Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಮು೦ಬರುವ ಮಾಗ ಮಾಸದಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮವು ಜರಗಲಿದೆ.....ವರ್ಷ೦ಪ್ರತಿ ನವರಾತ್ರೆಯ೦ದು ನಡೆಯಲಿರುವ ಶ್ರೀಶಾರದಾ ಪೂಜಾ ಕಾರ್ಯಕ್ರಮವು ವಿಜೃ೦ಭಣೆಯಲ್ಲಿ ಜರಗಲಿದೆ....

ಉಡುಪಿ: ರಾಷ್ಟ್ರೀಯ ಹೆದ್ದಾರಿಯ ಬಸ್‌ ನಿಲ್ದಾಣದಲ್ಲಿ ಅಪಘಾತ ತಪ್ಪಿಸಲು ಜಿಲ್ಲಾ ಪೊಲೀಸ್‌ ಇಲಾಖೆ ಪ್ರಾಯೋಗಿಕವಾಗಿ ಹೆದ್ದಾರಿ ಡಿವೈಡರ್‌ ಮಧ್ಯದಲ್ಲಿ ಹಸಿರು ಬಣ್ಣದ ಪರದೆ ಅಳವಡಿಸಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್‌ ಹಿಡಿಯುವ ತರಾತುರಿಯಲ್ಲಿ ಎಲ್ಲೆಂದರಲ್ಲಿ ರಸ್ತೆ ದಾಟುತ್ತಿದ್ದಾರೆ. ಇದರಿಂದಾಗಿ ವೇಗವಾಗಿ ಬರುವ ವಾಹನ ಸವಾರರು ಒಮ್ಮೆಲೇ ಬ್ರೇಕ್‌ ಹಾಕುವುದರಿಂದ ನಿಯಂತ್ರಣ ತಪ್ಪಿ

ಬುಡಾಪೆಸ್ಟ್( ಹಂಗೇರಿ) : ಅಂಡರ್ 23 ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪೂಜಾ ಗೆಹ್ಲೋಟ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಜಪಾನಿನ ಹರುನೊ ಒಕುನೊ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. 2017ರ ಪೋಲ್ಯಾಂಡ್ ಕೂಟದಲ್ಲೂ ಭಾರತದ ಕುಸ್ತಿ ಪಟು ರಿತು ಪೋಗಟ್ ಬೆಳ್ಳಿ

ನವದೆಹಲಿ: ರಾಜಧಾನಿ ದೆಹಲಿಯ ಮಾಲಿನ್ಯ ಮಟ್ಟ ತೀರಾ ಹದಗೆಟ್ಟಿದ್ದು ಅಸ್ತಮಾದಿಂದ ಬಳಲುತ್ತಿರುವವರು ಉಸಿರಾಟದ ತೊಂದರೆಗೊಳಗಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯ ವಿಜಯ್ ಹಡ್ಡಾ, ಆಸ್ತಮಾದೊಂದಿಗೆ ಹೋರಾಡುವ ರೋಗಿಗಳು ವಾಯುಮಾಲಿನ್ಯದಿಂದಾಗಿ ಶಾಶ್ವತವಾಗಿ ಅಸ್ತಮಾ ಹೊಂದುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ದಿನದಿಂದ ದಿನಕ್ಕೆ ಮಾಲಿನ್ಯ ಮಟ್ಟ ಇಳಿಕೆಯಾಗುತ್ತಿರುವುದರಿಂದ ಜನರ ನಿತ್ಯ ಜೀವನದಲ್ಲಿ

ನವದೆಹಲಿ: ಚಂದ್ರಯಾನ -2 ಮುಗಿದ ಅಧ್ಯಾಯವಲ್ಲ ಎಂದಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಲ್ಯಾಂಡರನ್ನು ಮತ್ತೊಮ್ಮೆ ಖಚಿತವಾಗಿ ಇಳಿಸಲಾಗುವುದು ಎಂದು ಶನಿವಾರ ಹೇಳಿದ್ದಾರೆ. ಇಸ್ರೋ ಚಂದ್ರನ ಕ್ಷಿಣ ಧ್ರುವದಲ್ಲಿ ವಿಕ್ರಮ ಲ್ಯಾಂಡರ್ ಅನ್ನು ಇಳಿಸುವ ಮತ್ತೊಂದು ಪ್ರಯತ್ನ ಮಾಡಲಿದೆಯೇ? ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶವನ್

ಬ್ಯಾಂಕಾಕ್: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ (ಆರ್‌ಸಿಇಪಿ) ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಭಾರತ ಸೂಕ್ತವಾದ ಪ್ರಸ್ತಾಪಗಳನ್ನು ಮುಂದಿಟ್ಟು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪ್ರಾಮಾಣಿಕವಾಗಿ ಮಾತುಕತೆಯಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬ್ಯಾಂಕಾಕ್ ನಲ್ಲಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ಪರಸ್ಪರ ಸಹಾಯವಾಗುವ ಆರ್ ಸಿಇಪಿ ಒಪ್ಪಂದ ಕುರಿತು

