Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಲಾಸ್‌ ಏಂಜಲೀಸ್‌: ವಿಶ್ವದ ಅತೀ ದೊಡ್ಡ ವಿಮಾನ ಎಂದೇ ಪರಿಗಣಿಸಲ್ಪಟ್ಟಿರುವ ‘ರೋಕ್‌’ ಇಂದು ಕ್ಯಾಲಿಫೋರ್ನಿಯಾದ ಮೊಝಾವೇ ಮರುಭೂಮಿಯಲ್ಲಿ ತನ್ನ ಪರಿಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು. ಮೈಕ್ರೋಸಾಫ್ಟ್ ನ ಮಾಜೀ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಪೌಲ್‌ ಅಲೇನ್‌ ಅವರ ಸ್ಟ್ರಾಟೋ ಲಾಂಚ್‌ ಸಿಸ್ಟಮ್ಸ್‌ ಕಾರ್ಪ್‌ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಈ ದೈತ್ಯ ವಿಮಾನವು ಮುಂಬರುವ ದಿನಗಳಲ್ಲಿ

ಮಂಗಳೂರು: "ಕಾಂಗ್ರೆಸ್‌ನದ್ದು ಕುಟುಂಬವನ್ನು ಬೆಳೆಸುವ ವಂಶೋದಯವಾದರೆ ಬಿಜೆಪಿಯದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಾಭ ಮಾಡಿಕೊಡುವ ಅಂತ್ಯೋದಯವಾಗಿದೆ. ವಂಶೋದಯ ಭ್ರಷ್ಟಾಚಾರಕ್ಕೆ ಕಾರಣವಾದರೆ, ಅಂತ್ಯೋದಯ ಬಡತನ ಕಡಿಮೆ ಮಾಡಿ ದೇಶದ ಜನರಲ್ಲಿ ವಿಶ್ವಾಸ ವೃದ್ಧಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಬಿಜೆಪಿ

ಹೊಸದಿಲ್ಲಿ : ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಇಂದು ಶನಿವಾರ ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದು ಈ ಕ್ಷೇತ್ರವನ್ನು ಅವರು

ಶ್ರೀನಗರ : ಅನೇಕ ನಾಗರಿಕರು ಮತ್ತು ಪೊಲೀಸ್‌ ಸಿಬಂದಿಗಳ ಕೊಲೆಯಲ್ಲಿ ಶಾಮೀಲಾಗಿದ್ದ ಇಬ್ಬರು ಜೈಶ್‌ ಎ ಮೊಹಮ್ಮದ್‌ ಉಗ್ರರನ್ನು ಭದ್ರತಾ ಪಡೆಗಳು ಇಂದು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಎನ್‌ಕೌಂಟರ್‌ ನಲ್ಲಿ ಹೊಡೆದುರುಳಿಸಿದವು. ಹತ ಉಗ್ರರನ್ನು ಅಬೀದ್‌ ವಗಾಯ್‌ (ಶೋಪಿಯಾನ್‌ನ ರಾವಲಪುರ ನಿವಾಸಿ) ಮತ್ತು ಶಹಜಹಾನ್‌ ಮೀರ್‌ (ಅಮೇಶ್‌ಪುರ ಶೋಪಿಯಾನ್‌ ನಿವಾಸಿ)

ಜಮ್ಮು : ಪಾಕಿಸ್ಥಾನದ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್‌ ದಾಳಿ ನಡೆಸಿದ ಬಳಿಕದಲ್ಲಿ ಪಾಕಿಸ್ಥಾನ ಜಮ್ಮು ಕಾಶ್ಮೀರದ ಎಲ್‌ಓಸಿಯಲ್ಲಿ ಈ ತನಕ  513 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಭಾರತೀಯ ಪಡೆಗಳು ನೀಡಿರುವ ಜಬರ್‌ದಸ್ತ್ ಉತ್ತರದಲ್ಲಿ ಪಾಕ್‌ ಸೇನೆಯಲ್ಲಿ ಭಾರತಕ್ಕಿಂತ ಆರು

ಉಡುಪಿ: ಉಡುಪಿಯ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಕಳೆದೊ೦ದು ವಾರಗಳಿ೦ದ ಶ್ರೀರಾಮನವಮಿಯ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಸಾ೦ಸ್ಕೃತಿಕ ಕಾರ್ಯಕ್ರಮಗಳೊ೦ದಿಗೆ ಆರ೦ಭಗೊ೦ಡ ಶ್ರೀರಾಮನವಮಿ ಉತ್ಸವವು ಶನಿವಾರದ೦ದು ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಭಕ್ತಜನರ ಸಹಕಾರದೊ೦ದಿಗೆ ಶ್ರೀರಾಮನ ವಿಗ್ರಹವನ್ನು ರಥದಲ್ಲಿ ಇರಿಸಿ ರಥಬೀದಿಯಲ್ಲಿ ಉತ್ಸವವನ್ನು ನಡೆಸಲಾಯಿತು. ವಿಶೇಷ ಸುಡುಮದ್ದನ್ನು ಸುಡುವ

