Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಮು೦ಬರುವ ಮಾಗ ಮಾಸದಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮವು ಜರಗಲಿದೆ.....ವರ್ಷ೦ಪ್ರತಿ ನವರಾತ್ರೆಯ೦ದು ನಡೆಯಲಿರುವ ಶ್ರೀಶಾರದಾ ಪೂಜಾ ಕಾರ್ಯಕ್ರಮವು ವಿಜೃ೦ಭಣೆಯಲ್ಲಿ ಜರಗಲಿದೆ....

ಬೆಂಗಳೂರು: ಎರಡು ತಿಂಗಳ ಹಿಂದೆ ತನ್ನ ಹೂಡಿಕೆದಾರರಿಗೆ 90 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಇಂಜಾಝ್ ಬಿಲ್ಡರ್ಸ್ ಸಂಸ್ಥಾಪಕ ನಿರ್ದೇಶಕ ಮಿಸ್ಬಾ ಮುಕರ್ರಮ್ ಅನ್ನು ಬೆಂಗಳೂರು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಈತ ರಿಯಲ್ ಎಸ್ಟೇಟ್ ಮತ್ತು ವೈಮಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಇನ್ನೊಂದೆಡೆ ಹೊಸದಾಗಿ ರೂಪುಗೊಂಡ  ಎಸ್ ಐಟಿ ತಂಡ ಐಎಂಎ

ನವದೆಹಲಿ: ಸುಮಾರು 9 ದಿನಗಳ ಹಿಂದೆ ಅಸ್ಸಾಂನ ಜೋಹಾರ್ಟ್ ನಿಂದ ನಾಪತ್ತೆಯಾಗಿದ್ದ ವಾಯುಪಡೆಯ ಎಎನ್ 32 ವಿಮಾನದ ಅವಶೇಷಗಳು ಮಂಗಳವಾರ ಅರುಣಾಚಲ ಪ್ರದೇಶದ ಲಿಪೋದಿಂದ 16 ಕಿ.ಮೀ ದೂರದ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಮಾನದಲ್ಲಿದ್ದ 13 ಮಂದಿಯೂ ಸಾವನ್ನಪ್ಪಿರುವುದಾಗಿ ಐಎಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ಅವಶೇಷಗಳು ಪತ್ತೆಯಾದ ಸ್ಥಳದಲ್ಲಿ ಯಾವುದೇ ವ್ಯಕ್ತಿ ಬದುಕುಳಿದಿಲ್ಲ

ಬೆಂಗಳೂರು: ಬಹುನಿರೀಕ್ಷಿತ “ಚಂದ್ರಯಾನ-2’ಕ್ಕೆ ಇಸ್ರೋ ದಿನಾಂಕ ನಿಗದಿಪಡಿಸಿದ್ದು, ಜುಲೈ 15ರ ನಸುಕಿನ 2 ಗಂಟೆ 51 ನಿಮಿಷಕ್ಕೆ ಚಂದ್ರಯಾನ ಪರಿಕರಗಳನ್ನು ಹೊತ್ತೂಯ್ಯುವ “ಜಿಎಸ್‌ಎಲ್‌ವಿ ಮಾರ್ಕ್‌-3′ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಈ ಕುರಿತು ಇಸ್ರೋ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅಧ್ಯಕ್ಷ ಕೆ.ಶಿವನ್‌, ಭಾರತೀಯರ ಬಹುದಿನಗಳ ಕನಸಾಗಿರುವ ಚಂದ್ರಯಾನ -2ಕ್ಕೆ ಇಸ್ರೋ ಸಿದ್ಧವಾಗಿದೆ

ಕೋಲ್ಕತಾ: ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಮುಷ್ಕರ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 4 ಗಂಟೆಗಳ ಗಡುವು ನೀಡಿದ್ದಾರೆ. ವೈದ್ಯರ ಪ್ರತಿಭಟನೆಯಿಂದಾಗಿ ಚಿಕಿತ್ಸೆ ಲಭಿಸದೆ ನೂರಾರು ರೋಗಿಗಳು ಪರದಾಡುತ್ತಿರುವ ಹಿನ್ನಲೆಯಲ್ಲಿ ಕೋಲ್ಕತಾದ ಎಸ್‌ಎಸ್‌ಕೆಎಮ್‌ ಮೆಡಿಕಲ್‌ ಕಾಲೇಜಿಗೆ ಆಗಮಿಸಿ

ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಬಜೆಟ್‌ ಪೂರ್ವ ಉದ್ಯಮ ರಂಗದ ವಿಭಿನ್ನ ಪಾಲುದಾರರ ಮೂರನೇಯ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್‌ ಠಾಕೂರ್‌,  ಸೇರಿ ಹಣಕಾಸು ಸಚಿವಾಲಯದ ಪ್ರಮುಖ ಅಧಿಕಾರಿಗಳು,  ಭಾಗಿಯಾಗಿದ್ದರು. ಉದ್ಯಮ, ಸೇವೆಗಳು,ವ್ಯಾಪಾರ ಮತ್ತು  ಕೈಗಾರಿಕಾ ವಲಯಕ್ಕೆ ಸಂಬಂಧಿಸಿದ ಹಲವಾರು ಸಲಹೆಗಳನ್ನು

