Log In
BREAKING NEWS >
ಉಡುಪಿ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ಗ್ರಾಮೀಣ ಉತ್ಪನ್ನಗಳ ಮೇಳಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ....ಪರ್ಯಾಯ ಪ೦ಚಶತಮಾನೋತ್ಸವಕ್ಕೆ ಅದ್ದೂರಿಯ ಚಾಲನೆ-ಗಣ್ಯರಿಗೆ ಸನ್ಮಾನ..ದಿನಕ್ಕೊ೦ದು ಭಾಗವತಾಮೃತ ಬಿ೦ದುಗಳು-ರಾಮಸ೦ದೇಶ ಪ್ರಸ್ತಕ ಅನಾವರಣ... ಜ 18ಕ್ಕೆ ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ

ನವದೆಹಲಿ: ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ (ಎಸ್.ಎ.ಬೊಬ್ಡೆ)ನೇಮಕಗೊಂಡಿದ್ದಾರೆ. ಅವರು ಮುಂದಿನ ತಿಂಗಳು ನವೆಂಬರ್ 18ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಅರವಿಂದ್ ಬೊಬ್ಡೆಯವರನ್ನು ನೇಮಕ ಮಾಡುವಂತೆ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಸರ್ಕಾರ ಅವರ

ಚೆನ್ನೈ: 88 ಆಳದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕನ ರಕ್ಷಣೆಗೆ ಕಳೆದ ಹಲವು ದಿನಗಳಿಂದ ನಡೆದಿದ್ದ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದು, ಬಾಲಕ ಸುಜಿತ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ತಮಿಳುನಾಡಿನ ತಿರುಚಿನಾಪಳ್ಳಿ ಸಮೀಪ ಶುಕ್ರವಾರ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಸುಜೀತ್ ವಿಲ್ಸನ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಸೋಮವಾರ

ಪಾಲಕ್ಕಾಡ್: ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ನಕ್ಸಲರನ್ನು ಎನ್ ಕೌಂಟರ್ ನಲ್ಲಿ ಕೊಂದ ಘಟನೆ ಕೇರಳದ ಪಾಲಕ್ಕಡ್ ಜಿಲ್ಲೆಯ ಮಂಜಕಟ್ಟಿ ಬೆಟ್ಟದಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಹತರಾದ ನಕ್ಸಲರನ್ನು ಕೇರಳದಲ್ಲಿ ಸಿಪಿಐ (ಮಾಕ್ರ್ಸಿಸ್ಟ್) ಪಕ್ಷದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್.ಸುರೇಶ್ ಹಾಗೂ ಕಾರ್ತಿ ಎಂದು ತಿಳಿದು

ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಸೋಮವಾರ ಪ್ರಕಟವಾಗಿದ್ದು, 2019ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 64 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ಯಾರಿಗೆಲ್ಲಾ ಪ್ರಶಸ್ತಿ: ಸಾಹಿತ್ಯ ಕ್ಷೇತ್ರ: ಡಾ.ಮಂಜಪ್ಪ ಶೆಟ್ಟಿ, ಮಸಗಲಿ, ಪ್ರೊ.ಬಿ.ರಾಜಶೇಖರಪ್ಪ, ಚಂದ್ರಕಾಂತ ಕರವಳ್ಳಿ, ಡಾ.ಸರಸ್ವತಿ ಚಿಮ್ಮಲಗಿ. ರಂಗಭೂಮಿ ಕ್ಷೇತ್ರ: ಪರಶುರಾಮ ಸಿದ್ದಿ, ಪಾಲ್ ಸುದರ್ಶನ್, ಹೂಲಿ ಶೇಖರ್, ಎನ್.ಶಿವಲಿಂಗಯ್ಯ,

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮುಂಬೈನ ಸಂಸ್ಕೃತಿ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಶ್ರೀಕೃಷ್ಣ ಮಠಕ್ಕೆ ಪ್ರಸ್ತುತ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯದಲ್ಲಿ ಕುಂದಾಪುರದ ರಾಮಚಂದ್ರ ವರ್ಣರ ಮುಂದಾಳುತ್ವದಲ್ಲಿನ ಅಧ್ಯಕ್ಷರು ಸೇರಿದಂತೆ ಸರ್ವ ಸಮಾನತೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಬಡಾಕೆರೆಯ ಶ್ರೀವೇಣುಗೋಪಾಲಕೃಷ್ಣ ಸೇವಾಸಂಘದ ಸದಸ್ಯರು,ಶ್ರೀಪಾದರು ಪರ್ಯಾಯ ಪೀಠವನ್ನೇರಿದ ದಿನದಿಂದ ಎರಡು ದಿನಕ್ಕೊಮ್ಮೆ ಒಂದು ಲಕ್ಷ ತುಳಸೀದಳಗಳನ್ನು ಪರ್ಯಾಯದ ಅವಧಿಯುದ್ದಕ್ಕೂ ಮಳೆ,ಗಾಳಿ,ಚಳಿ ಮತ್ತು ಬಿಸಿಲುಗಳನ್ನೂ

ಶ್ರೀ ಕೃಷ್ಣ ಮಠದಲ್ಲಿ ಕನಕನ ಕಿಂಡಿಯ ಎದುರುಗಡೆ  ದೀಪಾವಳಿಯ ಬಲಿ ಪಾಡ್ಯದಂದು  ಪರ್ಯಾಯ ಪಲಿಮಾರು  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಗೋಗ್ರಾಸ ನೀಡಿ  ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು  "ಗೋ ಪೂಜೆ"ಯನ್ನು ನಡೆಸಿದರು. ಬಳಿಕ ರಥ ಬೀದಿಯಲ್ಲಿ ಬಿರುದು

ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಪಲಿಮಾರು  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು  "ಬಲೀಂದ್ರ ಪೂಜೆ"ಯನ್ನು ನಡೆಸಿದರು. ಬಳಿಕ ಪಂಚ ದೀಪ ಪ್ರಜ್ವಲನೆ ಯೊಂದಿಗೆ ವಾದ್ಯ ಮೇಳ ಸಹಿತ ಕೃಷ್ಣ

ಉಡುಪಿ  ಶ್ರೀ ಅದಮಾರು ಮಠದ ಗೋಶಾಲೆಯ  ಗೋವುಗಳಿಗೆ   ದೀಪಾವಳಿಯ ಬಲಿ ಪಾಡ್ಯದಂದು  ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಗೋಗ್ರಾಸ ನೀಡಿ  "ಗೋ ಪೂಜೆ"ಯನ್ನು ನಡೆಸಿದರು. ಮಠದ ವಿದ್ವಾಂಸರಾದ ವಂಶಿಕೃಷ್ಣ ಆಚಾರ್ಯ,ಅದಮಾರು ಮಠ ಅತಿಥಿ ಗೃಹದ ಪ್ರಬಂಧಕರಾದ ಗೋವಿಂದರಾಜ್,ಮಠದ ಜನಾರ್ಧನ ಕೊಟ್ಟಾರಿಗಳು ಉಪಸ್ಥಿತರಿದ್ದರು.

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಂದು ಒಂದು ವಾರ ಕಳೆಯುತ್ತಿದ್ದರೂ ಬಿಜೆಪಿ ಹಾಗೂ ಶಿವಸೇನಾ ನಡುವಣ ಹಗ್ಗಜಗ್ಗಾಟದಿಂದಾಗಿ  ಸರ್ಕಾರ ರಚನೆ ಮಹಾ ಕಗ್ಗಂಟಾಗಿ ಪರಿಣಮಿಸಿದೆ. ಈ ಮಧ್ಯೆ   ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನಾ ಮುಖಂಡರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