Log In
BREAKING NEWS >
ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ..

ಏಲೂರು(ಆಂಧ್ರಪ್ರದೇಶ): ಸೈನೈಡ್ ಮಿಶ್ರಿತ ಪ್ರಸಾದ ನೀಡಿ ಕಳೆದ 20 ತಿಂಗಳೊಳಗೆ 10 ಜನರನ್ನು ಕೊಲೆ ಮಾಡಿದ ಆರೋಪಿಯನ್ನು ಪೋಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಕೊಲೆ ಆರೋಪಿ ವೆಲ್ಲಂಕಿ ಸಿಂಹಾದ್ರಿ ಎಂಬುವವರನ್ನು ಏಲೂರು ಪೋಲೀಸರು ಬಂಧಿಸಿದ್ದು ಆತನಿಗೆ ಸೈನೈಡ್ ಸರಬರಾಜು ಮಾಡುತ್ತಿದ್ದ ವಿಜಯವಾಡದ ಶೇಕ್ ಅಮೀನುಲ್ಲಾ ಎಂಬಾತನನ್ನು ಸಹ ಪೋಲೀಸರು ಬಂಧಿಸಿದ್ದಾರೆ. ಪಶ್ಚಿಮ ಗೋದಾವರಿ

ಇಂಫಾಲ್: ಮಣಿಪುರ ರಾಜಧಾನಿ ಇಂಫಾಲ್ ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಐವರು ಪೊಲೀಸ್ ಕಮಾಂಡೊಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಇಂಫಾಲ್ ನ ತಂಗಾಲ್ ಬಜಾರ್ ನಲ್ಲಿ ಇಂದು ಬೆಳಗ್ಗೆ 9.30ರ ಹೊತ್ತಿಗೆ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಗಾಯಗೊಂಡವರಲ್ಲಿ ಇಂಫಾಲ್ ಪಶ್ಚಿಮ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್,

ನವದೆಹಲಿ: ಸೋರಿಕೆಯಾಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಡಿಯೋವನ್ನು ಸುಪ್ರೀಂಕೋರ್ಟ್ ಸಾಕ್ಷ್ಯವಾಗಿ ಪರಿಗಣಿಸಿದೆ. ಸೋಮವಾರ ಸುಪ್ರೀಂಕೋರ್ಟ್ ಕದ ತಟ್ಟಿದ್ದ ಕಾಂಗ್ರೆಸ್, ಸಿಎಂ ಯಡಿಯೂರಪ್ಪರ ಆಡಿಯೋವನ್ನು ಪರಿಗಣಿಗಣಿಸಿ ಮತ್ತೆ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು. ನಮ್ಮ ಕಾನೂನಾತ್ಮಕ ಹೋರಾಟಕ್ಕೆ ಜಯ ಸಿಕ್ಕಿದೆ. ಶಾಸಕರು ರಾಜೀನಾಮೆ ನೀಡಲು ಯಾರು ಕಾರಣ ಎಂದು ಸಿಎಂ

ಅಯೋಧ್ಯೆ: ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತರ ಪ್ರದೇಶಕ್ಕೆ 4 ಸಾವಿರಕ್ಕೂ ಹೆಚ್ಚು ಅರೆಸೇನಾ ಪಡೆ ತುಕಡಿಗಳನ್ನು ಗಳನ್ನು ಕಳುಹಿಸುತ್ತಿದೆ. ನವೆಂಬರ್ 18ರವರೆಗೂ ಉತ್ತರ ಪ್ರದೇಶದಲ್ಲಿರುವಂತೆ 15 ಅರಸೇನಾ ಪಡೆಗಳ ತುಕಡಿಯನ್ನು ಉತ್ತರ

ಉಡುಪಿ:ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ವಿಶಿಷ್ಟ ಯೋಜನೆಯಾದ ಅಖಂಡ ಹರಿನಾಮ ಸಂಕೀರ್ತನಾ ಸೇವೆಯಲ್ಲಿ ಕುತ್ಯಾರಿನ "ಶ್ರೀ"ಭಜನಾ ಮಂಡಳಿಯ ಸದಸ್ಯರು ಭಜನಾ ಸೇವೆಯನ್ನು ನಡೆಸಿದರು.

