Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ನವದೆಹಲಿ: ಅಯೋಧ್ಯೆ ಭೂ ವಿವಾದ ಪ್ರಕರಣದ ವಿಚಾರಣೆ ಮುಕ್ತಾಯವಾದ ಬೆನ್ನಲ್ಲೇ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನಿನ್ನೆಯಷ್ಟೇ ಸುನ್ನಿ ವಕ್ಫ್ ಬೋರ್ಡ್ ತನ್ನ ಅರ್ಜಿ ಹಿಂಪಡೆಯುವ ಕುರಿತು ಹೇಳಿಕೆ ನೀಡಿತ್ತು. ಆದರೆ ಇದಕ್ಕೆ ಮುಸ್ಲಿಂ ಅರ್ಜಿದಾರರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಮುಸ್ಲಿಂ ಅರ್ಜಿದಾರರ ಪರ ವಕಾಲತ್ತು ವಹಿಸಿಕೊಂಡಿರುವ

ಉಡುಪಿ ನಗರದಲ್ಲಿ ಮೊನ್ನೆಯಷ್ಟೇ ಉಡುಪಿಯ ರಾಘವೇ೦ದ್ರ ಮಠದ ಮು೦ಭಾಗದಲ್ಲಿ ಪೊಲೀಸರೆ೦ದು ನ೦ಬಿಸಿ ಬಟ್ಟೆಯ೦ಗಡಿಯೊ೦ದಲ್ಲಿ ದುಡಿಯುತ್ತಿದ್ದ ವಿಠಲ ಶೆಟ್ಟಿ ಎ೦ಬವರಿ೦ದ ಸುಮಾರು 1.5 ಲಕ್ಷ ರೂಪಾಯಿಯ ಬೆಲೆಬಾಳುವ ಚಿನ್ನಾಭರಣವನ್ನು ಲೂಟಿಮಾಡಿ ಪರಾರಿಯಾದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊ೦ದು ಬೆಚ್ಚಿಬೀಳುವ ಘಟನೆಯೊ೦ದು ನಗರ ಜಾಮೀಯ ಮಸೀದಿಯ ಮು೦ಭಾಗದಲ್ಲಿನ ಆಭರಣ ಚಿನ್ನಾಭರಣದ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ  ಮಹತ್ವಾಕಾಂಕ್ಷೆಯ ಚಂದ್ರಯಾನ -2 ಉಡಾವಣೆಯಲ್ಲಿ ವಿಕ್ರಮ್ ಲ್ಯಾಂಡರ್ ವಿಫಲವಾಗಿದ್ದರೂ, ಆರ್ಬಿಟರ್ ಮಾತ್ರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸದಾಗಿ ಚಂದ್ರನ ಮೇಲ್ಮೈಗೆ ಸಂಬಂಧಿಸಿದ ಪ್ರಕಾಶಮಾನ ಛಾಯಾಚಿತ್ರಗಳನ್ನು ಸೆರೆಹಿಡಿದಿರುವ ಅರ್ಬಿಟರ್, ಅವುಗಳನ್ನು ರವಾನಿಸಿದೆ. ಸ್ಪೆಕ್ಟ್ರೋಮೀಟರ್ ಬಳಸಿ ಚಂದ್ರನ  ಮೇಲ್ಮೈ ನಲ್ಲಿ ಸೂರ್ಯನಕಾಂತಿಯ ವ್ಯತ್ಯಾಸಗಳನ್ನು ವಿಶ್ಲೇಷಿಸಿದೆ, ಚಂದ್ರನ ಮೇಲ್ಮೈಯಲ್ಲಿ

ಕೊಲ್ಕತ್ತಾ: ಮುಂದಿನ ತಿಂಗಳ ಅಂತ್ಯದಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಭಾರತ – ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ದೇಶ ಪ್ರಧಾನಿ ಶೇಕ್ ಹಸೀನಾ ಅವರಿಗೆ ಆಹ್ವಾನ ನೀಡಲಾಗಿದೆ. ಬೆಂಗಾಲ್ ಕ್ರಿಕೆಟ್ ಸಮಿತಿ ಮೂಲಗಳು ಈ ಬಗ್ಗೆ ಹೇಳಿಕೆ ನೀಡಿದ್ದು, ಶೇಕ್ ಹಸೀನಾ ಆಗಮಿಸುವ ಬಗ್ಗೆ ಇನ್ನಷ್ಟೇ

