Log In
BREAKING NEWS >
ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರಿ೦ದ ಸರ್ವಜ್ಞ ಪೀಠಾರೋಹಣಕ್ಕೆ ಕ್ಷಣಗಣನೆ.... ಉಡುಪಿಯಲ್ಲಿ ಭಾರೀ ಪೊಲೀಸ್ ಬ೦ದೋಬಸ್ತು......ಉಡುಪಿ:ಪರ್ಯಾಯ ಮಹೋತ್ಸವಕ್ಕೆ ನಗರದ ಶಾಲಾ ಕಾಲೇಜಿಗೆ ಶನಿವಾರದ೦ದು ರಜೆ ......

ಬೆಂಗಳೂರು: 2019 ನೇ ಸಾಲಿನ ಸಿಇಟಿ ಫ‌ಲಿತಾಂಶ ಶನಿವಾರ ಪ್ರಕಟವಾಗಿದ್ದು , ಇಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಜಫಿನ್‌ ಬಿಜು ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಆರ್‌ ಚಿನ್ಮಯ್‌ 2 ನೇ ರ್‍ಯಾಂಕ್‌ ಪಡೆದಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರು ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಫ‌ಲಿತಾಂಶವನ್ನು

ಬೆಂಗಳೂರು: ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಸೋಲಿನ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಪ್ರಜ್ವಲ್ ರೇವಣ್ಣ ಅವರ ನಿರ್ಧಾರಕ್ಕೆ ಸ್ವತಃ ದೇವೇಗೌಡರೇ ತಡೆಒಡ್ಡಿದ್ದಾರೆ. ಜನಾದೇಶಕ್ಕೆ ತಲೆಬಾಗಬೇಕು. ಆತುರಕ್ಕೆ ಬುದ್ಧಿ ಕೊಟ್ಟರೆ ಕೆಡುಕಾಗುತ್ತದೆ ಎಂದು ಮಾಜಿ ಪ್ರಧಾನಿ ತಮ್ಮ ಮೊಮ್ಮಗ ಪ್ರಜ್ವಲ್‍ ಗೆ ಬುದ್ಧಿಮಾತು ಹೇಳಿದ್ದಾರೆ.   ಹಾಸನ

ಗುವಾಹಟಿ: ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಮತ್ತು  ಎಲ್. ಸರೀತಾ ದೇವಿ ಇಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವ ಗಳಿಸಿಕೊಂಡಿದ್ದಾರೆ. ಇನ್ನೊಂದೆಡೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅಮಿತ್ ಪಂಗಲ್ ಸಹ ಪುರುಷರ 52ಕೆಜಿ ವಿಭಾಗದಲ್ಲಿ ಸಚಿನ್

ಸೂರತ್‌ : ಇಲ್ಲಿ ಶುಕ್ರವಾರ 20 ವಿದ್ಯಾರ್ಥಿಗಳನ್ನು ಬಲಿ ಪಡೆದ ಅಗ್ನಿ ಅನಾಹುತಕ್ಕೆ ಸಂಬಂಧಿಸಿ ಕೋಚಿಂಗ್‌ ಸೆಂಟರ್‌ ಮಾಲೀಕ ಮತ್ತು ಬಿಲ್ಡರ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಕ್ಷನ್‌ 304 ಮತ್ತು ಸೆಕ್ಷನ್‌ 114 ರ ಅಡಿಯಲ್ಲಿ ಸರ್ಥಾನಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೋಚಿಂಗ್‌ ಸೆಂಟರ್‌ ಮಾಲೀಕ ಭಾರ್ಗವ್‌ ಭೂತಾನಿ, ಬಿಲ್ಡರ್ಸ್‌ಗಳಾದ