ಬೆಂಗಳೂರು: ರಾಜ್ಯದಲ್ಲಿರುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿಯಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಅವರು ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ 64ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಭಾಷಣ ಮಾಡಿ, ಇಂಗ್ಲಿಷ್ ಭಾಷೆಯ ಮೇಲೆ ವ್ಯಾಮೋಹ ಬೇಡ. ಕನ್ನಡ ಭಾಷೆ ಬೆಳೆಯಲು ಅದರದ್ದೇ ಆದ ಸಾಮರ್ಥ್ಯವನ್ನು ಹೊಂದಿದೆ. ಕನ್ನಡಿಗರ ವಿಷಯ ಬಂದಾಗ

ಉಡುಪಿ: ಉಡುಪಿಯಲ್ಲಿ ನಡೆಯಲಿರುವ ಬೃಹತ್ ಯೋಗ ಶಿಬಿರದ ಕರಪತ್ರದಲ್ಲಿ ಕನ್ನಡಕ್ಕೆ ಅಪಮಾನವಾಗಿರುವುದು ಭಾರೀ ಚರ್ಚಗೆ ಗ್ರಾಸವಾಗಿ ಬುದ್ಧಿವ೦ತರ ನಾಡು ಎ೦ದು ಬೆನ್ನು ತಟ್ಟಿಕೊಳ್ಳುತ್ತಿರುವ ಉಡುಪಿಯ ಜನತೆ ತಲೆ ತಗ್ಗಿಸುವ೦ತೆ ಮಾಡಿದೆ. ಕನ್ನಡರಾಜ್ಯೋತ್ಸವದ ದಿನವಾದ ಶುಕ್ರವಾರದ೦ದು ಯೋಗ ಪೀಠದ ಕಾರ್ಯಕರ್ತರು ನಗರದ ರಥಬೀದಿಯಲ್ಲಿ ಅ೦ಗಡಿ. ಅ೦ಗಡಿಗೆ ಈ ಕರಪತ್ರವನ್ನು ಶ್ವೇತದಾರಿವಸ್ರ್ತವನ್ನು ಧರಿಸಿ

ಮುಂಬೈ: ಬಿಜೆಪಿ ಮತ್ತು ಶಿವಸೇನಾ ಮೈತ್ರಿಪಕ್ಷಗಳ ಬಿಕ್ಕಟ್ಟಿನಿಂದಾಗಿ ಒಂದು ವೇಳೆ ನವೆಂಬರ್ 7ರೊಳಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡ ಸುಧೀರ್ ಮುಂಗಾಂಟಿವರ್ ತಿಳಿಸಿದ್ದಾರೆ. ಅಕ್ಟೋಬರ್ 21ರಂದು ವಿಧಾನಸಭೆ ಚುನಾವಣೆ ನಡೆದಿದ್ದು, ಫಲಿತಾಂಶ ಘೋಷಣೆಯಾದ ಎಂಟು ದಿನದೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗಿನ ಜಾವ ಅನುಮಾನಾಸ್ಪದ ಬ್ಯಾಗ್'ವೊಂದು ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ ಆರ್'ಡಿಎಕ್ಸ್ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ವಿಮಾನ ನಿಲ್ದಾಣದಲ್ಲಿ ಆರ್'ಡಿಎಕ್ಸ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಕೆಲ ಗಂಟೆಗಳ ಕಾಲ ನಿಲ್ದಾಣದಲ್ಲಿ ಪ್ರಯಾಣಿಕರ ಚಲನವಲನಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಬೆಳವಣಿಗೆಗಳು

ನವದೆಹಲಿ: ಕಪ್ಪುಹಣದ ಮೂಲಕ ಖರೀದಿ ಮಾಡಿರುವ ಚಿನ್ನ ಪತ್ತೆಗಾಗಿ ಕೇಂದ್ರ ಸರ್ಕಾರ ಚಿನ್ನ ಕ್ಷಮಾದಾನ ಯೋಜನೆ ಜಾರಿಗೆ ಮುಂದಾಗಿದೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಇಂತಹ ಯಾವುದೇ ಪ್ರಸ್ತಾಪಗಳೂ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಚಿನ್ನ ಕ್ಷಮಾದಾನದಂತಹ ಯಾವುದೇ ಯೋಜನೆ ಜಾರಿಗೊಳಿಸುವ ಪ್ರಸ್ತಾಪ ಆದಾಯ ತೋರಿಗೆ ಇಲಾಖೆ