Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಶ್ರೀನಗರ : ಇಲ್ಲಿನ ಸೆಂಟ್ರಲ್‌ ಜೈಲಿನಲ್ಲಿ ಕೈದಿಗಳು ಮತ್ತು ಬಂಧೀಖಾನೆ ಸಿಬಂದಿಗಳ ನಡುವೆ ಮಾರಾಮಾರಿ ನಡೆದ ಘಟನೆ ವರದಿಯಾಗಿದೆ. ನಿನ್ನೆ ಗುರುವಾರ ರಾತ್ರಿ ಕೆಲವೊಂದು ಬ್ಯಾರಾಕ್‌ ಗಳ ನವೀಕರಣಕ್ಕಾಗಿ ಅಲ್ಲಿ ಇರಿಸಲಾಗಿದ್ದ ಕೈದಿಗಳನ್ನು ಬೇರೆ ಬ್ಯಾರಕ್‌ಗಳಿಗೆ ಶಿಫ್ಟ್ ಮಾಡಲು ಮುಂದಾದ ಜೈಲು ಸಿಬಂದಿಗಳ ವಿರುದ್ಧ ಕೈದಿಗಳು ಆಕ್ರೋಶ ವ್ಯಕ್ತಪಡಿಸಿ ಕಾಳಗಕ್ಕೆ ಇಳಿದರು. ಕಾಶ್ಮೀರ

ಬೆಂಗಳೂರು: ಧಾರವಾಡ ಕಟ್ಟಡ ಕುಸಿತ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ಬೆಂಗಳೂರಿನಲ್ಲೂ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ಯಶವಂತಪುರದ ಆರ್ ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿಗೆ ಕಟ್ಟಡದ ಸೆಟ್ರಿಂಗ್ ಕುಸಿದ ಪರಿಣಾಮ ಅಲ್ಲಿದ್ದ ಹಲವು ಕಟ್ಟಡ

ನವದೆಹಲಿ: ಇತ್ತೀಚೆಗಷ್ಟೇ ನೌಕಾದಳ 48 ವರ್ಷಗಳ ಬಳಿಕ  ಅಮೆರಿಕಾದ ಅತ್ಯಾಧುನಿಕ MH-60R ಹೆಲಿಕಾಪ್ಟರ್ ಗಳ ಸೇರ್ಪಡೆಗೆ ಅಂಕಿತ ಹಾಕಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನೌಕಾದಳ, ಸಮುದ್ರದದಲ್ಲಿನ 500 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಬ್ ಮೆರಿನ್ ಗಳ ನಿರ್ಮಾಣಕ್ಕೆ ಮುಂದಾಗಿದೆ. ಹೌದು.. ನೌಕಾಸೇನೆಯ ಮತ್ತೊಂದು ಬಹುದೊಡ್ಡ ಪ್ರಾಜೆಕ್ಟ್​

ಬೆಂಗಳೂರು: ರಾಜಕಾರಣಿಗಳು, ನಟರು ಹಾಗೂ ಗುತ್ತಿಗೆದಾರರಿಗೆ ಶಾಕ್ ನೀಡುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗೇ ಇಂದು ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದು ದಾಳಿ ವೇಳೆ ಬರೋಬ್ಬರಿ 1.35 ಕೋಟಿ ರುಪಾಯಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದ ಐಟಿ ಅಧಿಕಾರಿ ನಾಗೇಶ್ ಅವರ ಮನೆ ಮೇಲೆ ಇಂದು

ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಕಾರಣದಿಂದ 28 ಸ್ಥಾನಗಳ ಪೈಕಿ 17 ಲೋಕಸಭಾ ಸ್ಥಾನಗಳಲ್ಲಿ ಜಯಗಳಿಸಿದ್ದ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಭಾರೀ ಹೊಡೆತ ನೀಡಲಿದೆಯೇ? ಹೌದು ಎನ್ನುತ್ತಿದೆ ಪೋಲ್‌ ಐ ನಡೆಸಿರುವ ಚುನಾವಣಾ ಸಮೀಕ್ಷೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ

