Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಆಂಧ್ರಪ್ರದೇಶ: ಆಂಧ್ರಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್, ಟಿಡಿಪಿ ಮುಖಂಡ ಕೋಡೆಲಾ ಶಿವ ಪ್ರಸಾದ್(72) ಹೈದರಾಬಾದ್ ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಭ್ರಷ್ಟಾಚಾರ ಮತ್ತು ಆರ್ಥಿಕ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಕುಟುಂಬದ ಮೂಲಗಳು ದೂರಿವೆ. ಸೋಮವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಕೂಡಲೇ ಅವರನ್ನು ಬಸವ ತಾರಕರಾಮಾ ಆಸ್ಪತ್ರೆಗೆ ದಾಖಲಿಸಿದ್ದರು.

ಜಮ್ಮು-ಕಾಶ್ಮೀರ:ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಶನಲ್ ಕಾನ್ಫರೆನ್ಸ್ ಮುಖಂಡ ಫಾರೂಖ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ರಕ್ಷಣಾ ಕಾಯ್ಡೆ(ಪಿಎಸ್ಎ)ಯಡಿ ಬಂಧಿಸಿ ಶ್ರೀನಗರದಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ನಂತರ(ಆಗಸ್ಟ್ 5) ಫಾರೂಖ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇಟ್ಟಿತ್ತು. ಯಾವುದೇ ಒಬ್ಬ ವ್ಯಕ್ತಿಯನ್ನು

ಉಡುಪಿ: ಸ್ವರಾಜ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ರಿ) ಮುಖ್ಯಪ್ರಾಣ ಟವರ್ಸ್ ಬಡಗುಪೇಟೆ ಉಡುಪಿ ಇದರ 6ನೇ ವರುಷದ ವಾರ್ಷಿಕ ಮಹಾಸಭೆಯು ಶನಿವಾರದ೦ದು ಉಡುಪಿಯ ಉಡ್ ಲ್ಯಾ೦ಡ್ ಹೊಟೇಲ್ ಸಭಾ೦ಗಣದಲ್ಲಿ ಜರಗಿತು. ವಾರ್ಷಿಕ ಮಹಾಸಭೆಯನ್ನು ಗೌರವ ಸಲಹೆಗಾರರುಗಳಾದ ನಾರಾಯಣ ಶೆಟ್ಟಿ, ಸೀತಾರಾಮ್ ಶೆಟ್ಟಿ, ಕೆ ನರಸಿ೦ಹ ಶೆಟ್ಟಿಯವರು ದೀಪ ಪ್ರಜ್ವಲಿಸುವುದರೊ೦ದಿಗೆ ವಿದ್ಯುಕ್ತವಾಗಿ ಚಾಲನೆ

ತುಮಕೂರು: ಖಾಸಗಿ ಬಸ್ಸೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದ ಪರಿಣಾಮ ಆರು ಮಂದಿಗೆ ಗಾಯಗಳಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ತುಮಕೂರು ಸಮೀಪ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 5ರ ಊರುಕೆರೆ ಸಮೀಪ ಬಸ್ ಚಲಿಸುತ್ತಿದ್ದ ವೇಳೆಯೇ ಬೆಂಕಿ ಹೊತ್ತಿ ಭಸ್ಮವಾಗಿದೆ. ಶುಕ್ರವಾರ ಮುಂಜಾನೆ 3.30ರ ಸುಮಾರು ಘಟನೆ ನಡೆದಿದ್ದು ಆ ವೇಳೆ

ದುಬೈ: ಸೌದಿ ಅರೇಬಿಯಾದ ಪೂರ್ವ ಭಾಗದ ತೈಲ ನಿಕ್ಷೇಪ ಮತ್ತು ಸೌದಿ ಅರಮ್ಕೊ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಇಂದು ನಸುಕಿನ ಜಾವ ಈ ಘಟನೆ ನಡೆದಿದ್ದು ಬೃಹತ್ ಬೆಂಕಿ ಕಾಣಿಸಿಕೊಂಡಿದೆ. ಈ ಹಿಂದೆ ಯೆಮನ್ ನ ಹೌತಿ

ಚಿತ್ತೂರು/ಬೆಂಗಳೂರು:ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾರು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೆಂಗಳೂರು ಮೂಲದ ಐವರು ಸಜೀವ ದಹನವಾದ ದಾರುಣ ಘಟನೆ ಶನಿವಾರ ಚಿತ್ತೂರಿನ ಪಲಮನೇರು ಮಂಡಲಂ ಬಳಿ ನಡೆದಿದೆ. ಕಾರಿನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಾಗ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಿಂದ ಹೊರ ಬರಲಾಗದೆ ಐವರು ಸಜೀವ ದಹನವಾಗಿದ್ದರು.

ಪೂಂಚ್/ರಜೌರಿ: ಕಣಿವೆ ರಾಜ್ಯದಲ್ಲಿ ಶಾಂತಿಯನ್ನು ಕದಡಬೇಕೆಂಬ ಹಠಕ್ಕೆ ಬಿದ್ದಿರುವ ಪಾಕಿಸ್ತಾನಿ ಸೇನೆ ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ದಾಳಿಯನ್ನು ಶನಿವಾರವೂ ಮುಂದುವರಿಸಿದೆ. ಪೂಂಚ್ ಜಿಲ್ಲೆಯ ಮಾಂಧೇರ್ ಮತ್ತು ಬಾಲಕೋಟ್ ಸೆಕ್ಟರ್ ಮತ್ತು ಭೀಮ್ ಭೇರ್ ಗಾಲಿ ಮತ್ತು ಮಂಜಾನ್ ಕೋಟ್ ಸೆಕ್ಟರ್ ಸಮೀಪ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ

ಮಂಗಳೂರು:: ಭರ್ಜರಿ ಪ್ರದರ್ಶನದೊಂದಿಗೆ ಕೋಸ್ಟಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇತ್ತೀಚೆಗೆ ತೆರೆಕಂಡ ತುಳು ಚಿತ್ರ ‘ಗಿರಿಗಿಟ್’ ಗೆ ಸಂಕಷ್ಟ ಎದುರಾಗಿದೆ. ‘ಗಿರಿಗಿಟ್’ ಚಿತ್ರಕ್ಕೆ ಮಂಗಳೂರು ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲರಿಗೆ ಅವಹೇಳನ ಮಾಡಿದ್ದಾರೆ ಎಂದು ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿ. ಅಲ್ಲದೆ

ನವದೆಹಲಿ:ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಸಂಬಂಧ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಗುರುವಾರ ಜಾರಿ ನಿರ್ದೇಶನಾಲಯದ ವಿಚಾರಣೆ ಹಾಜರಾಗಿದ್ದು, ಇ.ಡಿ.ಅಧಿಕಾರಿಗಳು ಮಧ್ಯಾಹ್ನದ ನಂತರವೂ ತೀವ್ರ ವಿಚಾರಣೆಗೆ ಒಳಪಡಿಸಿರುವುದಾಗಿ ಮೂಲಗಳು ತಿಳಿಸಿವೆ. 108 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ

ನವದೆಹಲಿ:ಕಾಮೆನ್ ವೆಲ್ತ್ ಪಂದ್ಯಗಳಲ್ಲಿ ಎರಡು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ತಮ್ಮ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಬಬಿತಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಬಿತಾ ಪೋಗಟ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಹರ್ಯಾಣ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಬಬಿತಾ ಪೋಗಟ್ ಅವರು ಮುಂಬರುವ