Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ಮುಂಬಯಿ: ಅಮೆರಿಕದ ಅತೀ ದೊಡ್ಡ ನಾಗರಿಕ ಹೆಲಿಕಾಪ್ಟರ್‌ ಸೇವಾ ಸಂಸ್ಥೆ ಫ್ಲೈ ಬ್ಲೇಡ್‌ ಈಗ ಭಾರತದಲ್ಲಿ ನಗರಗಳನ್ನು ಸಂಪರ್ಕಿಸುವ ಹೆಲಿಕಾಪ್ಟರ್‌ ಸೇವೆ ಆರಂಭಿಸಿದೆ. ಸೋಮವಾರದಿಂದ ಈ ಸೇವೆ ಆರಂಭವಾಗಿದ್ದು, ಸುಲಭವಾಗಿ ಹೆಲಿಕ್ಯಾಪ್ಟರ್‌ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬಯಿ-ಪುಣೆ-ಶಿರಿಡಿ ಮಧ್ಯೆ ಪ್ರಯಾಣಿಸಬೇಕಾದರೆ ರಸ್ತೆಯಲ್ಲಿ 4 ರಿಂದ 6 ಗಂಟೆಗಳ ಪ್ರಯಾಣ ಮಾಡಲೇ ಬೇಕಾಗಿದೆ.

ಶ್ರೀನಗರ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಕಾಶ್ಮೀರದಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ವಹಿವಾಟು ಆರಂಭಿಸಿದೆ ಎಂದು ವರದಿ ತಿಳಿಸಿದೆ. 370ನೇ ವಿಧಿ ರದ್ದುಪಡಿಸಿದ ನಂತರ ಆಗಸ್ಟ್ 5ರಿಂದ ಕಾಶ್ಮೀರದಲ್ಲಿ ಅಂಗಡಿಗಳು ಕೇವಲ ಬೆಳಗ್ಗೆ ಮತ್ತು ಸಾಯಂಕಾಲ ಕೆಲ

ಶಬರಿಮಲೆ: ತನ್ನ ತಂದೆಯೊಂದಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಆಗಮಿಸಿದ್ದ ಪುದುಚೇರಿಯ 12 ವರ್ಷದ ಬಾಲಕಿಯನ್ನು ಪೋಲೀಸರು ಮಾರ್ಗಮಧ್ಯೆಯೇ ತಡೆದು ಹಿಂದೆ ಕಳಿಸಿದ್ದಾರೆ.ಬಾಲಕಿ ಮಂಗಳವಾರ ಬೆಳಿಗ್ಗೆ ಪಂಪಾ ಸಮೀಪಿಸಿದಾಗ ಪೋಲೀಸರು ಆಕೆಯನ್ನು ತಡೆಇದ್ದು ಆಕೆಗೆ ದೇವರ ದರ್ಶನಕ್ಕೆ ಅವಕಾಶ ನೀಡಿಲ್ಲ. ವರ್ಚುವಲ್ ಕ್ಯೂ ಬುಕಿಂಗ್‌ನಲ್ಲಿ "ಇರುಮುಡಿಕಟ್ಟು"ವಿನಲ್ಲಿ ಬಾಲಕಿಯ ವಯಸ್ಸು 10 ವರ್ಷವೆಂದು ನಮೂದಾಗಿತ್ತು.ಮಹಿಳಾ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುರಿಯ ಅಜಲಾಡಿ ಎಂಬಲ್ಲಿ ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರ ಕೊಲೆಗೈದ ಘಟನೆ ನಡೆದಿದೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಮೃತ ದುರ್ದೈವಿಗಳನ್ನು ಕೊಗ್ಗು ಸಾಹೇಬ್ (62) ಮತ್ತು ಮೊಮ್ಮಗಳು ಸಮೀಹ(14) ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಕೊಗ್ಗು

ಮಧ್ಯಪ್ರದೇಶ:ಕುಡಿದ ಮತ್ತಿನಲ್ಲಿ ತಾಯಿ, ಸಹೋದರಿ ಹಾಗೂ ತಮ್ಮನ ಪತ್ನಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಕಾಮುಕ ಮಗನನ್ನು ಪೋಷಕರೇ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಡಾಟಿಯಾ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ದಿನಂಪ್ರತಿ ಕಂಠಪೂರ್ತಿ ಕುಡಿದು ಬರುತ್ತಿದ್ದ ಮಗ ತಾಯಿ, ತಂಗಿ ಎನ್ನದೇ ಅತ್ಯಾಚಾರ ಎಸಗುತ್ತಿದ್ದ. ನವೆಂಬರ್ 11ರಂದು