ಹೊಸದಿಲ್ಲಿ : ತನ್ನ ಪ್ರಚಂಡ ಶಕ್ತಿಯೊಂದಿಗೆ ಸಾಗರದಲ್ಲೇ ಮುನ್ನುಗ್ಗುತ್ತಿರುವ ವಾಯು ಚಂಡಮಾರುತ ತನ್ನ ಪಥ ಬದಲಾಯಿಸಿರುವ ಕಾರಣ ಅದಿನ್ನು ಗುಜರಾತ್‌ ಕರಾವಳಿಗೆ ಅಪ್ಪಳಿಸುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಾಗಿದ್ದರೂ ಗುಜರಾತ್‌ ಸಹಿತ ದೇಶದ ಪಶ್ಚಿಮ ಕರಾವಳಿಯ ಉದ್ದಕ್ಕೂ ಭಾರೀ ಮಳೆ, ಮತ್ತು ಗಂಟೆಗೆ 155 ರಿಂದ 165 ಕಿ.ಮೀ.

ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ನಡುವಿನ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ಗುರುವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ಸೊಂದು ಬೈಕ್‌ಗೆ ಢಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘ‌ಟನೆ ಸಂಭವಿಸಿದೆ. ಮೃತ ಬೈಕ್‌ ಸವಾರ ಸುಬ್ರಹ್ಮಣ್ಯದ ಪದವಿ ಕಾಲೇಜಿನ ವಿದ್ಯಾರ್ಥಿ ಮೋಕ್ಷಿತ್‌(21) ಎನ್ನುವವನಾಗಿದ್ದಾನೆ. ಬಲ್ಯದ ಮದ್ರಾಡಿಯ ನಿವಾಸಿ ರಾಮಚಂದ್ರ ಗೌಡ ಅವರ ಪುತ್ರ ಎಂದು ತಿಳಿದು

ಮಂಡ್ಯ: ಕಾರೊಂದು ವಿದ್ಯುತ್‌ ಕಂಬಕ್ಕೆ ಅಪ್ಪಳಿಸಿ ಅವಘಡ ಸಂಭವಿಸಿದ್ದು, ಈ ವೇಳೆ ರಕ್ಷಣೆಗೆಂದು ಧಾವಿಸಿ ಬಂದ ಮೂವರು ದಾರುಣವಾಗಿ ವಿದ್ಯುತ್‌ ಶಾಕ್‌ಗೆ ಬಲಿಯಾದ ಘಟನೆ ಮದ್ದೂರಿನ ಮಣಿಗೆರೆ ಬಳಿ ಬುಧವಾರ ರಾತ್ರಿ ನಡೆದಿದೆ. ಮೃತ ದುರ್‌ದೈವಿಗಳು ಮಣಿಗೆರೆ ಗ್ರಾಮದ ದೇವರಾಜ್‌(31) ಬಿದರಹೊಸಳ್ಳಿಯ ಪ್ರಸನ್ನ (45) ಮತ್ತು ಪ್ರದೀಪ್‌ (25) ಎನ್ನುವವರಾಗಿದ್ದಾರೆ. ಅಪಘಾತದಬಳಿಕ ಗಾಯಾಳುಗಳ

ನವದೆಹಲಿ: 17ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಡಾ.ವೀರೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯ ಪ್ರದೇಶದ ಟಿಕಾಮ್ ಗಢ್ ನಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿರುವ ವೀರೇಂದ್ರ ಕುಮಾರ್ ಅವರನ್ನು ಇದೀಗ 17ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ಈ ಹಿಂದಿನ ಎನ್ ಡಿಎ ಸರ್ಕಾರದಲ್ಲಿ

ಬೆಂಗಳೂರು: ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ಐಎಂಎ ಜುವೆಲರ್ಸ್‌ ಮಾಲಕ ಮನ್ಸೂರ್‌ ಖಾನ್‌ ನಾಪತ್ತೆಯಾಗಿರುವಪ್ರಕರಣವನ್ನು ಸರ್ಕಾರ ಸಿಸಿಬಿ ತನಿಖೆಗೆ ನೀಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್‌ ಮಾಡಿ ಸಿಸಿಬಿ ತನಿಖೆ ನೀಡಿರುವ ಬಗ್ಗೆ ತಿಳಿಸಿದ್ದಾರೆ. ಐಎಂಎ ಜುವೆಲರ್ಸ್‌ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹೂಡಿಕೆದಾರರ ಆತಂಕವನ್ನು