Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಚಿಕ್ಕಮಗಳೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತದಲ್ಲಿನ ನೀರು ಭಾರೀ ಪ್ರಮಾಣದಲ್ಲಿ ಹರಿದು ಬಂದ ಪರಿಣಾಮ ನೀರು ವೀರಭದ್ರೇಶ್ವರ ದೇವಾಲಯದಲ್ಲಿ ಭಕ್ತರು ಹೊರಬರಲಾರದೆ ಪರದಾಡುವಂತಾಗಿದೆ. ಭಕ್ತರು ಕಲ್ಲತ್ತಿಗಿರಿ ಜಲಪಾತದ ಒಳಭಾಗದಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಒಳಭಾಗದಲ್ಲಿದ್ದು, ನೀರು ಪ್ರವಾಹದ ರೀತಿಯಲ್ಲಿ ದೇವಾಲಯದ ಮುಂಭಾಗದಲ್ಲಿ ಹರಿದು ಬರುತ್ತಿದ್ದು, ಇದರಿಂದ ಭಕ್ತರು

ಬೆಂಗಳೂರು: ಕೃಷ್ಣಾ ನದಿಯಲ್ಲಿ ನೀರು ಮತ್ತಷ್ಟು ಹೆಚ್ಚಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಬಸವ ಸಾಗರ ಜಲಾಶಯದಿಂದ ಒಟ್ಟು 3 ಲಕ್ಷ 15 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗಿದೆ. ಕೃಷ್ಣಾ ನದಿ ತೀರದ ಗ್ರಾಮದಲ್ಲಿ ಪ್ರವಾಹ ಆತಂಕ ಉಂಟಾಗಿದ್ದು, ಸಂಜೆವರೆಗೆ 4ಲಕ್ಷ ಕ್ಯೂಸೆಕ್ ನೀರು ಹರಿ

ಉಡುಪಿ/ಕಾರ್ಕಳ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಲವು ಜಿಲ್ಲೆಗಳ ಶಾಲಾ ಕಾಲೇಜಿಗೆ ಬುಧವಾರ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ತೀವ್ರ ಮಳೆಯ ಕಾರಣ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದ್ದು ಆಗಸ್ಟ್ 7 ರಂದು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಹೆಬ್ರಿ: ಮಂಗಳವಾರ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣ ಹೆಬ್ರಿ ಸಮೀಪ ಬಂಡಿಮಠದಲ್ಲಿ ಸೀತಾನದಿ ಅಪಾಯದ ಮಟ್ಟ ಮೀರಿ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ಶಿವಮೊಗ್ಗ-ಉಡುಪಿ ಸಂಪರ್ಕಿಸುವ ರಾ.ಹೆ. 169 ಎ ನಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ನೀರು ಹರಿಯುತ್ತಿದ್ದರಿಂದ ವಾಹನಗಳು ಸ್ಥಳದಲ್ಲೇ ನಿಲ್ಲಬೇಕಾಯಿತು. ಸಂಚಾರಕ್ಕೆ ಅಡಚಣೆಯಾಗಿರುವುದರಿಂದ ಶಿವಮೊಗ್ಗ-ಉಡುಪಿ ಸಂಚರಿಸುವ ವಾಹನಗಳು ಹೆಬ್ರಿ

ಹೊಸದಿಲ್ಲಿ: ಮುಖ್ಯಮಂತ್ರಿಯಾಗಿ 4ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ದಿಲ್ಲಿಯಲ್ಲಿ ಭೇಟಿಯಾದರು. ಈ ವೇಳೆ ಅವರು ವಿವಿಧ ಯೋಜನೆಗಳು ಮತ್ತು ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿದರು. ಯಡಿಯೂರಪ್ಪ ಅವರ ಭೇಟಿ ವೇಳೆ ಸಚಿವ ಪ್ರಹ್ಲಾದ್‌ ಜೋಶಿ, ಡಿ.ವಿ.ಸದಾನಂದ

ಡೆಹ್ರಾಡೂನ್: ಶಾಲಾ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 9 ಮಕ್ಕಳು ಮೃತಪಟ್ಟಿದ್ದು ಇತರ 14 ಮಂದಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ತೆಹ್ರಿ ಪ್ರಾಂತ್ಯದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಶಾಲಾ ವಾಹನ ಮದನ್ನೆಗಿ ಕಡೆಗೆ ಹೋಗುತ್ತಿದ್ದಾಗ ಪ್ರತಾಪ್ ನಗರ್ - ಕಂಗ್ಸಾಲಿ-ಮದನ್ ನೇಗಿ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ತೆಹ್ರಿ

ಹೊಸದಿಲ್ಲಿ: ನ್ಯೂಜಿಲೆಂಡ್ ನ ಖ್ಯಾತ ಕ್ರಿಕೆಟಿಗ, ಮಾಜಿ ನಾಯಕ ಬ್ರೆಂಡಂನ್ ಮೆಕಲಂ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. 37 ಹರೆಯದ ಬ್ರೆಂಡಂನ್ ಮೆಕಲಂ ನ್ಯೂಜಿಲ್ಯಾಂಡ್ ಪರ 101 ಟೆಸ್ಟ್, 260 ಏಕದಿನ ಮತ್ತು 71 ಟಿ20 ಪಂದ್ಯಗಳನ್ನಾಡಿದ್ದಾರೆ. ನ್ಯೂಜಿಲ್ಯಾಂಡ್ ನ ಅತೀ ಶ್ರೇಷ್ಟ ಆಟಗಾರರಾಗಿರುವ ಮೆಕಲಂ ಆಕರ್ಷಕವಾಗಿ

ಬೆಂಗಳೂರು: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಏಳು ವರ್ಷ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜ್ಯೋತಿ ಎಂಬಾಕೆ ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಜ್ಯೋತಿ ತನ್ನ ಏಳು ವರ್ಷದ ಶಾಬುನಾ ಎಂಬ ಹೆಣ್ಣು ಮಗುವನ್ನು ಕೊಂದು ಕಟ್ಟಡದ

ಉಡುಪಿ: ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ಶ್ರಾವಣಮಾಸದ ನಾಗರ ಪ೦ಚಮಿ ದಿನದಿ೦ದ ನಡೆಯುವ ಭಜನಾ ಸಪ್ತಾಹ ಮಹೋತ್ಸವವು ಈ ಬಾರಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮವಾಗಿದ್ದು ಇ೦ದು ಸೋಮವಾರದ೦ದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈಯವರು ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ದೇವಳದ