Log In
BREAKING NEWS >
ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನೇರಪ್ರಸಾರ ಕಾರ್ಯಕ್ರಮಕ್ಕೆ ಸಹಕರಿಸಿದ ದೇವಸ್ಥಾನದ ಆಡಳಿತ ಮ೦ಡಳಿಗೆ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯವರಿಗೆ ಮತ್ತು ಜಾಹೀರಾತನ್ನು ನೀಡಿ ಸಹರಿಸಿದ ಎಲ್ಲಾ ಜಾಹೀರಾತುದಾರರಿಗೆ ಕರಾವಳಿ ಕಿರಣ ಡಾಟ್ ಬಳಗದ ವತಿಯಿ೦ದ ಧನ್ಯವಾದಗಳು ಹಾಗೂ ಏಳುದಿನಗಳ ನಮ್ಮ ಅ೦ತರ್ಜಾಲ ಪತ್ರಿಕೆಯನ್ನು ವೀಕ್ಷಿಸಿದ ಎಲ್ಲಾ ಓದುಗರಿಗೆ,ಅಭಿಮಾನಿಗಳಿಗೆ ಅಭಿನ೦ದನೆಗಳನ್ನು ಸಲ್ಲಿಸುತ್ತೇವೆ.

ಉಡುಪಿ: ರವಿವಾರ ರಾತ್ರಿ ಇಂದ್ರಾಳಿ ಎಆರ್‌ಜೆ ಆರ್ಕೆಡ್‌ನ‌ಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 5.75 ಕೋ.ರೂ. ನಷ್ಟ ಉಂಟಾಗಿದೆ ಎಂದು ಜಯದೇವ ಮೋಟಾರ್ ಸಹಿತ ಒಟ್ಟು ನಾಲ್ಕು ಮಳಿಗೆ/ಸಂಸ್ಥೆಗಳ ಮಾಲಕರು ದೂರು ನೀಡಿದ್ದಾರೆ. ಜಯದೇವ ಮೋಟಾರ್ ಶೋ ರೂಂನಲ್ಲಿದ್ದ 11 ಬೈಕ್‌ಗಳು ಸುಟ್ಟು ಹೋಗಿವೆ. ಬಿಡಿಭಾಗಗಳ ಮಳಿಗೆ ಸಂಪೂರ್ಣ ಸುಟ್ಟಿದೆ. ಇಲ್ಲಿ

ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡುವಂತೆ ಜೆಡಿಎಸ್ ವರಿಷ್ಟರಿಗೆ ವಿಶ್ವನಾಥ್ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ  ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಡಗೊಂಡ ಆಡಳಿತ ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ಗ್ರಾಮವಾಸ್ತವ್ಯ ಸಹಕಾರಿ ಎಂದ ವಿಶ್ವನಾಥ್ , ಜನರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ಅದರ

ಕಾಪು: ಹಾಸನ ಜಿಲ್ಲೆಯ ಸಕಲೇಶಪುರದ ರಾ. ಹೆ. 75ರ ಕುಂಬಾರಕಟ್ಟೆ ಬಳಿ ರವಿವಾರ ಕ್ರೂಸರ್‌ ಮತ್ತು ಬುಲೆಟ್‌ ಮುಖಾಮಖೀ ಢಿಕ್ಕಿ ಹೊಡೆದು ಕಟಪಾಡಿಯ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಟಪಾಡಿ ಅಗ್ರಹಾರ ನಿವಾಸಿ, ಮೆಸ್ಕಾಂನ ನಿವೃತ್ತ ಉದ್ಯೋಗಿ ಶ್ರೀನಿವಾಸ ಪೂಜಾರಿ-ಅರುಣಾ ದಂಪತಿ ಪುತ್ರ ಶ್ರವಣ್‌ ಪೂಜಾರಿ (27) ಮೃತಪಟ್ಟವರು. ಡಿಪ್ಲೊಮಾ ಎಂಜಿನಿಯರ್‌

ಬೆಳಗಾವಿ: ದೇವರ ದೀಪ ಹಾಸಿಗೆ ಮೇಲೆ ಬಿದ್ದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 8 ವರ್ಷದ ಬಾಲಕಿ ಪೋಷಕರ ಕಣ್ಣೆದುರಲ್ಲಿಯೇ ಸಜೀವವಾಗಿ ದಹನವಾದ ಹೃದಯವಿದ್ರಾವಕ ಘಟನೆ ಬೆಳಗಾವಿ ನಗರದ ಅನಗೋಳದಲ್ಲಿ ಘಟನೆ ನಡೆದಿದೆ. ಹೊಲದಲ್ಲಿನ ಗುಡಿಸಲಿನಲ್ಲಿ ಮಲಗಿದ್ದ ವೇಳೆ ದೇವರ ದೀಪ ಕೆಳಗೆ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು. ಏಕಾಏಕಿ ಬೆಂಕಿ ಹೊತ್ತಿಕೊಂಡ

ಬೆಂಗಳೂರು: ರಾಜ್ಯಾದ್ಯಂತ ಗುತ್ತಿಗೆ ಆಧಾರದ ಮೇಲೆ ಕರ್ತವ್ಯನಿರ್ವಹಿಸುತ್ತಿರುವ ಆರು ಸಾವಿರ ಗ್ರಂಥಾಲಯ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವಂತೆ ಮನವಿ ನೀಡಲು ವಿಧಾನಸೌಧಕ್ಕೆ ತೆರಳಿದ್ದ ಗ್ರಂಥಾಲಯ ಮೇಲ್ವಿಚಾರಕ, “ಸರ್ಕಾರದ ವಿರುದ್ಧ ಡೆತ್‌ನೋಟ್‌’ ಬರೆದಿಟ್ಟು ಕುತ್ತಿಗೆ ಹಾಗೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ವಿಧಾನಸೌಧದ ಮೂರನೇ ಮಹಡಿಯ ಕೊಠಡಿ

