Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಬೆಂಗಳೂರು: ಕಳೆದ 14 ತಿಂಗಳ ಕಾಲ ನಾನು ಸಂವಿಧಾನಬದ್ಧವಾಗಿ, ಆತ್ಮಸಾಕ್ಷಿಯಾಗಿ ಅನುಗುಣವಾಗಿ ಮೈತ್ರಿ ಸರಕಾರದಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. ಸರಕಾರಕ್ಕೆ ಬಹುಮತ ಇಲ್ಲದ ಕಾರಣ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಮೇಶ್ ಕುಮಾರ್ ತಿಳಿಸಿದ್ದಾರೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗ ನನ್ನ ಸರ್ವಾನುಮತದಿಂದ ಸ್ಪೀಕರ್ ಆಗಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ, ಬಿಡುವಿಲ್ಲದ ಕೆಲಸದ ನಡುವೆಯೂ ಪ್ರಧಾನಿಯ ಮತ್ತೊಂದು ಮಗ್ಗುಲು ಹೇಗಿದೆ ಎಂಬುದು ಆಗಸ್ಟ್ 12ರಂದು ಪ್ರಸಿದ್ಧ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗುವ “ಮ್ಯಾನ್ v/s ವೈಲ್ಡ್” ಎಂಬ ಅಡ್ವೆಂಚರ್ ಶೋನಲ್ಲಿ ಅನಾವರಣಗೊಳ್ಳಲಿದೆ. ಡಿಸ್ಕವರಿ ಚಾನೆಲ್ ನ ಎಡ್ವರ್ಡ್ ಮೈಕೆಲ್ ಗ್ರಿಲ್ಸ್ (ಬೇರ್ ಗ್ರಿಲ್ಸ್)

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ ಎಸ್ ಯಡಿಯೂರಪ್ಪ ಅವರು 15ನೇ ವಿಧಾನಸಭೆಯಲ್ಲಿ ಎರಡನೇ ಬಾರಿಗೆ ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯದಲ್ಲಿ ಸರ್ಕಾರಕ್ಕೆ ಇರುವ ಬಹುಮತವನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರ ಸರ್ಕಾರಕ್ಕೆ ಬಹುಮತ ಪ್ರಾಪ್ತಿಯಾಗಿದ್ದು, ಸಧ್ಯಕ್ಕೆ ಆರು ತಿಂಗಳ ಕಾಲ ಸರ್ಕಾರಕ್ಕೆ ಯಾವುದೇ ಆಪತ್ತು ಇಲ್ಲದಂತಾಗಿದೆ.  ಇಂದು

ನವದೆಹಲಿ: ಇಂದು ವಿಶ್ವ ಹುಲಿ ದಿನ, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಖಿಲ ಭಾರತ ಹುಲಿ ಅಂದಾಜು ವರದಿ 2018ನ್ನು ಬಿಡುಗಡೆಗೊಳಿಸಿದ್ದಾರೆ.ಹುಲಿಗಳಿಗೆ ವಿಶ್ವದ ಅತಿದೊಡ್ಡ ಮತ್ತು ಸುರಕ್ಷಿತ ಆವಾಸಸ್ಥಾನವಾಗಿ ಭಾರತ ದೇಶ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.ದೇಶದ ಹುಲಿಗಳ ಸಂಖ್ಯೆ 2014ರಲ್ಲಿ 1,400 ಇದ್ದದ್ದು  2019 ರಲ್ಲಿ

ಉಡುಪಿ: ಕಾರ್ಗಿಲ್ ಯೋಧರು ದೇಶದ ರಕ್ಷಣೆಗಾಗಿ ಹೋರಾಡಿದರು. ಮರ ಗಿಡಗಳು ನಮ್ಮ ರಕ್ಷಣೆಗಾಗಿ ದಿನನಿತ್ಯ ಹೋರಾಡುತ್ತಿವೆ. ದಿನನಿತ್ಯ ಒಬ್ಬೊಬ್ಬರಿಗೆ ಸಾವಿರಗಟ್ಟಲೆ ರೂಪಾಯಿಯಷ್ಟು ಆಮ್ಲಜನಕವನ್ನು ಉಚಿತವಾಗಿ ನೀಡುತ್ತಿವೆ. ಮಳೆ ತರಿಸಿ ಕುಡಿಯುವ ನೀರನ್ನು ಸಂರಕ್ಷಿಸುತ್ತಿವೆ. ತಂಪಾದ ವಾತಾವರಣ ನೀಡುತ್ತಿವೆ. ಹಾಗಿರುವಾಗ ನಾವು ಅವುಗಳ ಪಾಲಿಗೆ ಕಟುಕರಾಗಬಾರದು. ಅವುಗಳನ್ನು ರಕ್ಷಿಸಬೇಕು. ಗಿಡನೆಟ್ಟು

