Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನಾ-ಬಿಜೆಪಿ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟು ಮುಂದುವರಿದಿದ್ದು, ನಾನು ಮೈತ್ರಿ ಮುರಿದುಕೊಳ್ಳಲು ಬಯಸುವುದಿಲ್ಲ. ಆದರೆ ಬಿಜೆಪಿ ತಾನು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ. ಇಂದು ಬಾಂದ್ರಾದ ತಮ್ಮ ನಿವಾಸ ಮಾತೋಶ್ರೀಯಲ್ಲಿ ಪಕ್ಷದ ಶಾಸಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ

ಗುವಾಹಟಿ: ಆರು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಅವರಿಗೆ ವಿಶ್ವ ಒಲಿಂಪಿಯನ್ಸ್ ಅಸೋಸಿಯೇಷನ್ ​​(ಡಬ್ಲ್ಯುಒಎ) ತನ್ನ ವತಿಯಿಂದ  'OLY' (ಒಲಿಂಪಿಯನ್) ಗೌರವದ ಸ್ಥಾನಮಾನ ನೀಡಿದೆ. ಮಣಿಪುರದ ಬಾಕ್ಸರ್‌ಗೆ ಡಬ್ಲ್ಯುಒಎ ಅಧ್ಯಕ್ಷ ಜೋಯಲ್ ಬೌಜೌ ಸಹಿ ಮಾಡಿರುವ OLY ಮಾನ್ಯತೆಯ ಪ್ರಮಾಣಪತ್ರವು ಸಿಕ್ಕಿದ್ದು ಒಲಿಂಪಿಯನ್ ಆಗಿ ನಿಮ್ಮ

ಉಡುಪಿ: ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸಮಗ್ರ ಮಹಾಭಾರತ ಕನ್ನಡ ಮತ್ತು ಸಂಸ್ಕೃತ ಮುದ್ರಿತ ಹಾಗೂ ಇ- ಬುಕ್‌ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮವು ಗುರುವಾರದ೦ದು ವಿಜೃ೦ಭಣೆಯಿ೦ದ ನಡೆಯಿತು. ನ. 6ರಂದು ವ್ಯಾಸ-ದಾಸ- ವಿಜಯ ಉತ್ಸವ ಉದ್ಘಾಟನೆಗೊ೦ಡು ನ. 7ರಂದು ಸಂಪುಟಗಳು ಬಿಡುಗಡೆಗೊ೦ಡಿತು.

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ನಡೆದ ರಾಜ್ಯ ಮತ್ತು ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಮೂಲದ ನಾಲ್ವರು ಅಮೆರಿಕನ್ ಪ್ರಜೆಗಳು ಜಯಗಳಿಸುವ ಮೂಲಕ ಇತಿಹಾಸ ದಾಖಲಿಸಿರುವುದಾಗಿ ವರದಿ ತಿಳಿಸಿದೆ. ಭಾರತೀಯ ಮೂಲದ ಘಾಝಾಲಾ ಹಾಶ್ಮಿ (ಕಮ್ಯೂನಿಟಿ ಕಾಲೇಜಿನ ನಿವೃತ್ತ ಪ್ರೊಫೆಸರ್) ವರ್ಜಿನಿಯಾ ಸ್ಟೇಟ್ ಸೆನೆಟ್ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎಂಬ

ಕೇರಳ: 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡದಿದೆ. ಆರೋಪಿಗಳಾದ ಲಿತಿನ್ (19), ಬಿಬಿನ್ (25) ಮತ್ತು ವರ್ಷಾ (25) ರನ್ನು ಎರ್ನಾಕುಲಂ ನಗರ ಪೊಲೀಸ್ ಠಾಣೆಯ ಪೊಲೀಸರು ನ.6ರ ಬುಧವಾರ ಬಂಧಿಸಿದ್ದು, ಅವರನ್ನು ಪೋಕ್ಸೋ ಕೋರ್ಟ್ ಆದೇಶದಂತೆ 14

