Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಮುಂಬೈ: ಶಿವಸೇನೆ-ಎನ್'ಸಿಪಿ-ಕಾಂಗ್ರೆಸ್ ಮೈತ್ರಿಯು ಮಹಾರಾಷ್ಟ್ರದಲ್ಲಿ ನಿಧಾನಗತಿಯಲ್ಲಿ ರೂಪ ಪಡೆದುಕೊಳ್ಳುತ್ತಿದೆ. ಸರ್ಕಾರ ನಡೆಸಲು ಮೂರೂ ಪಕ್ಷಗಳು ಬಹುತೇಕವಾಗಿ ಸಾಮಾನ್ಯ ಕನಿಷ್ಟ ಕಾರ್ಯಸೂಚಿ ರೂಪಿಸುವುದರಲ್ಲಿ ಯಶಸ್ವಿಯಾಗಿವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎನ್'ಸಿಪಿ ಮುಖ್ಯಸ್ಥ ಶರಾದ್ ಪವಾರ್ ಅವರು ಭಾನುವಾರ ಭೇಟಿ ಮಾಡಲಿದ್ದು, ಮುಂದಿನ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಪಕ್ಷ ಇನ್ನೂ ಯಾವುದೇ

ಬ್ರೆಸಿಲಿಯಾ: ನಿಗದಿಯಂತೆ ಭಾರತಕ್ಕೆ ರಷ್ಯಾ ಎಸ್ -400 ದೀರ್ಘ-ಶ್ರೇಣಿಯ ಮೇಲ್ಮೈ ಕ್ಷಿಪಣಿ ಪೂರೈಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಈ ಬಹು ಶತಕೋಟಿ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಅಮೆರಿಕಾದ ವಿರೋಧವಿದೆ. ಎಸ್-400 ಟ್ರಯಂಫ್‌ನ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆಯನ್ನು 2015ರಲ್ಲಿ ಖರೀದಿಸುವುದಾಗಿ ಭಾರತ ಘೋಷಿಸಿಕೊಂಡಿತ್ತು. ಕಳೆದ ವರ್ಷ ವ್ಲಾಡಿಮಿರ್ ಪುಟಿನ್

ಮೈಸೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ 30 ಸಾವಿರ ಸೀರೆಗಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ಮೈಸೂರಿನ ವಿಜಯನಗರದ ಮನೆಯೊಂದರಲ್ಲಿ ಸುಮಾರು 30 ಸಾವಿರ ಸೀರೆಗಳನ್ನು ತುಂಬಿಸಿಡಲಾಗಿತ್ತು, ಈ ಸೀರೆಗಳ ಕವರ್ ಮೇಲೆ ಯೋಗೇಶ್ವರ್ ಗೆ ಮತ ಹಾಕುವಂತೆ ಕರ ಪತ್ರ ಇಡಲಾಗಿತ್ತು. ಮಾಹಿತಿ ಆಧರಿಸಿ ದಾಳಿ ಮಾಡಿದ ಚುನಾವಣಾ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆಯವರು ಭೇಟಿ ನೀಡಿ ದೇವರ ದರ್ಶನ ಮಾಡಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರನ್ನು ಗೌರವಿಸಿ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಮಠದ ಪಿ.ಆರ್.ಓ.ಕಡೆಕಾರ್ ಶ್ರೀಶ ಭಟ್ ಉಪಸ್ಥಿತರಿದ್ದರು.

ಮನೀಲಾ:ಅಪಾಯಕಾರಿ ಪರಿಸ್ಥಿತಿಯಲ್ಲಿಯೂ ಧೈರ್ಯಗೆಡದೆ 15 ವರ್ಷದ ಬಾಲಕ ನದಿಯ ದಡದಲ್ಲಿ ಮೊಸಳೆ ಬಾಯಿ ಸೇರುತ್ತಿದ್ದ ತಂಗಿಯನ್ನು ರಕ್ಷಿಸಿದ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ. ಫಿಲಿಪೈನ್ಸ್ ನ ಪಾಲ್ವಾನ್ ನದಿಯನ್ನು 15ರ ಹರೆಯದ ಹಾಸೀಂ ಹಾಗೂ 12 ವರ್ಷದ ಹೈನಾ ಲಿಸಾ ಜೋಸೆ ಹಾಬಿ ಬಿದಿರನ್ನು ಜೋಡಿಸಿ ತಯಾರಿಸಿದ್ದ ಪಟ್ಟಿಯ ಮೂಲಕ

ಉಡುಪಿ: ಶ್ರೀಕೃಷ್ಣ ಮಠದಲ್ಲಿ,ಕನಕ ಜಯಂತಿಯ ಪ್ರಯುಕ್ತ ರಥಬೀದಿಯಲ್ಲಿರುವ ಕನಕಗುಡಿಯಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿ ನಂತರ ರಾಜಾಂಗಣದಲ್ಲಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರೆಲ್ಲರಿಗೂ ಅನುಗ್ರಹಿಸಿ ಆಶೀರ್ವಚನ ನೀಡಿದರು. ಸಭೆಯಲ್ಲಿ ಉಡುಪಿ ಶಾಸಕರಾದ ರಘುಪತಿ ಭಟ್,ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಾಶಿಕ್: ಮರಾಠಿ ಚಿತ್ರಗಳ ಹಿನ್ನಲೆ ಗಾಯಕಿ ಗೀತಾ ಮಾಲಿ ಥಾಣೆ ಜಿಲ್ಲೆಯ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಮೆರಿಕಾದಿಂದ ವಾಪಸ್ಸಾಗಿದ್ದ ಗೀತಾ ಮಾಲಿ ತಮ್ಮ ಪತಿ ವಿಜಯ್ ಅವರೊಂದಿಗೆ ತಮ್ಮ ತವರೂರು ನಾಶಿಕ್ ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಕಾರು ರಸ್ತೆ ಬದಿ ನಿಂತಿದ್ದ

ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ. ಜಾರಿ ನಿರ್ದೇಶನಾಲಯ(ಇಡಿ) ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಲವಂತದ ಕ್ರಮ

ಭಾರತದ ಖ್ಯಾತ ಸ೦ಗೀತ ಗಾಯಕಿಯಾಗಿರುವ "ಭಾರತ ರತ್ನ " ಖ್ಯಾತ ಗಾಯಕಿ ಶ್ರೀಮತಿ ಲತಾ ಮ೦ಗೇಶ್ಕರ್ (90)ರವರು ಉಸಿರಾಟದ ತೊ೦ದರೆಯಿ೦ದಾಗಿ ಮು೦ಬಾಯಿಯ ಬ್ರೀಚ್ ಕ್ಯಾ೦ಡಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಅವರು ಶುಕ್ರವಾರದ೦ದು ನಿಧನ ಹೊ೦ದಿರುವುದಾಗಿ ವರದಿಯಾಗಿದೆ.

ಉಡುಪಿ: ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ,ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಚಿಣ್ಣರ ಮಾಸೋತ್ಸವವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿ ನಮ್ಮ ದೇಶದ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ಭಾರತದಲ್ಲಿ ಇಂದಿನ ಮಕ್ಕಳು ಮುಂದಿನ ಪ್ರಭುಗಳಾಗಬಹುದು,ಶ್ರೀಕೃಷ್ಣನ ಅನುಗ್ರಹದಿಂದ ಇಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳೂ ಅಂತಹ ಯೋಗ್ಯತೆಯನ್ನು