ಬೆಂಗಳೂರು: ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಉಪಗ್ರಹವನ್ನು ಹೊಡೆದುರುಳಿಸಲು ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆ ನಡೆಸಿದ್ದರ ಬಗ್ಗೆ ಚರ್ಚೆಗಳು ಇನ್ನೂ ನಿಂತಿಲ್ಲ. ಕ್ಷಿಪಣಿ ಪರೀಕ್ಷೆಯಿಂದ ಅಂತರಿಕ್ಷದಲ್ಲಿ ತ್ಯಾಜ್ಯಗಳು ಸಂಗ್ರಹವಾಗಿದ್ದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್ಎಸ್)ಕ್ಕೆ ಅಪಾಯವಿದೆ ಎಂದು ನಾಸಾ ಸಂಸ್ಥೆಯ ಜಿಮ್ ಬ್ರೈಡ್ ಸ್ಟೈನ್ ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಭಾರತದ ವಿಜ್ಞಾನಿಗಳು ಅದನ್ನು

ಲಂಡನ್: ತನ್ನ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ 22ರ ಮಹಿಳೆಯೊಬ್ಬರು ತಮ್ಮ ಕಿರಿಯ ಸಹೋದರ-ಸಹೋದರಿಯನ್ನು ದತ್ತು ಪಡೆಯುವ ಮೂಲಕ ರಾತ್ರೋರಾತ್ರಿ ಏಳು ಮಕ್ಕಳ ತಾಯಿಯಾಗಿದ್ದಾರೆ. ಶ್ಯಾನ್ನೋನ್ ಎಲ್ಲಿಸ್ 2 ಮಕ್ಕಳ ತಾಯಿ. ಇವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಎಲ್ಲಿಸ್ ಅವರ 39 ವರ್ಷದ ತಾಯಿ ಶೆಲ್ಲಿ ಮೃತಪಟ್ಟಿದ್ದಾರೆ. ನಂತರ ಎಲ್ಲಿಸ್ ತಮ್ಮ ಐದು

ಬೆಳಗಾವಿ: ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರದಲ್ಲಿ ಹೊಲದಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಒಂದೇ ಕುಟುಂಬ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಬುಧವಾರ ಸಂಜೆ ಗಾಳಿ ಮಳೆ ಸುರಿದಿದ್ದು ಈ ವೇಳೆ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದೆ ಎಂದು ಹೇಳಲಾಗಿದೆ. ಹೊಲಕ್ಕೆ ತೆರಳಿದ್ದ ರೇವಪ್ಪಾ ಕಲ್ಲೋಳಿ(35)

ಕೊಚ್ಚಿ: ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಅಧ್ಯಕ್ಷರ ದಕ್ಷಿಣ ಭಾರತದ ಸ್ಪರ್ಧೆ ಕೊನೆಗೂ ಅಧಿಕೃತವಾಗಿದ್ದು, ಇಂದು ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರು. ಇವರೊಂದಿಗೆ ಇವರ ಸಹೋದರಿ ಪ್ರಿಯಾಂಕಾ ವಾದ್ರಾ

ಅಮೃತಸರ: ಗಡಿಯಲ್ಲಿ ಮತ್ತೆ ಪಾಕಿಸ್ತಾನ ಉದ್ಧಟತನ ತೋರಿದ್ದು, ಇದಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತೀಯ ಸೇನೆ ವಾಯುಗಡಿ ಉಲ್ಲಂಘಿಸಿದ ಪಾಕಿಸ್ತಾನದ ಡ್ರೋಣ್ ಅನ್ನು ಹೊಡೆದುರುಳಿಸಿದೆ. ಭಾರತದ ಗಡಿ ಭದ್ರತಾ ಪಡೆಯ ಸೈನಿಕರು ಪಂಜಾಬಿನ ಹಳ್ಳಿಯೊಂದರಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನಕ್ಕೆ ಸಂಬಂಧಿಸಿದ ಡ್ರೋನ್ ವೊಂದನ್ನು ಹೊಡೆದುರುಳಿಸಿದ್ದಾರೆ ಎನ್ನಲಾಗಿದೆ. ಡ್ರೋಣ್ ಹಾರಾಟದ ನಂತರ ಈ ಭಾಗದಲ್ಲಿ