Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಬ್ರಹ್ಮಾವರ: ಕಾರನ್ನು ಮೋಸದಿಂದ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ಲ ಯಾನೆ ಅಬ್ಟಾಸ್‌ ತಲಪಾಡಿ, ಮಹಮ್ಮದ್‌ ಸಫಾನ್‌ ವಿಟ್ಲ ಬಂಧಿತರು. ಇಬ್ರಾಹಿಂ ಮಂಗಳೂರು ತಲೆಮರೆಸಿ ಕೊಂಡಿದ್ದಾನೆ. ಪ್ರಕರಣದ ವಿವರ: ಲೀಸ್‌ಗೆ ಕೊಟ್ಟ ಕಾರುಗಳನ್ನು ಮತ್ತು ಅಂತರ್ಜಾಲದಲ್ಲಿ ಮಾರಾಟಕ್ಕೆ ಇರುವ ಕಾರುಗಳನ್ನು ನಮಗೆ ಬೇಕು ಎಂದು ಸುಳ್ಳು ಹೇಳಿ

ಛತ್ತೀಸ್ ಗಢ: ಇಲ್ಲಿನ ರಾಜನಂದಗಾಂವ್ ನ ಸೀತಾಗೋಟಾ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ ಯೋಧರು ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ ಮೂವರು ಮಹಿಳೆಯರು ಸೇರಿ ಕನಿಷ್ಠ ಏಳು ನಕ್ಸಲರು ಹತರಾಗಿದ್ದಾರೆ. ನಕ್ಸಲರು ಕೂಡ ಪ್ರತಿದಾಳಿ ನಡೆಸಿದ್ದು, ರಕ್ಷಣಾ ಪಡೆಯ ಮೂವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ 40ಕ್ಕೂ ಹೆಚ್ಚಿನ ನಕ್ಸಲರು ಅವಿತಿದ್ದ ಮಾಹಿತಿಯನ್ನು

ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ಸತಾರಾ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟ ಪರಿಣಾಮ ಉತ್ತರಕರ್ನಾಟಕದ ಕೆಲವು ಜಿಲ್ಲೆಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಕೊಯ್ನಾ ಜಲಾಶಯದಿಂದ 20ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇದ್ದಿರುವುದರಿಂದ ಬೆಳಗಾವಿ ಬಾಗಲಕೋಟೆ, ವಿಜಯಪುರ, ರಾಯಚೂರು ಯಾದಗಿಗಿ ಜಿಲ್ಲೆಗಳಲ್ಲಿನ ಜನರು

ನೆಲ್ಯಾಡಿ: ಇಲ್ಲಿನ ಎಂಜಿರ ಬಳಿ ಶುಕ್ರವಾರ ಬೆಳಿಗ್ಗೆ ಹೆದ್ದಾರಿಗೆ ಅಡ್ಡಲಾಗಿ ಉರುಳಿಬಿದ್ದಿದ್ದ ಬುಲೆಟ್ ಗ್ಯಾಸ್ ಟ್ಯಾಂಕರ್ ಅನ್ನು ಇದೀಗ ತೆರವುಗೊಳಿಸಲಾಗಿದೆ. ಗ್ಯಾಸ್ ತುಂಬಿದ್ದ ಟ್ಯಾಂಕರ್ ರಸ್ತೆಗೆ ಬಿದ್ದಿದ್ದರಿಂದ ಈ ಭಾಗದಲ್ಲಿನ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಅದಲ್ಲಿದೆ ಟ್ಯಾಂಕರ್ ನಿಂದ ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆಯ ಸಂಶಯವೂ ಕಂಡುಬಂದಿದ್ದ ಕಾರಣ ವಿದ್ಯುತ್

ಬೆಳಗಾವಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದ ವ್ಯಾಪ್ತಿಯಲ್ಲಿ ಲಘು ಭೂಕಂಪವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 3.9 ಪ್ರಮಾಣದಲ್ಲಿ ದಾಖಲಾಗಿದೆ. ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆ ಹೆಚ್ಚಾಗಿದ್ದು, ಜಿಲ್ಲೆಯ ಕೃಷ್ಣಾ ನದಿ ಪಾತ್ರದ ತಾಲೂಕಿನ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ

ನವದೆಹಲಿ: ಸಮಾಜದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಿ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕುವುದಕ್ಕೆ ಅವಕಾಶ ಮಾಡಿಕೊಡುವ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2019ಕ್ಕೆ(ಯುಎಪಿಎ) ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಶುಕ್ರವಾರ ರಾಜ್ಯಸಭೆ ಕಲಾಪ ಆರಂಭಗೊಂಡ ನಂತರ ಕೆಲ ಹೊತ್ತಿನ ಬಳಿಕ ಮಸೂದೆ ಪರ-ವಿರೋಧವಾಗಿ ಮತ ಚಲಾವಣೆ ನಡೆಯಿತು. ಮಸೂದೆಯನ್ನು ಪರಿಶೀಲನೆಗೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದ್ದು, ಕೂಡಲೇ ಅಮರನಾಥ ಯಾತ್ರಿಗಳು ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿ, ಕಣಿವೆ ರಾಜ್ಯವನ್ನು ತೊರೆಯುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆದೇಶಿಸಿದೆ. ಉಗ್ರರು ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಕಾಶ್ಮೀರ ಕಣಿವೆಯಲ್ಲಿ ಸದ್ಯದ

ಬೆಂಗಳೂರು: ಕೇಂದ್ರ ಸರ್ಕಾರವು ರೈತರಿಗೆ ಪಿಎಂಕಿಸಾನ್ ಯೋಜನೆಯಡಿ ವಾರ್ಷಿಕ 6000 ರೂಪಾಯಿ ನೆರವು ನೀಡುವ ಯೋಜನೆಗೆ ಪೂರಕವಾಗಿ ಕರ್ನಾಟಕ ಸರ್ಕಾರವು ಘೋಷಿಸಿರುವ 4000 ರೂಪಾಯಿ ನೆರವಿನ ಯೋಜನೆ ಜಾರಿಗೆ ಇನ್ನೆರಡು ದಿನಗಳಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು. ಮೊದಲ ಕಂತಿನ 2000 ರೂಪಾಯಿಗಳನ್ನು 15-20 ದಿನಗಳೊಳಗೆ ರೈತರಿಗೆ ಪಾವತಿಸಲು ಕ್ರಮ ವಹಿಸುವಂತೆ

ಲಂಡನ್: 200ಕ್ಕೂ ಹೆಚ್ಚು ಯುವಕರ ಜೊತೆ ಡೇಟ್ ಮಾಡಿದ ಮಾಡೆಲ್ ಒಬ್ಬಳು ಕೊನೆಗೆ ಯಾರೂ ಸರಿ ಹೊಂದಲಿಲ್ಲ ಎಂದು ನಾಯಿಯೊಂದನ್ನು ಮದುವೆಯಾಗಿರುವ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಲಂಡನ್ ಮೂಲದ ಮಾಡೆಲ್ 49 ವರ್ಷದ ಎಲಿಜಬೆತ್ ಹುಡ್ ಎಂಬಾಕೆ ನೂರಾರು ಯುವಕರ ಜೊತೆ ಡೇಟ್ ನಡೆಸಿದ್ದಳು. ಇವರಲ್ಲಿ

ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಬಹಳ ವಿಶೇಷ ಹಬ್ಬಗಳಲ್ಲಿ ಒ೦ದಾದ ಹಬ್ಬ ನಾಗರ ಪ೦ಚಮಿ. ನಾಗರ ಪ೦ಚಮಿಗೆ ಬಹಳ ಮಹತ್ವವಿದೆ. ಪ್ರಕೃತಿಯಲ್ಲಿ ಕಣ್ಣಿಗೆ ಕಾಣುವ ದೇವರೇ ಎ೦ದರೆ ನಾಗ ಎ೦ದು ನ೦ಬಿಕೆಯಲ್ಲಿದೆ. ನಾಗಾರಾಧನೆಯು ಕರಾವಳಿಯಲ್ಲಿ ಅದರದ್ದೇ ಆದ ಮಹತ್ವವನ್ನು ಹೊ೦ದಿದೆ. ಮಾತ್ರವಲ್ಲದೇ ವರುಷಕ್ಕೆ ಒಮ್ಮೆ ತನುವನ್ನು ಎರೆಯುವುದು ಕರಾವಳಿಯ ಸ೦ಪ್ರಾದಯದಲ್ಲಿ ಒ೦ದು. ಈ ಸ೦ದರ್ಭದಲ್ಲಿ