Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಬೆಂಗಳೂರು : ತೆರಿಗೆ ವಂಚನೆ ಮತ್ತು ಅಪಾರ ಪ್ರಮಾಣದ ಕಾಳಧನ ಬಚ್ಚಿಡಲಾಗಿರುವ ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಹನ್ನೆರಡಕ್ಕೂ ಹೆಚ್ಚು ಸ್ಥಳಗಳಲ್ಲಿ ತಾನು ದಾಳಿ ನಡೆಸುತ್ತಿರುವುದಾಗಿ ಆದಾಯ ತೆರಿಗೆ ಇಲಾಖೆ ಇಂದು ಮಂಗಳವಾರ ತಿಳಿಸಿದೆ. ಬೆಂಗಳೂರು, ಹಾಸನ ಮತ್ತು ಮಂಡ್ಯದಲ್ಲಿ ಐಟಿ ದಾಳಿ ನಡೆಯುತ್ತಿದ್ದು ಇದು ತೆರಿಗೆ ವಂಚಕರು ಮತ್ತು ಕಾಳಧನ ಸೃಷ್ಟಿಕರ್ತರ

ನಾಶಿಕ್‌ : ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಕಲ್ವಾನ್‌ ಎಂಬಲ್ಲಿ ಬಹುವಿಧ ಬಳಕೆಯ ವಾಹನವೊಂದು ಢಿಕ್ಕಿ ಹೊಡೆದ ಕಾರಣ ಮೂವರು ಮೃತಪಟ್ಟು ಇತರ ನಾಲ್ವರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಒಬ್ಬನಾಗಿರುವ 13ರ ಹರೆಯದ ಬಾಲಕನನ್ನು ಶುಭಂ ಬಾಪು ದೇವರೆ ಎಂದು ಗುರುತಿಸಲಾಗಿದೆ. ನಂದೂರಿಗಢ ಉತ್ಸವದಲ್ಲಿ ಪಾಲ್ಗೊಳ್ಳಲು ನಾಲ್ವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ

ಉಡುಪಿ: ಉಡುಪಿಯ ಶಾರದಾ ಕಲ್ಯಾಣ ಮ೦ಟಪದ ಸಮೀಪದಲ್ಲಿ ಹಲವಾರು ವರುಷಗಳಿ೦ದ ಅಕ್ಕಿ ಉದ್ಯಮವನ್ನು ಮಾಡಿಕೊ೦ಡು ಬ೦ದಿದ್ದ ಪ್ರಸಿದ್ಧ ಉದ್ಯಮಿ ಗುರುದತ್ ಕಾಮತ್ ರವರು ಸೋಮವಾದರ೦ದು ಮಧ್ಯಾಹ್ನ ಹೃದಯಘಾತದಿ೦ದ ನಿಧನ ಹೊ೦ದಿದ್ದಾರೆ. ಮೃತರು ಪತ್ನಿ,ಪುತ್ರಿ ಮತ್ತು ಪುತ್ರರನ್ನು ಹಾಗೂ ಅಪಾರ ಬ೦ಧುಮಿತ್ರರನ್ನು ಅಗಲಿರುತ್ತಾರೆ.

ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಸೌರಮಾನ ಯುಗಾದಿಯ ಪ್ರಯುಕ್ತ ಪರ್ಯಾಯ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಹಿರಿಯ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ

ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಸೌರಮಾನ ಯುಗಾದಿಯ ಪ್ರಯುಕ್ತ ಸುವರ್ಣ ರಥೋತ್ಸವ ನಡೆಯಿತು. ಪರ್ಯಾಯ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ

ಬೆಂಗಳೂರು: 2018-19ನೇ ಸಾಲಿನ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ,ಶಿಖಾ ಮತ್ತು ಎಸ್,ಆರ್ ಉಮಾಶಂಕರ್ ಸುದ್ದಿಗೋಷ್ಠಿ ನಡೆಸಿ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ಶೇ. 92.20 ಅಂಕಗಳನ್ನು ಗಳಿಸಿರುವ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶೇ.90.91 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ದ್ವಿತೀಯ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಾನುವಾರದ೦ದು ಶ್ರೀರಾಮನವಮಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸ೦ದರ್ಭದಲ್ಲಿ ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ದೇವಸ್ಥಾನದ ಸಚ್ಚಿದಾನ೦ದ ಮ೦ಟಪದಲ್ಲಿ ಶ್ರೀರಾಮದೇವರ ವಿಗ್ರಹವನ್ನು ಹೂವಿನಿ೦ದ ಅಲ೦ಕರಿಸಲಾದ ತೊಟ್ಟಿಲಲ್ಲಿ ಇರಿಸಿ ನ೦ತರ ಭಜನಾ ಕಾರ್ಯಕ್ರಮದೊ೦ದಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ದೇವಳದ ತೀರ್ಥಮ೦ಟಪವನ್ನು ಹೂವಿನಿ೦ದ ಶೃ೦ಗರಿಸಲಾಯಿತು. ಈ ಸ೦ದರ್ಭದಲ್ಲಿ ದೇವಳದ ಆಡಳಿತ ಮ೦ಡಳಿಯ

ಉಡುಪಿ: ಸಾಮಾನ್ಯವಾಗಿ ಸರಕಾರದ ವತಿಯಿಂದ ಆಚರಿಸುವ ಎಲ್ಲಾ ಜಯಂತಿಗಳನ್ನು ದೀಪ ಹಚ್ಚುವುದರ ಮೂಲಕ, ಭಾವಚಿತ್ರ/ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸುವುದು ವಾಡಿಕೆ. ಆದರೆ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ಜಾತಿ ಮತ್ತು ಪಂಗಡದ ಸಂಘಟನೆಗಳು ಉಡುಪಿ ಇವರ ಸಹಯೋಗದಲ್ಲಿ , ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ,

ನವದೆಹಲಿ: ಸಾಮಾಜಿಕ ವಲಯ ಯೋಜನೆಗಳಲ್ಲಿ ಮೋದಿ ಸರ್ಕಾರದ ಸಾಕಷ್ಟು ಯೋಜನೆಗಳು ಯಶಸ್ಸು ಸಾಧಿಸಿದೆ ಎಂದು ಮಾಜಿ ನೀತಿ ಆಯೋಗ ಉಪಾಧ್ಯಕ್ಷ ಅರವಿಂದ್ ಪನಾಗರಿಯಾ ಹೇಳಿದ್ದಾರೆ. ಸುದ್ದಿಸಂಸ್ಛೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ನೀತಿ ಆಯೋಗ ಉಪಾಧ್ಯಕ್ಷ ಅರವಿಂದ್ ಪನಾಗರಿಯಾ ಅವರು, ಆಯುಷ್ಮಾನ್ ಭಾರತ್, ಪಿಎಂಕಿಸಾನ್ ಯೋಜನೆ, ಗ್ರಾಮೀಣ ವಿದ್ಯುತ್ ಚ್ಛಕ್ತಿಯಂತಹ ಸಾಮಾಜಿಕ ವಲಯದ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ದುಷ್ಕರ್ಮಿಯೋರ್ವ ನಡೆಸಿರುವ ಶೂಟಿಂಗ್ ನಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಗಂಭೀರವಾಗಿದ್ದಾರೆ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾದ ಎರಡನೇ ದೊಡ್ಡ ನಗರವಾದ ಮೆಲ್ಬೋರ್ನ್ ನಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಅಲ್ಲಿನ ನೈಟ್ ಕ್ಲಬ್ ವೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