Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಅಮ್‌ರೋಹಾ : ಉತ್ತರ ಪ್ರದೇಶದ ಅಮ್‌ರೋಹಾ ಜಿಲ್ಲೆಯಲ್ಲಿನ ಬ್ರಿಜ್‌ಘಾಟ್‌ ನಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಲು ಇಳಿದ ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ಏಳು ಮಂದಿ ಮುಳುಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ನಿನ್ನೆ ಸೋಮವಾರ ಈ ದುರ್ಘ‌ಟನೆ ನಡೆದುದನ್ನು ಅನುಸರಿಸಿ ಐದು ಮೃತ ದೇಹಗಳನ್ನು ಮೇಲೆತ್ತಲಾಗಿದೆ; ಇಬ್ಬರು ನಾಪತ್ತೆಯಾಗಿದ್ದಾರೆ ಎಂದು

ರಾಯಪುರ : ಪೊಲೀಸರಿಗೆ ಶಿಬಿರ ಹಾಕಲು ತನ್ನ ಭೂಮಿಯನ್ನು ಕೊಟ್ಟನೆಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ನಕ್ಸಲರು ಗುಂಡಿಕ್ಕಿ ಕೊಂದ ಘಟನೆ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ ನಡೆದಿದೆ. ಕಂಕೇರ್‌ ಜಿಲ್ಲೆಯ ಚರಮಾ ಎಂಬಲ್ಲಿನ ದೇವೇಂದ್ರ ಕುಮಾರ್‌ ಸಿನ್ಹಾ ಮತ್ತು ಆತನ ಮಗ, ಬಡೇತೇವಡಾ ಗ್ರಾಮದಲ್ಲಿನ ತನ್ನ ಕೃಷಿ ಭೂಮಿಗೆ ಹೋಗಿದ್ದಾಗ ಸುಮಾರು ಒಂದು ಡಜನ್‌

ಹೊಸದಿಲ್ಲಿ : ನಾಳೆ ಬುಧವಾರ ಜೂನ್‌ 12ರಂದು ಗುಜರಾತ್‌ ಕರಾವಳಿಗೆ ಅಪ್ಪಳಿಸುವ ‘ವಾಯು’ ಚಂಡಮಾರುತದ ಪರಿಣಾಮವಾಗಿ ದೇಶದಲ್ಲಿ ಮುಂಗಾರು ಮಳೆ ನೆಲೆಗೊಳ್ಳುವುದು ಇನ್ನಷ್ಟು ವಿಳಂಬಗೊಳ್ಳಲಿದೆ. ಚಂಡಮಾರುತದಿಂದ ಆಗಬಹುದಾದ ನಾಶ ನಷ್ಟ, ಹಾನಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗುಜರಾತ್‌ ಸರಕಾರ ಈಗಾಗಲೇ ಕಟ್ಟೆಚ್ಚರ ಘೋಷಿಸಿದೆ ಮತ್ತು ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಸಾಮಾನ್ಯವಾಗಿ ಜೂನ್‌

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಸೋಮವಾರ ವಿಧಿವಶರಾದ ಹಿರಿಯ ಸಾಹಿತಿ, ನಟ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್(81ವರ್ಷ) ಅವರ ಅಂತ್ಯಕ್ರಿಯೆಯನ್ನು ಯಾವುದೇ ಸರ್ಕಾರಿ ಗೌರವ ಮತ್ತು ವಿಧಿ ವಿಧಾನವಿಲ್ಲದೆ ಸರಳವಾಗಿ ನೆರವೇರಿಸಲಾಯಿತು. ಇಂದು ಮಧ್ಯಾಹ್ನ ಬೈಯಪ್ಪನಹಳ್ಳಿ ಸಮೀಪದ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅತ್ಯಂತ ಸರಳವಾಗಿ ಗಿರೀಶ್ ಕಾರ್ನಾಡ್

