Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಗುವಾಹಟಿ: ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಹೊರಬಿದ್ದಿದ್ದು ಸುಮಾರು 19 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಈ ದಾಖಲಾತಿ ವರದಿಯಲ್ಲಿಲ್ಲ. ಎನ್ ಆರ್ ಸಿ ದಾಖಲಾತಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಒಟ್ಟಾರೆ 3 ಕೋಟಿಯ 30 ಲಕ್ಷದ 27 ಸಾವಿರದ 661 ಮಂದಿ ಅರ್ಜಿ ಸಲ್ಲಿಸಿದ್ದರು. ಸಂವಿಧಾನ

ಉಡುಪಿ: ಗಣೇಶೋತ್ಸವದ ಪ್ರಯುಕ್ತ ಸಮಾಜಕ್ಕೆ ಹೊಸದನ್ನು ಕೊಡಬೇಕೆನ್ನುವ ನೆಲೆಯಲ್ಲಿ ಮಣಿಪಾಲ ಸ್ಯಾಂಡ್‌ ಹಾರ್ಟ್‌ ಕಲಾವಿದರಾದ ಶ್ರೀನಾಥ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೆಬೆಟ್ಟು ಅವರು 21 ರಾಷ್ಟ್ರಗಳ ಕೃತಕ ನೋಟುಗಳನ್ನು ಬಳಸಿಕೊಂಡು ಸಾಯಿರಾಧಾ ಮೋಟಾರ್ನ ಸಹಯೋಗದಲ್ಲಿ ಸುಮಾರು 12 ಅಡಿ ಎತ್ತರದ ಅತ್ಯಾಕರ್ಷಕ ಗಣೇಶನ ಮೂರ್ತಿ ನಿರ್ಮಿಸಿ ಜನರನ್ನು ಸೆಳೆಯುತ್ತಿದ್ದಾರೆ. ಕೃತಕ

ಮಂಗಳೂರು:  ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ ಅವೈಜ್ಞಾನಿಕವಾಗಿ ಪಚ್ಚನಾಡಿಯಲ್ಲಿ  ತ್ಯಾಜ್ಯ ಸಂಗ್ರಹ ಮಾಡಿದ್ದರಿಂದ ನೆರೆ ಸಂದರ್ಭದಲ್ಲಿ ಬಹಳಷ್ಟು ಮನೆಗಳಿಗೆ ಹಾನಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಪಚ್ಚನಾಡಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು,  ಈ ಭಾಗದಲ್ಲಿ ತ್ಯಾಜ್ಯ ಹಾಕುವ ಮೊದಲು ಮುನ್ನೆಚ್ಚರಿಕೆ

ಮುಂಬೈ: ರಾಸಾಯನಿಕ ಉತ್ಪನ್ನ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಧುಲೇ ಸಮೀಪದ ಶಿರ್ಪುರ್ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಸ್ಫೋಟದ ರಭಸಕ್ಕೆ 70ಕ್ಕೂ ಅಧಿಕ ಮಂದಿ ಕಾರ್ಖಾನೆ ಒಳಗಡೆ ಸಿಲುಕಿದ್ದು, ಸ್ಥಳಕ್ಕೆ ಎನ್ ಡಿಆರ್

ಹಾಸನ: ಪ್ರಿಯಕರನ ಜತೆಗೆ ಸೇರಿ ಮಗಳೊಬ್ಬಳು ತಂದೆಗೇ ಸುಪಾರಿ ಕೊಟ್ಟು ಕೊಂದ ಘಟನೆ ಹಾಸನದಲ್ಲಿ ನಡೆದಿದೆ. ಘಟನೆ ಸಂಬಂಧ ಪುತ್ರಿ, ಪ್ರಿಯಕರ ಸೇರಿ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ವಿದ್ಯಾ, ಚಿದಾನಂದ ಹಾಗೂ ರಘು ಎಂದು ಗುರುತಿಸಿದ್ದು ತಂದೆಯ ಕೊಲೆಗಾಗಿ ವಿದ್ಯಾ ಹದಿನೈದು ಲಕ್ಷ ರು. ಸುಪಾರಿ ನೀಡಿದ್ದಳು. ಘಟನೆ ವಿವರ ವಿದ್ಯಾಗೆ ಇದಾಗಲೇ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ( ಕೆಎಂಎಫ್‌) ನ ಅಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಕೆಎಂಎಫ್‌ ನ ಮುಖ್ಯ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಯ್ಕೆಯಾಗಿದ್ದಾರೆ. “ಕೆಎಂಎಫ್ ಪಕ್ಷಾತೀತವಾಗಿ ಮುನ್ನಡೆಸುತ್ತೇನೆ.‌ ರೈತರಿಗೆ ದೊರೆಯಬೇಕಾದ ಎಲ್ಲ ಸವಲತ್ತುಗಳನ್ನು ಕಾಲಮಿತಿಯಲ್ಲಿ ದೊರೆಯುವಂತೆ

ಶಿವಮೊಗ್ಗ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಘೋಷಣೆ ಮಾಡಿದ್ದು, ಕೆ‌.ಎಸ್.ಈಶ್ವರಪ್ಪ ಅವರು ನೂತನ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿರುವ ಕೆ‌.ಎಸ್. ಈಶ್ವರಪ್ಪ ಅವರು ಬಿ ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಜಿಲ್ಲಾ ಉಸ್ತುವಾರಿಯಾಗಿ ನೇಮಕ ಗೊಳಿಸಿದ್ದಕ್ಕಾಗಿ ಈಶ್ವರಪ್ಪ

ನವದೆಹಲಿ: ಮಂದಗತಿಯಲ್ಲಿರುವ ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಮಹತ್ವದ ನಿರ್ಧಾರಗಳನ್ನು ಶುಕ್ರವಾರ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯ ಹೈಲೈಟ್ಸ್: *ಬ್ಯಾಂಕ್ ಗಳ ವಾಣಿಜ್ಯ ವ್ಯವಹಾರಗಳ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸುವುದಿಲ್ಲ     *250 ಕೋಟಿ ರೂಪಾಯಿಗಿಂತ ಅಧಿಕ ಮೊತ್ತದ ಸಾಲದ ಬಗ್ಗೆ ವಿಶೇಷ ಏಜೆನ್ಸಿ ಮೇಲ್ವಿಚಾರಣೆ

ಉಡುಪಿ:ಸೆ.1ಮತ್ತು 2ರ೦ದು ನಡೆಯಲಿರುವ ಗೌರಿ-ಗಣೇಶ ಹಬ್ಬಕ್ಕಾಗಿ ನಾಡಿನ ಏಲ್ಲೆಡೆಯಲ್ಲಿ ಜನರು ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಮನೆ-ಮನೆಯಲ್ಲಿ ಹಾಗೂ ವಿವಿಧ ಸಮಿತಿಗಳ ಆಶ್ರಯದಲ್ಲಿ ನಡೆಯಲಿರುವ ಗಣೇಶ ನ ಆರಾಧನೆಗೆ ಬೇಕಾಗುವ ಪೆ೦ಡಾಲ್ ಗಳನ್ನು ಹಾಗೂ ಸಕಲ ಸಿದ್ದತೆಯನ್ನು ಮಾಡಲಾಗಿದೆ. ಮಳೆ ರಾಯನ ಕಿರಿಕಿರಿಯನ್ನು ತಪ್ಪಿಸಲು ತಗಡಿನ ಚಪ್ಪರವನ್ನು ನಿರ್ಮಾಣಮಾಡಲಾಗಿದೆ. ಕಳೆದ ವರುಷಕ್ಕಿ೦ತಲೂ