Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಮಲ್ಪೆ: ಪ್ರವಾಸಿಗರ ಆಕರ್ಷಣೀಯ ತಾಣ ಸೈಂಟ್‌ಮೇರಿ ದ್ವೀಪ ಇಂದಿನಿಂದ ಮತ್ತೆ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ.ಮಳೆಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧದ ಅವಧಿ ಇಂದಿನಿಂದ(ಸೆ. 15) ತೆರವಾಗಿದೆ. ಆದರೂ ಇಲ್ಲಿಗೆ ಪ್ರಯಾಣ ಬೆಳೆಸಲು ಸಮುದ್ರದಲ್ಲಿ ಗಾಳಿ ನೀರಿನ ಒತ್ತಡ ತಡೆಯುಂಟು ಮಾಡೀತೆಂಬ ಅಂದಾಜಿದೆ. ಸಮುದ್ರದ ವಾತಾವರಣವನ್ನು ಹೊಂದಿಕೊಂಡು ಯಾನ ಆರಂಭಿಸಲಾಗುತ್ತದೆ. ಅಭಿವೃದ್ಧಿ

ಉಡುಪಿ: ಈ ವರ್ಷದಲ್ಲಿ ಸುರಿದ ಮಳೆಗೆ ನಗರಾದ್ಯಂತ ಹಲವೆಡೆ ರಸ್ತೆಗಳು ಹಾನಿಗೀಡಾಗಿವೆ. ನಗರ ಆಡಳಿತದವರು ಇದನ್ನು ಸರಿಯಾಗಿ ನಿರ್ವಹಿಸದಿರುವುದರಿಂದ ಸಾರ್ವಜನಿಕರಿಗೆ ಸಹಿತ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ. ಭಾರೀ ಮಳೆಯಾದ ಅನಂತರ ಕಿನ್ನಿಮುಲ್ಕಿ, ಜೋಡುಕಟ್ಟೆ, ಡಯಾನಾ ಸರ್ಕಲ್‌, ಸಹಿತ ನಗರದ ಎಲ್ಲ ವಾರ್ಡ್‌ಗಳ ರಸ್ತೆಯಲ್ಲೂ ಹೊಂಡಗಳು ಗೋಚರಿಸುತ್ತಿವೆ. ಸಣ್ಣಗಾತ್ರದ ಹೊಂಡಗಳೇ ಮುಂದೆ

ಲಂಡನ್: ಸೌದಿ ಅರೇಬಿಯಾದ ಎರಡು ಪ್ರಮುಖ ತೈಲ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿಯ ಪರಿಣಾಮ ಜಗತ್ತಿನ ಪೆಟ್ರೋಲಿಯಂ ಸಂಸ್ಕರಣ ಹಾಗೂ ವಹಿವಾಟಿನ ಮೇಲೆ ದೊಡ್ಡ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೈಲ ಬೆಲೆ ಏರಿಕೆಗೂ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಯೆಮೆನ್ ದೇಶದ ಬಂಡುಕೋರರು ಸೌದಿ ಅರೇಬಿಯಾದ ಅರಾಮ್ಕೊ

ಇಸ್ಲಮಾಬಾದ್:‌ ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದ ಕೆಲವು ಹಿಂದೂ ದೇವಸ್ಥಾನಗಳು ಮತ್ತು ಹಿಂದೂ ಸಮುದಾಯದ ಮನೆಗಳ ಮೇಲೆ ದಾಳಿಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಸಿಂಧ್‌ ಪ್ರಾಂತ್ಯದ ಘೋಟ್ಕಿ ಪ್ರದೇಶದಲ್ಲಿ ಈ ಗಲಭೆಗಳಾಗುತ್ತಿದ್ದು, ಶಾಲಾ ಪ್ರಾಂಶುಪಾಲನೊಬ್ಬ ಧರ್ಮನಿಂದನೆಯ ಮಾತುಗಳನ್ನಾಡಿದ್ದು ಇದಕ್ಕೆ ಕಾರಣ ಎಂದು ವರದಿಯಾಗಿದೆ. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು “ಏಕಾಏಕಿ ಜನಸಮೂಹ ಹಿಂಸಾಚಾರದ ”

ಚೆನ್ನೈ: ಕೆಪಿಎಲ್‌ ಮಾದರಿಯ ತಮಿಳುನಾಡಿನ ಟಿ ಟ್ವೆಂಟಿ ಕ್ರೀಡಾಕೂಟ ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎಂಪಿಎಲ್‌)ಗೆ ಈಗ ಭ್ರಷ್ಟಾಚಾರದ ಕರಿ ನೆರಳು ಬಿದ್ದಿದೆ. ಈ ಬಗ್ಗೆ ಕೆಲವು ಆಟಗಾರರು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ. ಈ ಬಾರಿಯ ಟಿಎಂಪಿಎಲ್‌ ಜುಲೈ 19ರಿಂದ ಆಗಸ್ಟ್‌ 15ರವರೆಗೆ ನಡೆದಿತ್ತು.