ನವದೆಹಲಿ: ಜಮ್ಮು ಕಾಶ್ಮೀರ ಸೇರಿ ದೇಶಾದ್ಯಂತ ಸುದ್ದಿಯಾಗಿದ್ದ ಕಥುವಾ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳು ದೋಷಿಗಳೆಂದು ಪಠಾಣ್ ಕೋಟ್ ನ್ಯಾಯಾಲಯ ಇಂದು ತಿರ್ಪಿತ್ತಿದೆ. ಗ್ರಾಮದ ಮುಖ್ಯಸ್ಥ ಸಾಂಜಿ ರಾಮ್, ಅವರ ಪುತ್ರ ವಿಶಾಲ್, ಎರಡು ವಿಶೇಷ ಪೊಲೀಸ್ ಅಧಿಕಾರಿಗಳಾದ  ದೀಪಕ್ ಖಜಾರಿಯಾ ಮತ್ತು ಸುರೇಂದರ್ ವರ್ಮಾ 

ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ತರ ಯೋಜನೆಯಾದ   ಸುವರ್ಣಗೋಪುರ ಶಿಖರಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಸಮರ್ಪಣಾಗೋಪುರಮ್ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು,ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಶ್ರೀ ವಿದ್ಯಾ ಧೀಶತೀರ್ಥ ಶ್ರೀಪಾದರು ಪರ್ಯಾಯ ಮಠದ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆಯುವ ಅಪರೂಪದ ಬ್ರಹ್ಮಕಲಶೋತ್ಸವ ರವಿವಾರ ಸಂಪನ್ನಗೊಂಡಿತು. ಸುವರ್ಣ ಗೋಪುರ ಸಮ ರ್ಪಣೆ ಅಂಗವಾಗಿ ಇದು ನಡೆಯಿತು. ಬೆಳಗ್ಗೆ ಸುಮಾರು 4.30ಕ್ಕೆ ಶ್ರೀಕೃಷ್ಣನಿಗೆ ನೈರ್ಮಾಲ್ಯ ವಿಸರ್ಜನೆ ಪೂಜೆ ನಡೆದ ಬಳಿಕ 6.30ಕ್ಕೆ 108 ಕಲಶಗಳ ಪ್ರತಿಷ್ಠಾಪನೆ ನಡೆಯಿತು. ಮಧ್ವಾಚಾರ್ಯರ ತಂತ್ರಸಾರ ಸಂಗ್ರಹ ಗ್ರಂಥದಲ್ಲಿ ಉಲ್ಲೇಖವಿರುವಂತೆ ಪಂಚಾಮೃತ, ಪಂಚಗವ್ಯ, ಕಷಾಯೋದಕ,

ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ (81) ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಗಿರೀಶ್ ಕಾರ್ನಾಡ್ 1938

ಉಡುಪಿ: ಮೆರವಣಿಗೆ ವಾದ್ಯ ಘೋಷಗಳೊಂದಿಗೆಆಗಮಿಸಿದ ಮಂಡೂಕಜೋಡಿಗೆ ಕಲ್ಯಾಣ ಶನಿವಾರ ಮಧ್ಯಾಹ್ನ12.05ಕ್ಕೆ ಉಡುಪಿ ಖಾಸಗಿ ಹೊಟೇಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಸಂಪನ್ನಗೊಂಡಿದೆ. ಬೆಳಗ್ಗೆ 11ಕ್ಕೆ ಮಾರುತಿ ವೀಥಿಕಾದಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಹೊರಟ ದಿಬ್ಬಣ ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಕಲ್ಯಾಣ ಮಂಟಪಕ್ಕೆ ಸಾಗಿ ಬಂದಿತು. ಮಳೆಯ ಕೊರತೆ

ಗುರುವಾಯೂರು, ಕೇರಳ : ‘ವಾರಾಣಸಿ ನನಗೆ ಎಷ್ಟು ಪ್ರಿಯವೋ ಕೇರಳ ಕೂಡ ಅಷ್ಟೇ ಪ್ರಿಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದರು. ಶ್ರೀಕೃಷ್ಣನ ಪ್ರಸಿದ್ಧ ಗುರುವಾಯೂರು ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತುಲಾಭಾರ ಸೇವೆ ಅರ್ಪಿಸಿದ ಪ್ರಧಾನಿ ಮೋದಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು