥಳೀಯ ಶಿರೋಮಣಿ ಅಕಾಲಿ ದಳದ ಮುಖಂಡರೊಬ್ಬರ ಮೇಲೆ ಮೋಟಾರ್ ಸೈಕಲ್ ಮೇಲೆ ಬಂದ ಮೂವರು ಹಲ್ಲೆಕೋರರು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಪಂಜಾಬಿನ ಅಮೃತಸರ್ ನ ಉಮರ್ಪುರ ಗ್ರಾಮದಲ್ಲಿನಡೆದಿದೆ. ಗ್ರಾಮದ ಮುಖ್ಯಸ್ಥೆಯಾಗಿದ್ದ ಮಹಿಳೆಯ ಪತಿ ಗುರುದೀಪ್ ಸಿಂಗ್  ಅವ್ರನ್ನು ದುಷ್ಕರ್ಮಿಗಳು ಗುಂಡಿಕ್ಕಿ

ಶ್ರೀನಗರ:  ತನ್ನ ಅಜ್ಜ ಮತ್ತು ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸಮಾಧಿಗೆ ಭೇಟಿ ನೀಡಲು ಯತ್ನಿಸಿದ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ಟಿಜಾ ಮುಫ್ತಿ  ಅವರನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದಲ್ಲಿ ತನ್ನ ಅಜ್ಜನ ಸಮಾಧಿಗೆ ಭೇಟಿ ನೀಡಲು

ಉಡುಪಿ:ಪಲಿಮಾರು ಶ್ರೀವಿದ್ಯಾಧೀಶರ ಪರ್ಯಾಯದ ಮುಕ್ತಾಯದ ಹ೦ತದ ಸಮಯದಲ್ಲಿ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ನಿರ್ಮಿಸಲಾದ ಸುದರ್ಶನ ಚಕ್ರವನ್ನು ಗುರುವಾರದ೦ದು ಲೋಕಾರ್ಪಣೆ ಮಾಡಲಾಯಿತು. ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸ೦ದರ್ಭದಲ್ಲಿ ಪರ್ಯಾಯ ಕಿರಿಯಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಹಾಗೂ ಅ೦ಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.

ನವದೆಹಲಿ: ದೆಹಲಿಯ ಪೀರಗರ್ಹಿ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಿಕ್ಕಿ ಹಾಕಿಕೊಂಡ ಆರು ಮಂದಿಯನ್ನು ರಕ್ಷಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡ ಜಂಟಿ ಕಾರ್ಯ ನಡೆಸಿ ಜನರನ್ನು ರಕ್ಷಿಸುತ್ತಿದ್ದಾರೆ. ಸ್ಥಳದಲ್ಲಿ ಹಾಜರಿದ್ದ ದೆಹಲಿ ಅಗ್ನಿಶಾಮಕ ಸೇವೆ ನಿರ್ದೇಶಕ ಅತುಲ್ ಗಾರ್ಗ್,