ಬೆಂಗಳೂರು: ರಾಜೀನಾಮೆ ನೀಡಿದ್ದ ಎಲ್ಲಾ ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿದ್ದು, ಅನರ್ಹಗೊಂಡ ಶಾಸಕರ ಸಂಖ್ಯೆ 17ಕ್ಕೇರಿದೆ. ಈಗಿನ ಬೆಳವಣಿಗೆಯಲ್ಲಿ ಅನರ್ಹಗೊಂಡ ಶಾಸಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ರಾಜೀನಾಮೆ ನೀಡಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್‌, ಮುನಿರತ್ನ, ಭೈರತಿ ಬಸವರಾಜ್‌, ಪ್ರತಾಪಗೌಡ ಪಾಟೀಲ್‌, ರೋಷನ್‌ ಬೇಗ್‌, ಎಂಟಿಬಿ ನಾಗರಾಜ್‌, ಸುಧಾಕರ್‌, ಬಿಸಿ ಪಾಟೀಲ್‌,

ಬೆಂಗಳೂರು: ರಾಜ್ಯದಲ್ಲಿ ‌ಮೈತ್ರಿ ಮುಂದುವರಿಕೆ ಕುರಿತು ಕಾಂಗ್ರೆಸ್ ನಾಯಕರ ತೀರ್ಮಾನ ನೋಡಿ ಮುಂದಿನ ನಿರ್ಧಾರ ಮಾಡ್ತೇವೆ ಎಂದು ಮಾಜೀ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ನಂತರದ ಪರಿಸ್ಥಿತಿಯಲ್ಲಿ  ಸೋನಿಯಾಗಾಂಧಿ, ರಾಹುಲ್ ಗಾಂಧಿಯವರು ಮೈತ್ರಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದರು. ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಬೇಕು ಎಂದು‌ ತೀರ್ಮಾನ

ಹೈದರಾಬಾದ್: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರು ಹೈದರಾಬಾದ್‌ನಲ್ಲಿ ಭಾನುವಾರ ಮುಂಜಾನೆ ನಿಧನ ಹೊಂದಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.  77 ವರ್ಷದ ರೆಡ್ಡಿ ಅವರಿಗೆ ಇತ್ತೀಚೆಗೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ

ಕಾಬೂಲ್: ಅಫ್ಘಾನಿಸ್ತಾನದ ಮಧ್ಯ ಘಜ್ನಿ ಪ್ರಾಂತ್ಯದಲ್ಲಿ ನಡೆದ ಅಮೆರಿಕ  ನೇತೃತ್ವದ ವೈಮಾನಿಕ ದಾಳಿಯಲ್ಲಿ ಕನಿಷ್ಠ 20 ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ  ವರದಿ ಮಾಡಿವೆ. ಖರಾಬಾಗ್ ಜಿಲ್ಲೆಯ ಸೈಯದ್ ವಾಲಿ ಮತ್ತು ಮಾರ್ವಾರ್ಡಾ ಪ್ರದೇಶಗಳಲ್ಲಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಸುದ್ದಿ ಸಂಸ್ಥೆ  ವರದಿ ಮಾಡಿದೆ.ಕತಾರ್‌ನಲ್ಲಿ ನಡೆಯುತ್ತಿದ್ದ  ಅಮೆರಿಕ 

ಮುಂಬೈ: 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಜೆಡಿಎಸ್ ಅತೃಪ್ತ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ. ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕ ಮತ್ತು ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು, 'ಸ್ಪೀಕರ್ ರಮೇಶ್‌ ಕುಮಾರ್ ಅವರ