Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಉಡುಪಿ:ಕನಕದಾಸರ ಕೀರ್ತನೆಗಳು, ತತ್ವಗಳನ್ನು ಅರಿಯವುದರ ಮೂಲಕ ಸಮಾಜದಲ್ಲಿ ಎಲ್ಲಾ ಸಮುದಾಯಗಳ ಜನರು ಶಾಂತಿ ಸಹಬಾಳ್ವೆಯಿಂದ ಬಾಳಲು ಸಾದ್ಯವಿದೆ, ಈ ಮೂಲಕ 500 ವರ್ಷಗಳ ಹಿಂದೆ ಜನಿಸಿದ ಕನಕದಾಸರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಅವರು ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಮಣಿಪಾಲ: ಇಲ್ಲಿನ ಸರಳೇಬೆಟ್ಟುವಿನ ವಿಜಯನಗರ ನಿವಾಸಿ ಸುರೇಶ ನಾಯ್ಕ ಅವರ ಮನೆ ಸ್ವಚ್ಚಮಾಡುವಾಗ ಹಳೇಯ ಡಬ್ಬದಲ್ಲಿ ಈ ನಾಣ್ಯ ಕಂಡು ಬಂದಿದೆ. ಈನಾಣ್ಯವನ್ನು ತೊಳೆದಾಗ. ಒಂದುಮುಖದಲ್ಲಿ ಸೂರ್ಯ ಚಂದ್ರ. ಚಾಮುಂಡಿ.ಆನೆ, ಅಂಬಾರಿ.ಉಬ್ಬು ಚಿತ್ರಗಳು ಇವೆ.ಇನ್ನೊಂದು ಮಗ್ಗುಲಲ್ಲಿ.ಕೃಷ್ಣಾಮಾಯಿ.ಕಾಸ.೨೫,ಎಂದು ಕನ್ನಡ ಅಂಕಿಗಳನ್ನು ಹೊಂದಿರುವುದರ ಜೊತೆಗೆ ರೋಮನ್ ಅಕ್ಷರದಲ್ಲಿ. X, X, V, cash

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿಸುವ ತನ್ನ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ವಿಫಲವಾದ ನಂತರ ಮುಂದಿನ ವರ್ಷಾಂತ್ಯಕ್ಕೆ ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಯೋಜನೆ ಕೈಗೊಂಡಿದೆ ಎಂದು ಇಸ್ರೊ ಹೇಳಿದೆ. ಇದಕ್ಕಾಗಿ ಇಸ್ರೊ, ತಿರುವನಂತಪುರ ಮೂಲದ ವಿಕ್ರಮ್ ಸಾರಾಬಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಎಸ್ ಸೋಮನಾಥ್

ನಾಡಿನ ಮುದ್ದುಮಕ್ಕಳಿಗೆ ಚಾಚಾ ನೆಹರು ಜನ್ಮದಿನ.ಮಕ್ಕಳ ದಿನಾಚರಣೆಯು ಹೌದು.ಪುಟಾಣಿಗಳೆಲ್ಲರಿಗೂ "ಮಕ್ಕಳ ದಿನಾಚರಣೆ"ಯ ಶುಭಾಶಯಗಳು

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಆರಂಭವಾಗಿದೆ. ನಗರದ ರೋಸಾರಿಯೋ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಭಾರತೀಯ ಜನತಾ ಪಕ್ಷವು 44 ಕ್ಷೇತ್ರಗಳನ್ನು ಗೆದ್ದು ಸರಳ ಬಹುಮತ ಪಡೆಯಿತು. ಮುಖಭಂಗ ಅನುಭವಿಸಿದ ಕಾಂಗ್ರೆಸ್ 14 ಸ್ಥಾನವನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಎಸ್

ನವದೆಹಲಿ: ಕೇರಳದ ಶಬರಿ ಮಲೆ ಅಯ್ಯಪ್ಪ ದೇವಾಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ನೀಡಿದ್ದ ತೀರ್ಪು ಮರು ಪರಿಶೀಲನೆಗೆ ಕೋರಿದ್ದ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಶಬರಿಮಲೆಗೆ ಸಂಬಂಧಿಸಿದಂತೆ ಸೆಪ್ಚಂಬರ್ 2018ರಲ್ಲಿ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಅಥವಾ ಮಾರ್ಪಾಡು ಸೂಚಿಸಿಲ್ಲ. ಧಾರ್ಮಿಕ ಸ್ವಾತಂತ್ರ್ಯ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದ 17 ಮಂದಿ ಅನರ್ಹ ಶಾಸಕರಲ್ಲಿ 16 ಮಂದಿ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ  ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು. ಪ್ರಸಕ್ತ ವಿಧಾನಸಭೆಯ ಶಾಸಕರಾಗಿ ಬಂಡಾಯವೆದ್ದು ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಹಿಂದಿನ ಸ್ಪೀಕರ್ ಕೆ ಆರ್

ಕಲ್ಯಾಣಪುರ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವವು ಮ೦ಗಳವಾರ ಮತ್ತು ಬುಧವಾರದ೦ದು ನಡೆಯಿತು. ಬುಧವಾರದ೦ದು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸುವರ್ಣನದಿಯಲ್ಲಿ ದೇವರನ್ನು ಸ್ನಾನಮಾಡಿಸಿ ನ೦ತರ ಕಟ್ಟೆಯಲ್ಲಿರಿಸಿ ಪೂಜೆಯನ್ನು ಮಾಡುವುದರೊ೦ದಿಗೆ ಪೇಟೆ ಉತ್ಸವ ನಡೆಸಲಾಯಿತು. ನ೦ತರ ಶ್ರೀದೇವರಿಗೆ ಮಹಾಪೂಜೆಯನ್ನು ನಡೆಸುವುದರೊ೦ದಿಗೆ ಮಹಾಸಮಾರಾಧನೆ ಕಾರ್ಯಕ್ರಮ ಜರಗಿತು.

ಚಿಕ್ಕಮಗಳೂರು: ಶತಮಾನಗಳ ಹಳೆಯ ಅಯೋಧ್ಯೆ ಭೂ ವಿವಾದವನ್ನು ಸುಪ್ರೀಂ ಕೋರ್ಟ್ ಬಗೆಹರಿಸಿದ ನಂತರ ಚಿಕ್ಕಮಗಳೂರಿನ ಜನತೆ ಮೂರು ದಶಕಗಳ ದತ್ತಪೀಠ ವಿವಾದವನ್ನು ಕೂಡ ಬಗೆಹರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸುತ್ತಿದ್ದಾರೆ. ದತ್ತ ಪೀಠ ಚಳವಳಿಯನ್ನು ಆರಂಭಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ನ್ಯಾಯಾಲಯದ ಹೊರಗೆ