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ,ಶ್ರೀಹಟ್ಟಿಯಂಗಡಿ ಮೇಳದವರಿಂದ 'ಪಂಚ ಯಕ್ಷಾರಾಧನೆ' ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿ ಬಾಲ್ಯಾವಸ್ಥೆಯಲ್ಲಿರುವ ಈ ಮೂರೂ ವರ್ಷ ಕೂಸು ಈಗಾಗಲೇ ವರ್ಷವಿಡೀ ಕಾರ್ಯಕ್ರಮದ ನಿಗದಿಯಾಗಿದೆ ಎಂದರೆ ಇದರ ಪ್ರಖ್ಯಾತಿಯನ್ನು ಊಹಿಸಬಹುದು,ಆದ್ದರಿಂದ ಮುಂದಿನ ದಿನಗಳಲ್ಲಿ

ನವದೆಹಲಿ; ಹಿಂದೂ ಮಹಾಸಾಗರದ ಸುತ್ತಮುತ್ತ ಏಳು ಚೀನಾದ ನೌಕಾಪಡೆ ಯುದ್ಧ ನೌಕೆಗಳು ಕಾರ್ಯಾಚರಣೆ ನಡೆಸುತ್ತಿದ್ದು ಅವುಗಳಲ್ಲಿ 27 ಸಾವಿರ ಟನ್ ಗಿಂತಲೂ ಹೆಚ್ಚಿನ ತೂಕದ ಉಭಯಚರ ಹಡಗುಗಳು ಸೇರಿವೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಸುದ್ದಿಸಂಸ್ಥೆಗೆ ವಿಶೇಷ ಚಿತ್ರಗಳು ಲಭ್ಯವಾಗಿದೆ. ಚೀನಾದ ಯುದ್ಧ ನೌಕೆ ಡಾಕ್ ಕ್ಸಿಯಾನ್

ನವದೆಹಲಿ:ಹದಿನೈದು ವರ್ಷದ ಮಗಳು ಹಾಗೂ ಒಂದು ವರ್ಷದ ಮಗುವನ್ನು ತಾಯಿಯೊಬ್ಬಳು ಮಾರಾಟ ಮಾಡಿರುವ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದ್ದು, 15 ವರ್ಷದ ಹುಡುಗಿಯನ್ನು ರಕ್ಷಿಸಲಾಗಿದೆ ಎಂದು ದೆಹಲಿಯ ಮಹಿಳಾ ಆಯೋಗ ತಿಳಿಸಿದೆ. ತನ್ನ ಒಂದು ವರ್ಷದ ಸಹೋದರನನ್ನು ಕೂಡಾ ತಾಯಿ ಕಳೆದ ತಿಂಗಳು ಹಣಕ್ಕಾಗಿ ಮಾರಾಟ ಮಾಡಿರುವುದಾಗಿ 15 ವರ್ಷದ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಸೋಮವಾರ 21ನೇ ವರ್ಷದ ಭಜನಾ ತರಬೇತಿ ಶಿಬಿರಕ್ಕೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಹಿರಿಯ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸೂರ್ಯನಾರಾಯಣ ಉಪಾಧ್ಯಾಯರು, ಧರ್ಮದ ತಳಹದಿ, ಭಗವಂತನ ಅಸ್ತಿತ್ವದ ಮೇಲೆ ನಿಂತಿರುವ ಸಂಸ್ಕೃತಿ ನಮ್ಮದು.

ಚೆನ್ನೈ:ತಾನೊಬ್ಬ ಎನ್ ಕೌಂಟರ್ ಸ್ಪೆಶಲಿಸ್ಟ್, ಇಬ್ಬರು ಕುಖ್ಯಾತ ರೌಡಿಗಳನ್ನು ಹೊಡೆದುರುಳಿಸಿದ್ದೇನೆ ಎಂದು ಬಿಂಬಿಸಿಕೊಂಡಿದ್ದ ನಕಲಿ ಪೊಲೀಸ್ ಟೆಲಿಮಾರ್ಕೆಟಿಂಗ್ ಸಂಸ್ಥೆಯ ಮೂಲಕ ಹಲವಾರು ಜನರನ್ನು ವಂಚಿಸಿ ಏಳು ಯುವತಿಯರನ್ನು ವಿವಾಹವಾಗಿ, ಆರು ಮಹಿಳೆಯರ ಜತೆ ದೈಹಿಕ ಸಂಬಂಧ ಬೆಳೆಸಿದ್ದ ವಂಚಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಚೆನ್ನೈನಲ್ಲಿ