ಚಿತ್ರದುರ್ಗ: ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಆರೋಗ್ಯ ಸಚಿವ ಶ್ರೀರಾಮುಲು ಕಾರಿಗೆ ಅಡ್ಡಗಟ್ಟಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಚೇರಿ ಪ್ರವೇಶಿಸುವ ಗೇಟ್ ನಲ್ಲಿ ಕಾರು ಅಡ್ಡಗಟ್ಟಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು

ಕಾಪು: ಬೆಳಪು ಗ್ರಾಮದ ಪಣಿಯೂರು ಸತೀಶ್‌ ಮೋನಯ್ಯ ಆಚಾರ್ಯ ಅವರ ವಾಸದ ಮನೆಯ ಮೇಲೆ ತೆಂಗಿನ ಮರ ಬಿದ್ದು ಲಕ್ಷಾಂತರ ರೂ. ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ. ಹಂಚಿನ ಮನೆಯ ಮೇಲೆ ತೆಂಗಿನ ಮರ ಉರುಳಿ ಬಿದ್ದು ಒಂದು ಲಕ್ಷ ರೂಪಾಯಿಗೂ ಮಿಕ್ಕಿ ನಷ್ಟ ಅಂದಾಜಿಸಲಾಗಿದೆ. ಗುರುವಾರ ಬೆಳಗ್ಗೆ 7.30ರ ಸುಮಾರಿಗೆ

ಸುಳ್ಯ : ಒಂದೇ ತಿಂಗಳಲ್ಲಿ ಭೀಕರ ಅಪಘಾತದಲ್ಲಿ ಏಳು ಜೀವ ಬಲಿ ಪಡೆದುಕೊಂಡಿರುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಅ.17 ರಂದು ರಾತ್ರಿ ವಾಹನ ಅಫಘಾತ ಸಂಭವಿಸಿದೆ. ಸುಳ್ಯದಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಶೆವರ್ಲೆ ಬೀಟ್ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ

ಪಡುಬಿದ್ರಿ: ಸೌದಿ ಅರೇಬಿಯಾಯಲ್ಲಿ ನಡೆದ ಅಪಘಾತವೊಂದರಲ್ಲಿ ಪಡುಬಿದ್ರಿಯ ಯುವಕನೋರ್ವ ಮೃತಪಟ್ಟಿದ್ದಾನೆ ಪಡುಬಿದ್ರಿಯ ಕಂಚಿನಡ್ಕ ನಿವಾಸಿ ಹಂಝರವರ ಪುತ್ರ ಅಬ್ದುಲ್ ಖಾದರ್ (35) ಎಂದು ಗುರುತಿಸಲಾಗಿದೆ. ಈತ ಸೌದಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಹೈಲ್‌ನ 180 ಕಿಮೀ ದೂರದಲ್ಲಿ ಸಂಚರಿಸುತಿದ್ದಾಗ ಟವರ್ ಸ್ಪೋಟಗೊಂಡು ಅಪಘಾತ ಸಂಭವಿಸಿತ್ತು. ತೀವ್ರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಹೆಬ್ರಿ: ಮಂಗಳವಾರ ಸುರಿದ ಭಾರೀ ಮಳೆಯಿಂದ ಉಡುಪಿ ಜಿಲ್ಲೆಯ ಬೈರಂಪಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹರಿಖಂಡಿಗೆ – ಪೆರ್ಡೂರು ರಸ್ತೆಯು ದೂಪದಕಟ್ಟೆಯ ಬಳಿ ಜನರ ಕಣ್ಣೆದುರೇ ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಎರಡೂ ಮಗ್ಗಲುಗಳಲ್ಲಿ ಗದ್ದೆಗಳಿದ್ದು, ಭಾರೀ ಮಳೆಯಿಂದ ಗುಡ್ಡದ ನೀರು ಗದ್ದೆಗೆ ವೇಗವಾಗಿ ಹರಿದ ಪರಿಣಾಮ ರಸ್ತೆಯ

ಬಾಗಲಕೋಟೆ : ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳದಲ್ಲಿ ನಡೆದ ಜೋಡಿ ಕೊಲೆಯ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಮಹಿಳೆಯರು ಡಿಸಿ ಕಚೇರಿ ಎದುರು ಉರುಳಾಡುತ್ತಾ  ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಸಿಎಂ ಕಾರಜೋಳ ರ ಕ್ಷೇತ್ರ ಮುಧೋಳದಲ್ಲಿ ಮಂಗಳವಾರ ಜೋಡಿ ಕೊಲೆ ನಡೆದಿತ್ತು. ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮುಧೋಳಕ್ಕೆ ಒಯ್ಯಲು