Log In
BREAKING NEWS >
ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ..

ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಬೆಳಗಾವಿಯ ಯೋಧ ಹುತಾತ್ಮನಾಗಿದ್ದಾನೆ. ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಭೈರು ಸುಳಗೇಕರ (22) ಎಂಬ ಯೋಧ ವೀರ ಮರಣವನ್ನಪ್ಪಿದ್ದಾರೆ. ಶುಕ್ರವಾರ ಮುಂಜಾನೆ ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ನಲ್ಲಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು.

ನವದೆಹಲಿ: ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರನ್ನು ಪಾಕಿಸ್ತಾನ ಆಹ್ವಾನಿಸಿದೆ ಎಂದು ತಿಳಿದುಬಂದಿದೆ. ಪಂಜಾಬ್ ರಾಜ್ಯದ ಗುರುದಾಸ್ ಪುರ ಜಿಲ್ಲೆಯಿಂದ ಪಾಕಿಸ್ತಾನದಲ್ಲಿರುವ ಕರ್ತಾರ್ಪುರ ದರ್ಬಾರ್ ಸಾಹೀಬ್'ಗೆ ಹೆದ್ದಾರಿ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆಗೆ ಗುರೂಜಿಯವರಿಗೆ ಆಹ್ವಾನ ನೀಡಲಾಗಿದೆ. ಸಿಖ್ ಪಂಥದ ಸ್ಥಾಪಕ ಗುರುನಾನಕ್ ಅವರು

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಸಾಮರಸ್ಯಕ್ಕೆ ಬಂದು ಇನ್ನೇನು ಸರ್ಕಾರ ರಚನೆ ಮಾಡುತ್ತವೆ ಅನ್ನುವಷ್ಟರಲ್ಲಿ ಹೊಸ ಬೆಳವಣಿಗೆಗಳನ್ನು ನಡೆದಿವೆ. ನಿನ್ನೆ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡುತ್ತದೆ ಎಂದು ಅಂದುಕೊಂಡಿದ್ದರೆ ಆಗಿದ್ದೇ ಬೇರೆ. ಶಿವಸೇನೆಯಿಂದ ಇನ್ನೂ ಬೆಂಬಲ ಸಿಗದಿರುವುದರಿಂದ

ಅಯೋಧ್ಯೆ ತೀರ್ಪು ಹಿಂದೂಗಳ ಪರವಾಗಿ ಬರುವ ನಿರೀಕ್ಷೆ ಇದೆ ಆದರೆ ಯಾರೂ ಕೂಡ ವಿಜಯೋತ್ಸವ ಮಾಡಬಾರದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀಗಳು ವಿಜಯೋತ್ಸವ ಮಾಡಿ ಯಾವುದೇ ಸಮುದಾಯದ ಶಾಂತಿಭಂಗ ಆಗಬಾರದು. ಕರಾವಳಿಯಲ್ಲಿ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು ತೀರ್ಪು ಯಾರ ಪರ ಬಂದರೂ ಜನರು

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನಾ-ಬಿಜೆಪಿ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟು ಮುಂದುವರಿದಿದ್ದು, ನಾನು ಮೈತ್ರಿ ಮುರಿದುಕೊಳ್ಳಲು ಬಯಸುವುದಿಲ್ಲ. ಆದರೆ ಬಿಜೆಪಿ ತಾನು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ. ಇಂದು ಬಾಂದ್ರಾದ ತಮ್ಮ ನಿವಾಸ ಮಾತೋಶ್ರೀಯಲ್ಲಿ ಪಕ್ಷದ ಶಾಸಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ

ಗುವಾಹಟಿ: ಆರು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಅವರಿಗೆ ವಿಶ್ವ ಒಲಿಂಪಿಯನ್ಸ್ ಅಸೋಸಿಯೇಷನ್ ​​(ಡಬ್ಲ್ಯುಒಎ) ತನ್ನ ವತಿಯಿಂದ  'OLY' (ಒಲಿಂಪಿಯನ್) ಗೌರವದ ಸ್ಥಾನಮಾನ ನೀಡಿದೆ. ಮಣಿಪುರದ ಬಾಕ್ಸರ್‌ಗೆ ಡಬ್ಲ್ಯುಒಎ ಅಧ್ಯಕ್ಷ ಜೋಯಲ್ ಬೌಜೌ ಸಹಿ ಮಾಡಿರುವ OLY ಮಾನ್ಯತೆಯ ಪ್ರಮಾಣಪತ್ರವು ಸಿಕ್ಕಿದ್ದು ಒಲಿಂಪಿಯನ್ ಆಗಿ ನಿಮ್ಮ

ಉಡುಪಿ: ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸಮಗ್ರ ಮಹಾಭಾರತ ಕನ್ನಡ ಮತ್ತು ಸಂಸ್ಕೃತ ಮುದ್ರಿತ ಹಾಗೂ ಇ- ಬುಕ್‌ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮವು ಗುರುವಾರದ೦ದು ವಿಜೃ೦ಭಣೆಯಿ೦ದ ನಡೆಯಿತು. ನ. 6ರಂದು ವ್ಯಾಸ-ದಾಸ- ವಿಜಯ ಉತ್ಸವ ಉದ್ಘಾಟನೆಗೊ೦ಡು ನ. 7ರಂದು ಸಂಪುಟಗಳು ಬಿಡುಗಡೆಗೊ೦ಡಿತು.

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ನಡೆದ ರಾಜ್ಯ ಮತ್ತು ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಮೂಲದ ನಾಲ್ವರು ಅಮೆರಿಕನ್ ಪ್ರಜೆಗಳು ಜಯಗಳಿಸುವ ಮೂಲಕ ಇತಿಹಾಸ ದಾಖಲಿಸಿರುವುದಾಗಿ ವರದಿ ತಿಳಿಸಿದೆ. ಭಾರತೀಯ ಮೂಲದ ಘಾಝಾಲಾ ಹಾಶ್ಮಿ (ಕಮ್ಯೂನಿಟಿ ಕಾಲೇಜಿನ ನಿವೃತ್ತ ಪ್ರೊಫೆಸರ್) ವರ್ಜಿನಿಯಾ ಸ್ಟೇಟ್ ಸೆನೆಟ್ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎಂಬ

ಕೇರಳ: 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡದಿದೆ. ಆರೋಪಿಗಳಾದ ಲಿತಿನ್ (19), ಬಿಬಿನ್ (25) ಮತ್ತು ವರ್ಷಾ (25) ರನ್ನು ಎರ್ನಾಕುಲಂ ನಗರ ಪೊಲೀಸ್ ಠಾಣೆಯ ಪೊಲೀಸರು ನ.6ರ ಬುಧವಾರ ಬಂಧಿಸಿದ್ದು, ಅವರನ್ನು ಪೋಕ್ಸೋ ಕೋರ್ಟ್ ಆದೇಶದಂತೆ 14

ಉಡುಪಿ: ರಾಜೀವ್‌ ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ (ಆರ್‌ಜಿಪಿಎಸ್‌) ವತಿಯಿಂದ ಗಾಂಧೀಜಿ 150ನೆಯ ಜನ್ಮದಿನಾಚರಣೆ ಪ್ರಯುಕ್ತ ಕೊರಂಗ್ರಪಾಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಳಿನಿ ಅವರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಬುಧವಾರ ಹಸ್ತಾಂತರಿಸಿ ಸಂಘಟನೆಯ ಸೇವಾ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್‌,