ಉಡುಪಿ: ಮಾಹೆಯ ಏರೋಮಾಡೆಲಿಂಗ್‌ ತಂಡ ಏರೋ ಎಂಐಟಿಯು ಮಾರ್ಚ್‌ನಲ್ಲಿ ಯುಎಸ್‌ಎ ಯ ಟೆಕ್ಸಾಸ್‌ನಲ್ಲಿ ನಡೆದ ಎಸ್‌ಎಇ ಏರೋ ಡಿಸೈನ್‌ ಈಸ್ಟ್‌ -2019 ಸ್ಪರ್ಧೆಯಲ್ಲಿ 5ನೇ ಸ್ಥಾನಗಳಿಸಿದೆ. ಇಷ್ಟೇ ಅಲ್ಲದೆ ಉತ್ತಮ ಪ್ರದರ್ಶನ ನೀಡಿದ ಭಾರತೀಯ ತಂಡ ಎಂಬ ಕೀರ್ತಿ ಗಳಿಸಿದೆ. ಭಾರತದ ಇತರ ತಂಡಗಳಾದ ವೆಲ್ಲೂರು ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನೋಲಜಿ,

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ಪೂಜೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನಿರಾಕರಿಸಿದೆ. ಈ ಸಂಬಂಧ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯ, ಈ ದೇಶ ಶಾಂತಿಯಿಂದ ಇರುವುದನ್ನು ನೀವು ಬಯಸುವುದಿಲ್ಲ. ಯಾವಾಗಲೂ ಯಾರಾದರೊಬ್ಬರು ಈ ವಿಷಯದಲ್ಲಿ ಮೂಗು ತೂರಿಸುತ್ತಾರೆ ಎಂದು ಅರ್ಜಿದಾರರಿಗೆ ಛೀಮಾರಿ ಹಾಕಿದೆ. ಅಯೋಧ್ಯೆ ಜನರು ಶಾಂತಿಯಿಂದ

ಕರಾಚಿ : ಇಂದು ಶುಕ್ರವಾರ ಬೆಳಗ್ಗೆ ಪಾಕಿಸ್ಥಾನದ ಕ್ವೆಟ್ಟಾ ನಗರದಲ್ಲಿನ ತರಕಾರಿ ಮಾರ್ಕೆಟ್‌ನಲ್ಲಿ ಸಂಭವಿಸಿದ ಬಾಂಬ್‌ ಬ್ಲಾಸ್ಟ್‌ ಗೆ 14 ಮಂದಿ ಬಲಿಯಾಗಿದ್ದು ಅನೇಕರು ಗಾಯಗೊಂಡಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಮೃತರಲ್ಲಿ ಕನಿಷ್ಠ ಏಳು ಮಂದಿ ಕ್ವೆಟ್ಟಾದ ಹಜಾರಿಗಂಜ್‌ ಪ್ರದೇಶದ ನಿವಾಸಿಗಳಾಗಿದ್ದಾರೆ. ಇದು ಬಲೂಚಿಸ್ಥಾನದ ಪ್ರಾಂತೀಯ ರಾಜಧಾನಿಯಾಗಿದ್ದು ಇಲ್ಲಿ ಹಜಾರಿ ಸಮುದಾಯದವರ

ಆಂಧ್ರಪ್ರದೇಶ: ಇಲ್ಲಿನ ಅನಂತಪುರ ಜಿಲ್ಲೆಯ ಯರ್ರಗುಂಟಪಲ್ಲಿ ಎಂಬಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವ್ಯಾನ್‌ ಗೆ ಲಾರಿಯೊಂದು ಢಿಕ್ಕಿಯಾಗಿರುವ ಘಟನೆ ವರದಿಯಾಗಿದೆ. ಈ ಭೀಕರ ಅಪಘಾತದಲ್ಲಿ ವ್ಯಾನ್‌ ನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರು ಮೃತಪಟ್ಟಿದ್ದಾರೆ ಮಾತ್ರವಲ್ಲದೇ ಅದರಲ್ಲಿದ್ದ ಒಂಭತ್ತು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿದೆ ಎಂದು