ಉಡುಪಿ: ರಾಜೀವ್‌ ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ (ಆರ್‌ಜಿಪಿಎಸ್‌) ವತಿಯಿಂದ ಗಾಂಧೀಜಿ 150ನೆಯ ಜನ್ಮದಿನಾಚರಣೆ ಪ್ರಯುಕ್ತ ಕೊರಂಗ್ರಪಾಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಳಿನಿ ಅವರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಬುಧವಾರ ಹಸ್ತಾಂತರಿಸಿ ಸಂಘಟನೆಯ ಸೇವಾ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್‌,

ಮುಂಬೈ:ಮಹಾರಾಷ್ಟ್ರದಲ್ಲಿ ಶಿವಸೇನಾ-ಬಿಜೆಪಿ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟು ಮುಂದುವರಿದಿದ್ದು, ಮಹಾರಾಷ್ಟ್ರ ರಾಜ್ಯರಾಜಕಾರಣಕ್ಕೆ ತಾನು ಮತ್ತೆ ಮರಳುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಪಟ್ಟು ಸಡಿಲಿಸದ ಶಿವಸೇನಾ ಇದೀಗ ತನ್ನ ಶಾಸಕರನ್ನು ರೆಸಾರ್ಟ್ ನತ್ತ ಕರೆದೊಯ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಮಹಾರಾಷ್ಟ್ರದಲ್ಲಿ ನಿತಿನ್ ಗಡ್ಕರಿ

ಚಿಕ್ಕೋಡಿ: ಪಟ್ಟಣದ ಮೆಹಬೂಬ ನಗರದ ಬಳಿ ಶಾಲಾ ವಾಹನ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೆ ಸಾವಿಗೀಡಾದ ಘಟನೆ ನಡೆದಿದೆ. ಶಾಲಾ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ನಡೆದಿದೆ. ಚಿಕ್ಕೋಡಿ ಪಟ್ಟಣದ ಸೇಂಟ್ ಫ್ರಾನ್ಸಿಸ್ ಶಾಲೆಗೆ ಸೇರಿದ ಬಸ್ ಢಿಕ್ಕಿ ಹೊಡೆದು, 5 ವರ್ಷದ ಬಾಲಕಿ ಸ್ಥಳದಲ್ಲಿಯೇ ಮೃಪಪಟ್ಟಿದ್ದಾಳೆ. ತಾಯಿ ಹಾಗೂ ಸಹೋದರ

ಲಕ್ನೋ/ನವದೆಹಲಿ:ಬಹು ನಿರೀಕ್ಷಿತ ಹಾಗೂ ಅತೀ ಸೂಕ್ಷ್ಮ ಪ್ರಕರಣವಾಗಿರುವ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಭೂ ವಿವಾದದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರಪ್ರದೇಶ ಸರ್ಕಾರ ಅಂಬೇಡ್ಕರ್ ನಗರದಲ್ಲಿರುವ ವಿವಿಧ ಕಾಲೇಜುಗಳಲ್ಲಿ ಎಂಟು ತಾತ್ಕಾಲಿಕ ಜೈಲುಗಳನ್ನು ಸ್ಥಾಪಿಸಿರುವುದಾಗಿ ವರದಿ ತಿಳಿಸಿದೆ. ಅಕ್ಬರ್ ಪುರ್, ಟಾನ್ ಡಾ, ಜಲಾಲ್ ಪುರ್, ಜೈಟ್ ಪುರ್,

ಬೆಂಗಳೂರು: ಕರವೇ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರ ಪ್ರತಿಭಟನೆ ಗುರುವಾರವೂ ಮುಂದುವರಿದಿದ್ದು, ಶುಕ್ರವಾರದಿಂದ ಪ್ರತಿಭಟನೆ ತೀವ್ರಗೊಳ್ಳಲಿದ್ದು, ರಾಜ್ಯಾದ್ಯಂತ ಒಪಿಡಿ ಬಂದ್ ಮಾಡಲಾಗುವುದು ಎಂದು ವೈದ್ಯರ ಸಂಘಟನೆ ತಿಳಿಸಿದೆ. ನಾಳೆ ಬೆಳಗ್ಗೆ 6ಗಂಟೆಯಿಂದ ಶನಿವಾರ ಬೆಳಗ್ಗೆ 6ಗಂಟೆವರೆಗೆ ರಾಜ್ಯಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಯ