Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಬಂಟ್ವಾಳ : ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲುಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಘಟನೆ ವರದಿಯಾಗಿದೆ. ಬಿ.ಸಿ.ರೋಡು ಕೈಕಂಬ ಸಮೀಪದ ತಲಪಾಡಿ ನಿವಾಸಿ ಪ್ರಶಾಂತ್ (39) ಎಂಬವರೇ ಜ್ವರದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಡೆಂಗ್ಯೂ ಜ್ವರದ ಕಾರಣದಿಂದಲೇ ಪ್ರಶಾಂತ್ ಮೃತಪಟ್ಟಿರಬಹುದೆಂದು ಇದೀಗ ಶಂಕಿಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು

ಉಡುಪಿ: ಶ್ರೀ ಕೃಷ್ಣ ಮಠದ ಮಧ್ವಾಂಗಣದಲ್ಲಿ, ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಜರಗಲಿರುವ ಸ್ಪರ್ಧೆಗಳನ್ನು ಪರ್ಯಾಯ ಪಲಿಮಾರುಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು.ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನಡೆಯಿತು. ಸಂಯೋಜಕರಾಗಿ ರಮೇಶ್, ಸುಬ್ರಹ್ಮಣ್ಯ ಬಿ.ಕೋಟೇಶ್ವರ,ಶೃಂಗೇಶ್ವರ್,ಶ್ರೀಶ ಭಟ್ ಕಡೆಕಾರ್ ಪಾಲ್ಗೊಂಡರು.  

Space agency Indian Space Research Organisation on Sunday released the first set of pictures of the earth captured by Chandrayaan-2, the country's second Moon mission launched a fortnight ago. The pictures were captured by L 14

ಟೆಕ್ಸಾಸ್: ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದ್ದು, 20 ಜನರು ಸಾವನ್ನಪ್ಪಿದ್ದು, 26 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಟೆಕ್ಸಾಸ್ ನ ಜನನಿಬಿಡ ಶಾಪಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ದ್ವೇಷದಿಂದ ನಡೆದಿರುವ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.   ಗುಂಡಿನ ದಾಳಿ ನಡೆಸಿರುವ ಗನ್ ಮ್ಯಾನ್ ನ್ನು 21 ವರ್ಷದ ಪ್ಯಾಟ್ರಿಕ್ ಕ್ರೂಸಿಯಸ್ ಎಂದು

ಶ್ರೀನಗರ, ಆಗಸ್ಟ್ 3: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಪ್ರಮಾಣದ ಸೇನೆ ಜಮಾವಣೆ ಮಾಡುತ್ತಿದ್ದ ಭಾರತೀಯ ಸೇನೆಯ ನಡೆಗೆ ಉತ್ತರ ಈಗ ದೊರಕಿದೆ. ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾದರಿಯ ದಾಳಿ ನಡೆಸುವ ಮೂಲಕ ಉಗ್ರರ ದಮನಕ್ಕೆ ಭಾರಿ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ. ಪಾಕ್

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಅಪಾರ ಪ್ರಮಾಣದ ಸಮಸ್ಯೆ ತಂದೊಡ್ಡಿದ್ದು, ಕೇವಲ ಮಹಾರಾಷ್ಟ್ರ ಮಾತ್ರವಲ್ಲದೇ ಇದರ ಪರಿಣಾಮ ಕರ್ನಾಟಕದ ಗಡಿ ಜಿಲ್ಲೆಗಳ ಮೇಲೂ ಆಗಿದೆ. ಹೌದು.. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಕೃಷ್ಣಾನದಿ ಉಕ್ಕಿ ಹರಿಯುತ್ತಿದ್ದು, ಮಹಾರಾಷ್ಟ್ರ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದ

ತಿರುವನಂತಪುರಂ: ಕುಡಿದು ಚಾಲನೆ ಮಾಡುತ್ತಿದ್ದ ಕೇರಳದ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಾಮನ್ ಅವರ ಕಾರು ಶನಿವಾರ ಬೆಳಗಿನ ಜಾವ ಪತ್ರಕರ್ತರೊಬ್ಬರ ಬೈಕಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಬೆಳಗಿನ ಜಾವ ಮ್ಯೂಸಿಯಂ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದ್ದು, ಪತ್ರಕರ್ತ ಕೆಎಂ ಬಶೀರ್ ಅವರು ಮೃತಪಟ್ಟ

ಬಾಗಲಕೋಟೆ:ಶ್ರೀಕೃಷ್ಣಮುಖ್ಯಪ್ರಾಣ ಗ್ರಾಮಾಭಿವೃದ್ಧಿ ಹಾಗೂ ಕ್ರೀಡಾ ಸಾ೦ಸ್ಕೃತಿಕ ಸ೦ಘ ಕುಣಿಬೆ೦ಚಿ ಸೂಳೆಭಾವಿ ಇಳಕಲ್ ಬಾಗಲಕೋಟೆ ಸ೦ಘದ ನೂತನ ಅಧ್ಯಕ್ಷರಾಗಿ ಶೇಖರ್ ಈರಪ್ಪ ಮ೦ಗಳಗುಡ್ಡೆಯವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹನುಮ೦ತ ಕೋನಪ್ಪ ಬೇನಾಳ, ಕಾರ್ಯದರ್ಶಿಯಾಗಿ ಶರಣಪ್ಪ ಭೀಮಪ್ಪ ಬೇನಾಳ, ಸದಸ್ಯರಾಗಿ ಸೂರ್ಯಪ್ರಕಾಶ ದಯಾನ೦ದ ಅಣ್ಣನ್ನವರು, ಮ೦ಜುನಾಥ ಈರಪ್ಪ ಮ೦ಗಳಗುಡ್ಡೆ, ಪ್ರದೀಪ ಹೊನ್ನಪ್ಪ ಬಿಶೆಟ್ಟಿ, ಶರಣಬಸಪ್ಪ ವೀರಭದ್ರಪ್ಪ

ಉಡುಪಿ: ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಶ್ರೀದೇವರಿಗೆ ಕನ್ನರ್ಪಾಡಿ ನಿವಾಸಿ ದಿವ೦ಗತ ಐ.ಶ್ರೀನಿವಾಸ ನಾಯಕ ರವರ ಮಕ್ಕಳು "ವಜ್ರಸಹಿತ ಚಿನ್ನದ ಕರ್ಣಕು೦ಡಲ"ವನ್ನು ಶ್ರಾವಣ ಮಾಸದ ಮೊದಲ ಶನಿವಾರ ಅಗಸ್ಟ್ 3ರ೦ದು ದೇವರಿಗೆ ಸಮರ್ಪಿಸಿದರು. ದಿವ೦ಗತ ಐ.ಶ್ರೀನಿವಾಸ ನಾಯಕರವರು 1955-60ರದಶಕದಲ್ಲಿ ಉಡುಪಿಯ ಕಲ್ಪನಾ ಟ್ಯಾಕೀಸ್ ಬಳಿಯಲ್ಲಿನ ಟ್ಯಾಕ್ಸಿ ಸ್ಟ್ಯಾ೦ಡ್ ನಲ್ಲಿ ಕಾರು ನಡೆಸುತ್ತಿದ್ದರು.

ಉಡುಪಿ: ನಾಗರಪಂಚಮಿ ಸಂಭ್ರಮಕ್ಕೆ ಉಡುಪಿಯಲ್ಲಿ ಶನಿವಾರವೇ ಖರೀದಿ ಆರಂಭ ಗೊಂಡಿತು. ರಥಬೀದಿಯಲ್ಲಿ ಮಹಾರಾಷ್ಟ್ರದ ರತ್ನಗಿರಿ ಯಿಂದ ಬಂದಿರುವ ಸ್ವರ್ಣಕೇದಗೆ ಪರಿಮಳ ಬೀರುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಉಂಟಾದ ನೆರೆಯಿಂದಾಗಿ ಸ್ವರ್ಣಕೇದಗೆ ಗಿಡಗಳಿಗೂ ಹಾನಿಯಾದ ಪರಿಣಾಮ ದರ ಹೆಚ್ಚಾಗಿದೆ. ‘ಹುಬ್ಬಳ್ಳಿಯಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ರತ್ನಗಿರಿಯಿಂದ ಸ್ವರ್ಣಕೇದಗೆ ತರುತ್ತೇವೆ. ಆದರೆ ಈ ಬಾರಿ