ಉಡುಪಿ: ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸಮಗ್ರ ಮಹಾಭಾರತ ಕನ್ನಡ ಮತ್ತು ಸಂಸ್ಕೃತ ಮುದ್ರಿತ ಹಾಗೂ ಇ- ಬುಕ್‌ ಆವೃತ್ತಿ ಲೋಕಾರ್ಪಣೆಗೆ ಕ್ಷಣಗಣನೆ ಆರಂಭ ಗೊಂಡಿದೆ. ನ. 6ರಂದು ವ್ಯಾಸ-ದಾಸ- ವಿಜಯ ಉತ್ಸವ ಉದ್ಘಾಟನೆ ಗೊಳ್ಳಲಿದ್ದು, ನ. 7ರಂದು ಸಂಪುಟಗಳು ಬಿಡುಗಡೆ ಗೊಳ್ಳಲಿವೆ. ಪ್ರಾಚೀನ ಗ್ರಂಥಗಳ

ಶಿರ್ವ: ಇತ್ತೀಚಿಗೆ ಮೃತಪಟ್ಟ ರೆ ಫಾ ಮಹೇಶ್ ಡಿಸೊಜಾ ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮಂಗಳವಾರ ಮೌನ ಮೆರವಣಿಗೆ ಪ್ರತಿಭಟನೆ ನಡೆಯಿತು. ಶಿರ್ವ ಚರ್ಚ್ ನಿಂದ ಪೊಲೀಸ್ ಸ್ಟೇಶನ್ ವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು. ಪರಿಸರದ ಸ್ಥಳಿಯ ಕ್ರೈಸ್ತ ಮುಖಂಡರು, ಎಲ್ಲ ಧರ್ಮದ ಜನರು, ವ್ಯಾಪಾರಿಗಳು

ಶ್ರೀನಗರ: ಕಾಶ್ಮೀರ ಕಣಿವೆಯ ಶ್ರೀನಗರದ ಲಾಲ್ ಚೌಕ್ ಬಳಿ ಇರುವ ಜನನಿಬಿಡ ಅಮೀರಾ ಕದಲ್ ಮೇಲೆ ಸೋಮವಾರ ಉಗ್ರರು ಗ್ರೆನೇಡ್ ಎಸೆದಿದ್ದರಿಂದ ಓರ್ವ ನಾಗರಿಕ ಸಾವನ್ನಪ್ಪಿದ್ದು ಹದಿಮೂರು ಮಂದಿ ಗಾಯಗೊಂಡಿದ್ದಾರೆ ಉತ್ತರ ಕಾಶ್ಮೀರದ ಸೊಪೋರ್ ನಲ್ಲಿ ಕಳೆದ ವಾರ ಇದೇ ಬಗೆಯ ದಾಳಿಯಾಗಿ ಹದಿನೈದು ಮಂದಿ ಗಾಯಗೊಂಡಿದ್ದ ನಂತರ ಮತ್ತೆ

ಚಿಕ್ಕಮಗಳೂರು: ವಿದೇಶದಲ್ಲಿ ಉದ್ಯೋಗ ಮಾಡಬೇಕೆಂದುಕೊಂಡಿದ್ದ ಯುವತಿಯೊಬ್ಬಳು ರಸ್ತೆಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತಿಪಟೂರು ನಗರದಲ್ಲಿ ನಡೆದ ಘಟನೆಯಲ್ಲಿ ಸಿಂದೂಜಾ (23) ಎಂಬ ಯುವತಿ ರಸ್ತೆ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಸಿಂಧೂಜಾ ವಿದೇಶದಲ್ಲಿ ಉದ್ಯೋಗ  ಪಡೆಯುವ ಉದ್ದೇಶದೊಡನೆ ಪಾಸ್​ಪೋರ್ಟ್​ ಗೆ ಅಪ್ಲೇ ಮಾಡಿದ್ದಳು. ಅದರ ವೆರಿಫಿಕೇಷನ್ ಗಾಗಿ

ಬಾಗಲಕೋಟೆ: ಮತಾಂತರಕ್ಕೆ ಪ್ರಚೋಜಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಲಂಬಾಣಿ ಜನಾಂಗದ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರನ್ನು ತುಕಾರಾಮ ರಾಠೋಡ ಎಂಬಾತ ಮತಾಂತರಕ್ಕೆ ಯತ್ನಿಸುತ್ತಿದ್ದ, ಅಲ್ಲದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಹಣದ ನೀಡುವ ಆಮಿಷ ಸಹ ಒಡ್ಡಿದ್ದ. 35ಕ್ಕೂ ಹೆಚ್ಚು ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರನ್ನು ಒಂದೆಡೆ ಕೋಣೆಯೊಳಗೆ ಸೇರಿಸಿ