ಉಡುಪಿ:ಇ೦ದ್ರಾಳಿಯ ರೈಲ್ವೇ ಬ್ರೀಜ್ ಬಳಿಯಲ್ಲಿರುವ ಜಯದೇವ್ ಮೋಟಾರ್ ಝೋನ್ ಕಟ್ಟಡದಲ್ಲಿ ಭಾನುವಾರದ೦ದು ರಾತ್ರೆ ಶಾರ್ಟ್ ಸರ್ಕ್ಯೂಟ್ ನಿ೦ದಾಗಿ ಬೆ೦ಕಿ ಸ೦ಭವಿಸಿದ್ದು ಲಕ್ಷಾ೦ತರ ರೂ ಬೆಲೆಬಾಳುವ ದ್ವಿಚಕ್ರ ವಾಹನಗಳು ಸೇರಿದ೦ತೆ ಕಟ್ಟಡದಲ್ಲಿರುವ ಇತರ ಅ೦ಗಡಿ ಕೋಣೆಗಳು ಸಹ ಬೆ೦ಕಿಯಿ೦ದಾಗಿ ನಷ್ಟಕ್ಕೆ ಒಳಗಾಗಿದೆ. ತಡರಾತ್ರೆಯ ಸಮಯದಲ್ಲಿ ಬೆ೦ಕಿಯಾದ ಕಾರಣ ಬೆ೦ಕಿಯನ್ನು ನ೦ದಿಸಲು ಮೂರು

ಹಿರೋಶಿಮಾ (ಜಪಾನ್‌): ಭಾರತದ ವನಿತಾ ತಂಡವೂ ಎಫ್ಐಎಚ್‌ ಹಾಕಿ ಸೀರಿಸ್‌ ಫೈನಲ್ಸ್‌ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದೆ, ಬಂಗಾರದಿಂದ ಸಿಂಗಾರಗೊಂಡಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ರಾಣಿ ರಾಮ್‌ಪಾಲ್‌ ನೇತೃತ್ವದ ಭಾರತ 3-1 ಗೋಲುಗಳ ಅಂತರದಿಂದ ಆತಿಥೇಯ ಜಪಾನ್‌ಗೆ ಆಘಾತವಿಕ್ಕಿತು. ಡ್ರ್ಯಾಗ್‌ ಫ್ಲಿಕರ್‌ ಗುರ್ಜಿತ್‌ ಕೌರ್‌ (45 ಮತ್ತು 60ನೇ ನಿಮಿಷ)

ಪಿಥೋರ್‌ಗಡ: ಹಿಮಾಲಯದಲ್ಲಿ ನಾಪತ್ತೆಯಾಗಿದ್ದ 7 ಪರ್ವತಾರೋಹಿಗಳ ಶವಗಳನ್ನು ಭಾನುವಾರ ಐಟಿಬಿಪಿ ಯೋಧರ ತಂಡ ಪತ್ತೆಹಚ್ಚಿದೆ. ನಂದಾ ದೇವಿ ಪೂರ್ವ ಪರ್ವತದ ಬಳಿ ಹೆಸರಿಲ್ಲದ ಹಿಮಪರ್ವತದಲ್ಲಿ ಹಿಮದಲ್ಲಿ ಹೂತು ಹೋಗಿದ್ದ 7 ಮಂದಿಯ ಶವಗಳನ್ನು 32 ಮಂದಿ ಯೋಧರ ತಂಡ ಪತ್ತೆ ಹಚ್ಚಿದೆ, ನಾಪತ್ತೆಯಾಗಿರುವ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 7 ಮಂದಿಯ ಪೈಕಿ ಓರ್ವ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಭಾನುವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕೆಲ ವೆಡೆ ಮನೆಗಳು ಕುಸಿದಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿಯ ಯಕ್ಸಾಂಬಾದಲ್ಲಿ ಮಳೆ ನೀರು ಮನೆಗೆ ನುಗ್ಗಿದ ಪರಿಣಾಮ ವೃದ್ಧೆಯೊಬ್ಬಳು ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ. ಯಕ್ಸಾಂಬಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿ ಗರ್ಭಿಣಿಯರು ಮತ್ತು

ಬೆಂಗಳೂರು: ನಗರದಲ್ಲಿ ಇನ್ನೋರ್ವ ರೌಡಿಶೀಟರ್‌ ಮೇಲೆ ಪೊಲೀಸರು ಫೈರಿಂಗ್‌ ಮಾಡಿದ ಘಟನೆ ಶನಿವಾರ ತಡರಾತ್ರಿ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಡೆದಿದೆ. ರೌಡಿ ಶೀಟರ್‌ ರಾಹುಲ್‌ ಅಲಿಯಸ್‌ ಗೋವಿಂದಎಂಬಾತನನ್ನು ಬಂಧಿಸಲು ತೆರಳಿದ್ದ ವೇಳೆ ಹೆಡ್‌ ಕಾನ್ಸ್‌ಟೇಬಲ್‌ ಪ್ರಕಾಶ್‌ ಅವರ ಮೇಲೆ ಲಾಂಗ್‌ ಬೀಸಿದ್ದಾನೆ, ತಕ್ಷಣ ಬ್ಯಾಟರಾಯನಪುರ ಇನ್ಸ್‌ಪೆಕ್ಟರ್‌ ವಿರೇಂದ್ರ ಪ್ರಸಾದ್‌