Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಲಖನೌ: ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸೂಕ್ತವಾಗುವಂತಹ ಐದು ಸ್ಥಳಗಳನ್ನು ಉತ್ತರಪ್ರದೇಶ ಸರ್ಕಾರ ಗುರುತು ಮಾಡಿದೆ. ಇತ್ತೀಚೆಗೆ ಬಾಬರಿ ಮಸೀದಿ, ರಾಮಜನ್ಮ ಭೂಮಿ  ಪ್ರಕರಣಕ್ಕೆ  ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಸುನ್ನಿ ಮಂಡಳಿಗೆ 5 ಎಕರೆ ಜಮೀನು ಕೊಡುವಂತೆ ಆದೇಶ ಮಾಡಲಾಗಿತ್ತು. ಬಾಬರಿ ಮಸೀದಿ

ಮಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ಗಲಭೆ ಮತ್ತು ಗೋಲಿಬಾರ್ ಬಳಿಕ ಪೊಲೀಸರ ವಿರುದ್ಧ ದಾಳಿ ಮಾಡಿ ರಕ್ತಪಾತ ನಡೆಸುವಂತೆ ಪ್ರಚೋದಿಸಿದ್ದ ಆರೋಪದಲ್ಲಿ ಯುವಕನೋರ್ವನನ್ನು ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಯ್ದೀನ್ ಹಫೀಜ್ ಬಂಧಿತ ಯುವಕ. ಈತ ನಗರದ ಪಾಂಡೇಶ್ವರ ನಿವಾಸಿಯಾಗಿದ್ದು, ಈತ ಫೇಸ್ ಬುಕ್ ಮತ್ತು ವ್ಯಾಟ್ಸಪ್ ನಲ್ಲಿ

ಸುರತ್ಕಲ್: ನೀರು ತುಂಬಿದ್ದ ಬಕೆಟ್ ಒಳಗೆ ಮಗುವೊಂದು ಬಿದ್ದು ಸಾವನ್ನಪ್ಪಿದ ಘಟನೆ ಸುರತ್ಕಲ್ ಕಡಂಬೋಡಿ ಬಳಿ ಮಂಗಳವಾರ ನಡೆದಿದೆ. ಒಂಬತ್ತು ತಿಂಗಳ ಮಗು ಯಶ್ ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಮದ್ಯಪ್ರದೇಶ ಮೂಲದ ಕುಟುಂಬ ಇಲ್ಲಿನ ಎಂಆರ್ ಪಿಎಲ್ ನಲ್ಲಿ ಕೆಲಸಕ್ಕೆ ಬಂದಿದ್ದು ಕಡಂಬೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ತಾಯಿ ಬೆಳಗಿನ ಕೆಲಸ

ರಾಮನಗರ: ಕನಕಪುರ ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದ್ದು, ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ಕಾಮಗಾರಿಗೆ

ಉಡುಪಿ ರಥಬೀದಿಯಲ್ಲಿರುವ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿ ಮ೦ಗಳವಾರದ೦ದು ಇತ್ತೀಚಿಗೆ ವಿಧಿವಶರಾದ ವಿಶ್ವವಿಖ್ಯಾತರಾಗಿದ್ದ ಉಡುಪಿಯ ಪೇಜಾವರ ಮಠದ ಹಿರಿಯ ಯತಿಗಳಾದ ಶ್ರೀವಿಶ್ವೇಶ ತೀರ್ಥಶ್ರೀಪಾದರ ಭಾವಚಿತ್ರಕ್ಕೆ ತುಳಸೀ ಮಾಲೆಯನ್ನು ಸಮರ್ಪಿಸುವುದರೊ೦ದಿಗೆ ಶ್ರದ್ದಾ೦ಜಲಿಯನ್ನು ಸಲ್ಲಿಸಲಾಯಿತು. ಚಿಕಿತ್ಸಾಲಯದ ವೈದ್ಯರಾದ ಡಾ.ಜಯ೦ತ್ ,ಪತ್ರಕರ್ತರಾದ ಟಿ.ಜಯಪ್ರಕಾಶ್ ಕಿಣಿ ಹಾಗೂ ಮ೦ಜುನಾಥ ಕುಣಿಬೆ೦ಚಿ ಬಾಗಲಕೋಟೆ ಈಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಔರಂಗಬಾದ್ :ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಆದ ಕೆಲ ತಾಸುಗಳಲ್ಲೇ ಅಸಮಾಧಾನ ಸ್ಫೋಟಗೊಂಡಿದ್ದು, ಬೀಡ್ ಜಿಲ್ಲೆಯ ಎನ್ ಸಿಪಿ ಶಾಸಕ ಪ್ರಕಾಶ್ ಸೊಲಾಂಕೆ ಸೋಮವಾರ ರಾತ್ರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಮ್ಮಂತವರು ರಾಜಕೀಯ ಮಾಡಲು ಅನರ್ಹರು ಎಂದು ಅವರು ಹೇಳಿದ್ದಾರೆ.  ಮಜಲ್ಗಾಂವ್  ಕ್ಷೇತ್ರದಿಂದ ನಾಲ್ಕು ಬಾರಿ  ಚುನಾಯಿತರಾಗಿರುವ ಸೋಲಾಂಕೆ ಅವರ

