Log In
BREAKING NEWS >
ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರಿ೦ದ ಸರ್ವಜ್ಞ ಪೀಠಾರೋಹಣಕ್ಕೆ ಕ್ಷಣಗಣನೆ.... ಉಡುಪಿಯಲ್ಲಿ ಭಾರೀ ಪೊಲೀಸ್ ಬ೦ದೋಬಸ್ತು......ಉಡುಪಿ:ಪರ್ಯಾಯ ಮಹೋತ್ಸವಕ್ಕೆ ನಗರದ ಶಾಲಾ ಕಾಲೇಜಿಗೆ ಶನಿವಾರದ೦ದು ರಜೆ ......

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು ಇದರ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ರಾಹುಲ್ ಗಾಂಧಿ ನಾಳೆ ರಾಜಿನಾಮೆ ನೀಡುವ ಸಾಧ್ಯತೆ ಇದೆ. ನಾಳೆ ದೆಹಲಿಯಲ್ಲಿ 11 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಡೆಯಲಿದ್ದು ಈ ಸಿಡಬ್ಲ್ಯೂಸಿ ಸಭೆಯಲ್ಲಿ ರಾಹುಲ್ ಗಾಂಧಿ ರಾಜಿನಾಮೆ

ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ  ಪ್ರಚಂಡ ಜಯಭೇರಿ ಬಾರಿಸಿರುವುದಕ್ಕೆ ಕಾಂಗ್ರೆಸ್ ಅಸಮಾಧಾನಿತ ಶಾಸಕ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೋಲಿನಿಂದ ಪ್ರತಿಪಕ್ಷಗಳು ಪಾಠ ಕಲಿಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಪ್ರಚಂಡ ಗೆಲುವು ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ  ಅಭಿನಂದನೆ ಸಲ್ಲಿಸುತ್ತೇನೆ. ದೇಶದ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಹಾಗೂ ತಮ್ಮ ರಾಜಕೀಯ ಗುರು ಎಲ್‍ ಕೆ ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಿಜೆಪಿಯ ಅಭೂತಪೂರ್ವ ಗೆಲುವು ಸಾಧಿಸಿರುವುದರ ಹಿಂದೆ ಅಡ್ವಾಣಿಯವರ ಕಠಿಣ

ಉಡುಪಿ: ನಿರಂತರ ಸಾಧನೆಯನ್ನೇಧ್ಯೇಯವನ್ನಾಗಿಸಿಕೊಂಡುಯಶಸ್ವಿಯಾಗಿ ಮುನ್ನೆಡೆಯುತ್ತಿರುವ ಶೇಕಡಾ100ರ ಫಲಿತಾಂಶದೊಂದಿಗೆ ಸಾಂಸ್ಕೃತಿಕ-ಕ್ರೀಡಾಕ್ಷೇತ್ರಗಳಲ್ಲೂರಾಜ್ಯ-ರಾಷ್ಟ್ರ ಮಟ್ಟಗಳಲ್ಲಿಗುರುತಿಸಲ್ಪಡುತ್ತಿರುವಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಉಡುಪಿಯ ವಿದ್ಯೋದಯಟ್ರಸ್ಟ್‍ನಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿಯ ಪ್ರಾರಂಭೋತ್ಸವವು 23 ಮೇ 2019 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಹುಬ್ಬಳ್ಳಿಯ ಮೈ ಲೈ¥sóï ಸಂಸ್ಥೆಯಸಿ.ಇ.ಒ ಪ್ರವೀಣ್‍ಗುಡಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮೇಲಿನಂತೆ ಹಿತವಚನ ನುಡಿಯುತ್ತಾ

ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯ ಶರಣ್ ಅವರು  ಮ್ಯೂಸಿಯಂವೊಂದರಲ್ಲಿ ಬಿಕಿನಿ ತೊಟ್ಟು ಡ್ಯಾನ್ಸ್ ಮಾಡಿ ನೆಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕಳೆದ ವರ್ಷ ಮಾರ್ಚ್ ನಲ್ಲಿ ರಷ್ಯನ್ ಬಾಯ್ ಫ್ರೆಂಡ್ ಆ್ಯಂಡ್ರಿ ಕೊಸ್ಟಿವ್ ರನ್ನು ವಿವಾಹವಾಗಿದ್ದರು. ಆ್ಯಂಡ್ರಿ ಜೊತೆ ಮೋಜು ಮಸ್ತಿಯಲ್ಲಿ ತೊಡಗಿರುವ ಶ್ರೇಯ ಶರಣ್ ಲಂಡನ್ ಮ್ಯೂಸಿಯಂವೊಂದಕ್ಕೆ ಭೇಟಿ

ಕುಂದಗೋಳ: ತೀವ್ರ ಕುತೂಹಲ ಕೆರಳಿಸಿದ್ದ ಕುಂದಗೋಳ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಮಾಜಿ ಸಚಿವ ಸಿ.ಎಸ್ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಗೆಲುವು ಸಾಧಿಸಿದ್ದಾರೆ. ಒಟ್ಟು 17 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು, ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಕುಸುಮಾ ಶಿವಳ್ಳಿ ಕೊನೆಯ ಎರಡು ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದ್ದರು,

ತುಮಕೂರು: ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರೋಧದ ನಡುವೆಯೂ ತುಮಕೂರಿನಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್ ಡಿ ದೇವೇಗೌಡ ಬಿಜೆಪಿ ಅಭ್ಯರ್ಥಿ ಜಿಎಸ್ ಬಸವರಾಜು ವಿರುದ್ಧ ಪರಾಭವಗೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಬಸವರಾಜ್ ವಿರುದ್ಧ ದೇವೇಗೌಡರು 27 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಮತ ಎಣಿಕೆ ಪ್ರಾರಂಭದಲ್ಲಿ ದೇವೇಗೌಡರು ಮುನ್ನಡೆ

ಅಮರಾವತಿ:ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಹೀನಾಯ ಸೋಲುಂಟಾಗಿದ್ದು, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ. 175 ಸಂಖ್ಯಾಬಲವಿರುವ ಆಂಧ್ರ ವಿಧಾನಸಭೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ 141 ಅಭ್ಯರ್ಥಿಗಳು ಜಯಗಳಿಸಿದ್ದು, ವೈಎಸ್ ಆರ್ ಕಾಂಗ್ರೆಸ್ ಸ್ಪಷ್ಟಬಹುಮತ ಗಳಿಸಿದ್ದು,

ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮೋಡಿ ಮರುಕಳಿಸಿದ್ದು, ಮಹಾಘಟಬಂಧನ್ ಗೆ ಮರ್ಮಾಘಾತ ಉಂಟಾಗಿದೆ. ಮಧ್ಯಾಹ್ನ 12:30 ರ ವೇಳೆಗೆ ಮತ ಎಣಿಕೆ ಕಾರ್ಯ ನಿರ್ಣಾಯಕ ಹಂತ ತಲುಪಿದ್ದು, ಚುನಾವಣಾ ಫಲಿತಾಂಶದ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದೆ. ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಎನ್ ಡಿಎ ಮಧ್ಯಾಹ್ನ 12:30

ಭೋಪಾಲ್: ಚುನಾವಣಾ ಫಲಿತಾಶದ ದಿನವಾದ ಗುರುವಾರ ಮತ ಎಣಿಕೆ ಕೇಂದ್ರದಲ್ಲಿದ್ಸ ಕಾಂಗ್ರೆಸ್ ಮುಖಂಡರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶ ಖಾಂಗ್ರೆಸ್ ಸೆಹೂರ್ ಜಿಲ್ಲಾ ಮುಖ್ಯಸ್ಥ ರತನ್ ಸಿಂಗ್ ಮತ ಎಣಿಕೆ ಕೇಂದ್ರದಲ್ಲಿದ್ದಾಗಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.   ಮತ ಎಣಿಕೆ ಕೇಂದ್ರದಲ್ಲಿ ಮಾಹಿತಿ ಕಲೆ ಹಾಕಲಿಕ್ಕಾಗಿ ತೆರಳಿದ್ದಾಗ ಸಿಂಗ್ ಅವರಿಗೆ ಎದೆನೋವು