ಸೂರತ್‌: ಗುಜರಾತ್‌ನ ಸೂರತ್‌ನಲ್ಲಿ ಶುಕ್ರವಾರ ತಕ್ಷಶಿಲಾ ಆರ್ಕೇಡ್‌ನ‌ ಮೂರು ಮಹಡಿ ಕಟ್ಟಡದಲ್ಲಿನ ಅಗ್ನಿ ಅನಾಹುತಕ್ಕೆ 20 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಕಟ್ಟಡದಲ್ಲಿ ತರಬೇತಿ ಕೇಂದ್ರವಿದ್ದು, ಇಲ್ಲಿನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳ ಜೀವ ಉಳಿಸಿಕೊಳ್ಳಲು ಬೇರೆ ಯಾವುದೇ ದಾರಿ ಕಾಣದೇ ಇದ್ದಾಗ ಕಟ್ಟಡದಿಂದಲೇ ಹಾರಿದ್ದಾರೆ. ಈ ರೀತಿ ಹಾರಿದ

ಜೂನ್ ತಿ೦ಗಳ ಒ೦ದರಿ೦ದ ಒ೦ಭತ್ತರವರೆಗೆ ನಡೆಯಲಿರುವ ಸುವರ್ಣಗೋಪುರ ಸಮರ್ಪಣೆ-ಶ್ರೀಕೃಷ್ಣ ಮಠದ ಬ್ರಹ್ಮಕಲಶೋತ್ಸವಕ್ಕೆ ರಥಬೀದಿಯಲ್ಲಿ ಭರದ ಸಿದ್ದತೆಯನ್ನು ನಡೆಸಲಾಗುತ್ತಿದೆ. ಸೋದೆ ಮಠದಿ೦ದ ಹಿಡಿದು ರಥಬೀದಿಯ ಪೇಜಾವರ ಮಠದ ಮು೦ಭಾಗದ ವರೆಗೆ ತಗಡಿನ ಚಪ್ಪರವನ್ನು ಹಾಕುವ ಕೆಲಸಕ್ಕೆ ಶುಕ್ರವಾರದಿ೦ದ ಭರದ ಸಿದ್ದತೆಯನ್ನು ನಡೆಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಬರುವ ಭಕ್ತಾಧಿಗಳಿಗೆ ಬಿಸಿಲಿನ ತೊ೦ದರೆಯಿ೦ದ ತಪ್ಪಿಸುವ

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮುಂದುವರೆಯುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ.ಇದಕ್ಕೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಪಕ್ಷದ

ಇಸ್ಲಾಮಾಬಾದ್‌ : ಪಾಕಿಸ್ಥಾನದ ವಾಯವ್ಯ ಬಲೂಚಿಸ್ಥಾನ ಪ್ರಾಂತ್ಯದಲ್ಲಿಂದು ಶುಕ್ರವಾರದ ಪ್ರಾರ್ಥನೆಯ ವೇಳೆ ಮಸೀದಿಯೊಂದನ್ನು ಗುರಿ ಇರಿಸಿ ನಡೆಸಲಾದ ಸ್ಫೋಟದಲ್ಲಿ ಕನಿಷ್ಠ ಒಬ್ಬ ಮೃತಪಟ್ಟು ಇತರ 12ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಪ್ರಾಂತೀಯ ರಾಜಧಾನಿ ಕ್ವೆಟ್ಟಾ ದ ಪಷ್‌ತೂನಾಬಾದ್‌ ಪ್ರದೇಶದಲ್ಲಿನ ರೆಹಮಾನಿಯಾ ಮಸೀದಿಯನ್ನು ಗುರಿ ಇರಿಸಿ ನಡೆಸಲಾದ ಬ್ಲಾಸ್ಟ್‌ ನ ಗಾಯಾಳುಗಳಿಗೆ ವಿವಿಧ

ನವದೆಹಲಿ: ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳು ಇಂದು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ನೂತನ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಸೂರ್ಯಕಾಂತ್, ಅನಿರುದ್ಧ ಬೋಸ್, ಎ ಎಸ್‍ ಬೋಪಣ್ಣ ಅವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಪ್ರಮಾಣ ವಚನ ಬೋಧಿಸಿದರು. ಸುಪ್ರೀಂಕೋರ್ಟ್‌ನ ಇತರ ಹಿರಿಯ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು. ಇವರ ಸೇರ್ಪಡೆಯೊಂದಿಗೆ

ಮಂಡ್ಯ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ 4 ಮಂದಿ ದುರ್ಮರಣ ಹೊಂದಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಮದ್ದೂರಿನಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.