ನವದೆಹಲಿ: 250ನೇ ಐತಿಹಾಸಿಕ ಕಲಾಪ ನಡೆಸಿದ ರಾಜ್ಯಸಭೆಯಲ್ಲಿ ಮಾರ್ಷಲ್'ಗಳು ಧರಿಸಿದ್ದ ಹೊಸ ಸಮವಸ್ತ್ರಕ್ಕೆ ಭಾರೀ ಟೀಕೆಗಳು ಹಾಗೂ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಹೊಸ ವಸ್ತ್ರಸಂಹಿತೆಯನ್ನು ಪರಿಶೀಲಿಸಲು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಆದೇಶಿಸಿದ್ದಾರೆ. ವಿವಿಧ ಸಲಹೆಗಳನ್ನು ಪರಿಗಣಿಸಿದ ನಂತರ ರಾಜ್ಯಸಭಾ ಸಚಿವಾಲಯ ಮಾರ್ಷಲ್‌ಗಳಿಗೆ ಹೊಸ ವಸ್ತ್ರಸಂಹಿತೆಯನ್ನು ರೂಪಿಸಿದೆ. ಆದರೆ ಕೆಲ

ನವದೆಹಲಿ: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಎನ್ ಸಿಪಿ ವರಿಷ್ಠ ಶರದ್ ಪವಾರ್ ಸೋಮವಾರ ಮಾತುಕತೆ ನಡೆಸುವ ಮುನ್ನವೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಉಲ್ಟಾ ಹೊಡೆದಿದ್ದು, ಸರ್ಕಾರ ರಚನೆ ಬಗ್ಗೆ ಬಿಜೆಪಿ ಮತ್ತು ಶಿವಸೇನಾ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಳ್ಳಲಿವೆ ಎಂದು ತಿಳಿಸಿದ್ದಾರೆ. ಲೋಕಸಭೆಯ ಆವರಣದಲ್ಲಿ

ಉಡುಪಿ: ಯಕ್ಷಗಾನ ಕಲಾರಂಗ ಕಲಾವಿದನ ಎರಡು ಮುಖಗಳನ್ನು ಜಗತ್ತಿಗೆ ಪರಿಚಯಿಸು ತ್ತಿದೆ. ಕಲಾವಿದನಿಗೆ ಬಣ್ಣ ಹಚ್ಚಲು ಅವಕಾಶ ನೀಡುವುದರ ಜತೆಗೆ ಅವರಿಗೆ ಪ್ರಶಸ್ತಿ ನೀಡುವ ಕೆಲಸ ಮಾಡುತ್ತಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದರು. ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠ, ಯಕ್ಷಗಾನ ಕಲಾ ರಂಗದ ಸಹಯೋಗದಲ್ಲಿ

ಹಾಂಕಾಂಗ್‌: ಪ್ರಜಾಪ್ರಭುತ್ವಕ್ಕಾಗಿ ಕಳೆದ 5 ತಿಂಗಳಿಂದ ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಯುವಜನತೆಯ ಪ್ರತಿಭಟನೆ, ಹಿಂಸಾಚಾರ ರವಿವಾರ ಮತ್ತಷ್ಟು ವಿಷಮ ಸ್ಥಿತಿಗೆ ತಿರುಗಿದೆ. ಹೋರಾಟ ಹತ್ತಿಕ್ಕಲು ಚೀನ ಸರಕಾರ, ತನ್ನ ಸೇನೆಯನ್ನು (ಪಿಎಲ್‌ಎ) ಹಾಂಕಾಂಗ್‌ ನಗರಕ್ಕೆ ರವಾನಿಸಿರುವ ಹಿನ್ನೆಲೆಯಲ್ಲಿ, ಮತ್ತಷ್ಟು ರೊಚ್ಚಿಗೆದ್ದಿರುವ ಜನತೆ ಮಾರಕಾಸ್ತ್ರ ಹಿಡಿದು ಬೀದಿಗಿಳಿದು, ಸೇನೆ ಹಾಗೂ ಭದ್ರತಾ ಪಡೆಗಳ

ಲಾಸ್ ಏಂಜಲೀಸ್: ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಉತ್ತರ ಲಾಸ್ ಏಂಜಲೀಸ್ ನಿಂದ ಸುಮಾರು 320 ಕಿಲೋ ಮೀಟರ್ ದೂರದಲ್ಲಿರುವ ಪ್ರೆಸ್ನೋ ಎಂಬಲ್ಲಿ ಮನೆಯ ಹೊರಭಾಗದಲ್ಲಿ 35 ಮಂದಿ ಫುಟ್ಬಾಲ್ ವೀಕ್ಷಿಸುತ್ತಿದ್ದ