Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಒಮನ್: ಒಮನ್ ನ ಮಸ್ಕತ್ ನಗರದಲ್ಲಿ ನೀರಿನ ಕೊಳವೆ ಮಾರ್ಗ ಜೋಡಣೆ ಯೋಜನೆಗೆಂದು ಗುಂಡಿ ಅಗೆಯುತ್ತಿದ್ದ ಆರು ಮಂದಿ ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ. ಮಸ್ಕತ್ ನ ಸೀಬ್ ಪ್ರದೇಶದಲ್ಲಿ ಭಾನುವಾರ ಈ ದುರ್ಘಟನೆ ಸಂಭವಿಸಿದೆ. ಸುಮಾರು 14 ಮೀಟರ್ ಆಳದಷ್ಟು ಮಣ್ಣು ಅಗೆದು, ಕಾಮಗಾರಿ ಕೈಗೊಳ್ಳಲಾಗಿತ್ತು. ಭಾನುವಾರ ಸುರಿದ ಭಾರೀ

ಕಟಪಾಡಿ: ಮೀನು ಸಾಗಾಟದ ಟಾಟಾ ಏಸ್ ವಾಹನವೊಂದು ಟಯರ್ ಸ್ಪೋಟಗೊಂಡು  ಪಲ್ಟಿಯಾದ ಪರಿಣಾಮ ಕಾರ್ಗಿಲ್ ಮೀನುಗಳು ಹೆದ್ದಾರಿಯುದ್ದಕ್ಕೂ ಚೆಲ್ಲಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಇಂದು ಮುಂಜಾನೆ ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಟಾಟಾ ಏಸ್ ವಾಹನ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಿರುವು ಹೆದ್ದಾರಿ 66

ನವದೆಹಲಿ: ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಎಲ್ಲಾ 17 ಅನರ್ಹ ಶಾಸಕರು ನವೆಂಬರ್ 14ರಂದು ಬಿಜೆಪಿ ಸೇರಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ಬುಧವಾರ ಹೇಳಿದ್ದಾರೆ. ಅನರ್ಹ ಶಾಸಕರು ಬಿಜೆಪಿ ಸೇರಲು ಆಸಕ್ತಿ ತೋರಿಸುತ್ತಿದ್ದು, ಈ ಸಂಬಂಧ ಈಗಾಗಲೇ ನಮ್ಮ ಪಕ್ಷದ ಹಿರಿಯ

ನ್ಯೂಯಾರ್ಕ್: ಅಮೆರಿಕಾದ ಬಹುದೊಡ್ಡ ಕಲಾಕೇಂದ್ರವೆನಿಸಿರುವ ನ್ಯೂಯಾರ್ಕ್ ನ ಮೆಟ್ರೊಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ಗೆ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಗೌರವಾನ್ವಿತ ಟ್ರಸ್ಟಿಯಾಗಿ ಆಯ್ಕೆಯಾಗಿದ್ದಾರೆ. ವಸ್ತು ಸಂಗ್ರಹಾಲಯದ ಅಧ್ಯಕ್ಷ ಡೇನಿಯಲ್ ಬ್ರಾಡ್ಸ್ಕಿ, ಮೆಟ್ರೊಪಾಲಿಟನ್ ಕಲಾ ವಸ್ತು ಸಂಗ್ರಹಾಲಯದ ಮೇಲೆ ನೀತಾ ಅಂಬಾನಿ ತೋರಿಸುತ್ತಿರುವ ಬದ್ಧತೆ ಮತ್ತು ಭಾರತದ ಕಲೆ, ಸಂಸ್ಕೃತಿಯನ್ನು

ತಿರುವನಂತಪುರಂ: ಅಯೋಧ್ಯೆ ತೀರ್ಪು ಬಂದ ನಂತರ ದೇಶದ ಜನತೆ ಬಹುಕಾಲದಿಂದ ಕಾಯುತ್ತಿರುವ ಇನ್ನೊಂದು ಮಹತ್ವದ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನಾಳೆ ಉಚ್ಚರಿಸಲಿದೆ. ಅದುವೇ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಮರುಪರಿಶೀಲನೆ ಅರ್ಜಿ ತೀರ್ಪಾಗಿದೆ. ಸುಪ್ರೀಂ ಕೋರ್ಟ್ ಗುರುವಾರ ಶಬರಿಮಲೆ ಪರಿಶೀಲನಾ ಅರ್ಜಿಗಳ ಕುರಿತಂತೆ ತನ್ನ ತೀರ್ಮಾನ ಹೇಳಲಿದೆ.