ನವದೆಹಲಿ: ಭಾರತೀಯ ಸೇನಾಪಡೆಯ ನೂತನ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಮುಕುಂದ್ ನರವಾಣೆಯವರು ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಹಾಲಿ ಸೇನಾ ಮುಖ್ಯಸ್ಥ ಜ.ರಾವತ್ ಮಂಗಳವಾರ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಲೆ.ಜ.ಮನೋಜ್ ನೇಮಕಗೊಂಡಿದ್ದಾರೆ. ಸೇನೆಯಲ್ಲಿ 37 ವರ್ಷ ಸೇವೆಯ ಅನುಭವ ಹೊಂದಿರುವ ಲೆ.ಜ.ಮನೋಜ್ ಈ ಅವಧಿಯಲ್ಲಿ ಚೀನಾ ಗಡಿ, ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಮಹತ್ವದ ಹುದ್ದೆ

ಚೆನ್ನೈ: ಎಣ್ಣೆ ಪಾರ್ಟಿ ಮಾಡಿ ಸಖತ್ ಆಗಿ ಕುಡಿದು ತೂರಾಡಿದ್ದು ನಾಲ್ವರು ಪಿಯು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ವಜಾ ಮಾಡಿದೆ. ತಮಿಳುನಾಡಿನ ಮೈಲಾಡುತುರೈನಲ್ಲಿರುವ ಖಾಸಗಿ ಕಾಲೇಜಿನ ಶಿಸ್ತು ಸಲಹಾ ಸಮಿತಿಯು ನಾಲ್ವರು ವಿದ್ಯಾರ್ಥಿನಿಯರನ್ನು ವಜಾ ಮಾಡಿದೆ. ಕಾಲೇಜು ವಿದ್ಯಾರ್ಥಿನಿಯ ಹುಟ್ಟುಹಬ್ಬ ಆಚರಿಸಿದ್ದರು. ಈ ವೇಳೆ ಸಹಪಾಠಿಗಳ ಸಹ ಜೊತೆ ಸೇರಿ

ಕೋಲಾರ: ಸಾವಿನಲ್ಲೂ ಒಂದಾದ ಅಪರೂಪದ ಘಟನೆ, ಕೋಲಾರದ ಪೇಟೆಚಾಮನಹಳ್ಳಿಯಲ್ಲಿ ನಡೆಗಿದೆ. 80 ವರ್ಷ ವಯಸ್ಸಿನ ಕೃಷ್ಣಪ್ಪ ಹಾಗೂ 68 ವರ್ಷ ವಯಸ್ಸಿನ ಜಯಮ್ಮ ಸಾವಿನಲ್ಲಿಯೂ ಒಂದಾಗಿರುವ ವೃದ್ಧ ದಂಪತಿ. ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕೃಷ್ಣಪ್ಪ, ಭಾನುವಾರದಂದೂ ಕೋಲಾರದಲ್ಲಿ ಆಸ್ಪತ್ರೆಗೆ ಹೋಗಿ ಬಂದಿದ್ದರು. ಸೋಮವಾರ ಬೆಳಗ್ಗೆ ಬೆಂಗಳೂರಿನ ಆಸ್ಪತ್ರೆಗೆ ಹೋಗಬೇಕಿತ್ತು.