Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದ್ದು, ಕಾಬೂಲ್‌ನಲ್ಲಿ ಇಂದು ತ್ರಿವಳಿ ಬಾಂಬ್ ಸ್ಫೋಟಗೊಂಡ ಪರಿಣಾಮ 12 ಮಂದಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಮೊದಲು ಸರ್ಕಾರಿ ನೌಕರರು ಪ್ರಯಾಣಿಸುತ್ತಿದ್ದ ಮಿನಿಬಸ್‌ಗೆ ಅಂಟಿಸಲಾದ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಗೊಂಡಿದ್ದು, ತದ ನಂತರ ಸ್ಥಳಕ್ಕೆ ಬಂದ ಆತ್ಮಾಹುತಿ ಬಾಂಬ್ ದಾಳಿಕೋರರಿಂದ ಎರಡನೇ ಬಾಂಬ್ ಸ್ಫೋಟಗೊಂಡಿದ್ದು, ಬಳಿಕ

ಬೆಂಗಳೂರು: ಸರ್ಕಾರ ರಚನೆ ಹಾಗೂ ಇತರ ಕಾರ್ಯತಂತ್ರಗಳ ಬಗ್ಗೆ ರಾಜ್ಯದ ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಅವರ ನೇತೃತ್ವದ ನಿಯೋಗ ದೆಹಲಿಯಲ್ಲಿ ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ನಮ್ಮ ಸೂಚನೆ ಸಿಗುವವರೆಗೂ ಕಾಯುವಂತೆ ರಾಜ್ಯದ ನಿಯೋಗಕ್ಕೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ

ಬೆಂಗಳೂರು:ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಕಳೆದುಕೊಂಡ ಬಳಿಕ ಇದೀಗ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದಾ? ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರಾ? ಸ್ಪೀಕರ್ ನಡೆ ಏನು? ಬಿಜೆಪಿ ಹೈಕಮಾಂಡ್ ಚಿತ್ತ ಯಾರತ್ತ ಹೀಗೆ ಹತ್ತು, ಹಲವಾರು ಪ್ರಶ್ನೆಗಳ ಬಿಸಿ,ಬಿಸಿ ಚರ್ಚೆ ನಡೆಯುತ್ತಿದೆ. ಬುಧವಾರ ಅಥವಾ ಗುರುವಾರವೇ

ಲಂಡನ್: ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಭಾರತೀಯ ಮೂಲದ ರಾಜಕಾರಣಿ ಪ್ರೀತಿ ಪಟೇಲ್ ಅವರನ್ನು ಗೃಹ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದ ಕ್ಯಾಬಿನೆಟ್ ನಲ್ಲಿ ಭಾರತೀಯ ಮೂಲದ ಪ್ರೀತಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ

ಉಡುಪಿ:ಉಡುಪಿಯ ಅ೦ಬಾಗಿಲಿನ ನಿವಾಸಿ ಹಾಗೂ ಉಡುಪಿಯ ಕೊರ೦ಗ್ರಪಾಡಿ-ಬೈಲೂರು ಉದಯವಾಣಿಯ ವಿತರಕರಾದ ಕೆಸರುಗದ್ದೆ ಮು೦ಜುನಾಥ ಮಲ್ಯರವರು ಗುರುವಾರದ೦ದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಉಡುಪಿಯ ಎ೦ ಜಿ ಎ೦ ಕಾಲೇಜಿನ ಲೈಬ್ರೇರಿಯಲ್ಲಿ ಸಹಾಯಕರಾಗಿ ಸೇವೆಯಲ್ಲಿ ಸಲ್ಲಿಸಿದವರಾಗಿದ್ದಾರೆ. ಪ್ರತಿ ನಿತ್ಯದ೦ತೆ ಉದಯವಾಣಿ ಪತ್ರಿಕೆಯನ್ನು ವಿತರಿಸಿ ಮನೆಗೆ ತೆರಳಿ ಕುಳಿತು ಟಿವಿಯನ್ನು ನೋಡುತ್ತಿದ್ದಾಗ ಅಲ್ಲಿಯೇ

ಮೈಸೂರು: ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ  ತಿ.ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಂದೇಗಾಲ ನಿವಾಸಿ ರಾಘವೇಂದ್ರ (25), ಕಂಚಮಳ್ಳಿ ನಿವಾಸಿ ಮಧುಕುಮಾರ್ (19), ನಂಜನಗೂಡು ತಾಲೂಕಿನ ಹುರಾ ಗ್ರಾಮದ

ಟೋಕಿಯೋ: ಭಾರತದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್‌ ಆಟಗಾರ ಕಿಡಂಬಿ ಶ್ರೀಕಾಂತ್‌ ಅವರ 2019ರ ವೈಫಲ್ಯ ಮುಂದುವರಿದಿದ್ದು, ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್‌ ಮೊದಲ ಸುತ್ತಿನಲ್ಲಿಯೇ ಭಾರತದ ಮತ್ತೊಬ್ಬ ಆಟಗಾರ ಎಚ್‌.ಎಸ್‌ ಪ್ರಣಯ್‌ ವಿರುದ್ಧ ಸೋಲು ಅನುಭವಿಸಿದರು. 55 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಎಚ್‌.ಎಸ್‌ ಪ್ರಣಯ್‌ ಅವರು

ವಾಷಿಂಗ್ಟನ್: ಕಳೆದ 15 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಯಶಸ್ವಿಯಾಗಿ ಆಡಳಿತ ನಡೆಸಿದ ಯಾವ ಸರ್ಕಾರವೂ ಅಮೆರಿಕಕ್ಕೆ ಉಗ್ರರಿಗೆ ಸಂಬಂಧಿಸಿದ ಸತ್ಯವನ್ನೇ ಹೇಳಿರಲಿಲ್ಲವಾಗಿತ್ತು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ 40 ವಿವಿಧ ಭಯೋತ್ಪಾದಕ ಸಂಘಟನೆಗಳಿವೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ! ಭಯೋತ್ಪಾದನೆ ವಿರುದ್ಧದ ಅಮೆರಿಕದ ಹೋರಾಟದ ಜತೆಗೆ ನಾವಿದ್ದೇವೆ. 9/11

ಕಾಪು: ಆಟಿ ಮಾರಿ ಪೂಜೆಯ ಅ೦ಗವಾಗಿ ಕಾಪು ಶ್ರೀಹಳೆ ಮಾರಿಯಮ್ಮ ದೇವರಿಗೆ ವಿಶೇಷ ಹೂವಿನ ಅಲ೦ಕಾರವನ್ನು ಮಾಡಲಾಯಿತು. ಸಾವಿರಾರು ಮ೦ದಿ ಭಕ್ತರು ಶ್ರೀದೇವರ ದರ್ಶನವನ್ನು ಮಾಡಿ ಪೂಜೆಯನ್ನು ಸಲ್ಲಿಸಿದರು. ರಾತ್ರೆ ಬೆಳ್ಳಿದಲ್ಲಿ ಶ್ರೀದೇವರನ್ನು ಕುಳ್ಳಿರಿಸಿ ರಥೋತ್ಸವವನ್ನು ನಡೆಸಲಾಯಿತು.

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಕಾಶ್ಮೀರ ವಿವಾದ ಸಂಬಂಧ ಯಾರ ಮಧ್ಯಸ್ಥಿಕೆಯೂ ಭಾರತಕ್ಕೆ ಬೇಕಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಕಾಶ್ಮೀರ ವಿಚಾರವಾಗಿ ತಾನು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