ನವದೆಹಲಿ: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ(ಸಿಜೆಐ) ಕಚೇರಿ ಸಹ ಮಾಹಿತಿ ಹಕ್ಕು ಕಾಯಿದೆ(ಆರ್ ಟಿಐ) ಅಡಿ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮತ್ತೊಂದು ಮಹತ್ವದ ತೀರ್ಪು ನೀಡಿದೆ. 2010ರಲ್ಲಿಯೇ ಸುಪ್ರೀಂಕೋರ್ಟ್ ಸಾರ್ವಜನಿಕ ಉತ್ತರದಾಯಿತ್ವ ಹೊಂದಿದ್ದು, ಸಿಜೆಐ ಕಚೇರಿ ಕೂಡಾ ಆರ್ ಟಿಐ ಕಾಯ್ದೆಯಡಿ ಬರಬೇಕಾಗಿದೆ ಎಂದು ದೆಹಲಿ ಹೈಕೋರ್ಟ್

ಬಾಲಿವುಡ್ ನಟಿ ರಾಣಿ ಮುಖರ್ಜಿ ತಮ್ಮ ‘ಹಿಚ್ಕಿ’ ಚಿತ್ರಕ್ಕಾಗಿ ಅತ್ಯಂತ ಪ್ರಭಾವಶಾಲಿ ಸಿನಿಮಾ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೈಋತ್ಯ ಏಷಿಯಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ರಾಣಿ ಮುಖರ್ಜಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಣಿ ಸಿದ್ದಾರ್ಥ್ ಪಿ.ಮಲ್ಹೋತ್ರ ನಿರ್ದೇಶನದ ‘ಹಿಚ್ಕಿ’ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಣಿ,

ನವದೆಹಲಿ/ಲಕ್ನೋ: ರಾಮಮಂದಿರ ನಿರ್ಮಾಣಕ್ಕಾಗಿ 2020ರಲ್ಲಿ ಜನವರಿಯ ಮಕರ ಸಂಕ್ರಮಣ ದಿನ ಶಿಲಾನ್ಯಾಸ ಕಾರ್ಯ ನೆರವೇರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವರದಿಯ ಪ್ರಕಾರ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಮೂರು ತಿಂಗಳೊಳಗೆ ಟ್ರಸ್ಟ್ ರಚಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಪ್ರಕಾರ ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶೀಘ್ರವೇ ಚಾಲನೆ

ಉಡುಪಿಯ ಶೋಕಮಾತ ಚರ್ಚನಲ್ಲಿ ಸಾ೦ತ್ ಮಾರಿ ಹಬ್ಬವು ಮ೦ಗಳವಾರ ಮತ್ತು ಬುಧವಾರದ೦ದು ಜರಗಲಿದ್ದು ಆ ಪ್ರಯುಕ್ತವಾಗಿ ನಗರದಲ್ಲಿ ಮೋ೦ಭತ್ತಿಯನ್ನು ಬೆಳಕಿಸಿ ಭಾನುವಾರದ೦ದು ನಗರದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ಚರ್ಚ್ ಕಟ್ಟಡವನ್ನು ವಿದ್ಯುತ್ ದೀಪಾಲ೦ಕಾರದಿ೦ದ ಅಲ೦ಕರಿಸಲಾಗಿದೆ.

ಹೈದ್ರಾಬಾದ್ :  ಕಾಚಿಗೂಡು ರೈಲು ನಿಲ್ದಾಣದಲ್ಲಿ ಎರಡು ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಲಾಕ್ನೂಮ್ ಕಡೆಗೆ ತೆರಳುತ್ತಿದ್ದ ಎಂಎಂಟಿಸ್ ರೈಲುವ  ಕರ್ನೂಲ್ ಕಡೆಯಿಂದ ಬರುತ್ತಿದ್ದ ಎಕ್ಸ್ ಪ್ರೆಸ್ ಗೆ ಬೆಳಗ್ಗೆ 10-30ರ ಸುಮಾರಿನಲ್ಲಿ ಡಿಕ್ಕಿ ಹೊಡೆದಿದೆ.ಅಪಘಾತದ ಸುದ್ದಿ