Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಹೊಸದಿಲ್ಲಿ : ತನ್ನನ್ನು ಭಾರತಕ್ಕೆ ಗಡೀಪಾರು ಗೊಳಿಸಬಾರದೆಂದು ಮದ್ಯ ದೊರೆ, 63ರ ಹರೆಯದ ವಿಜಯ್‌ ಮಲ್ಯ ಮಾಡಿಕೊಂಡಿದ್ದ ಮನವಿಯನ್ನು ಬ್ರಿಟನ್‌ ಕೋರ್ಟ್‌ ತಿರಸ್ಕರಿಸಿದೆ. ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ವಿಜಯ್‌ ಮಲ್ಯ ಗೆ ಬ್ರಿಟನ್‌ ಕೋರ್ಟಿನ ಈ ಆದೇಶ ಆಘಾತ ಉಂಟುಮಾಡಿದೆ;

ಉಡುಪಿ: ಕರಾವಳಿಯ ವಿವಿಧ ಬಾಗಗಲ್ಲಿ ಅದರಲ್ಲೂ ಮುಖ್ಯವಾಗಿ ಪಶ್ಚಿಮ ಘಟ್ಟಭಾಗದ ತಪ್ಪಲು ಪ್ರದೇಶಗಳ ಹಲವು ಭಾಗಗಳಲ್ಲಿ ಸೋಮವಾರ ಮಳೆಯಾಗಿದೆ. ಶೆಕೆ ವಾತಾವರಣದಿಂದ ಸಂಕಟಪಡುತ್ತಿದ್ದ ಈ ಭಾಗದ ಜನ ಭೂ ವಾತಾವರಣವನ್ನು ತಂಪಾಗಿಸಿದ ಮಳೆಯಿಂದಾಗಿ ಸಮಾಧಾನಗೊಂಡರು. ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ನಾರಾವಿ, ಸುಬ್ರಹ್ಮಣ್ಯ, ವೇಣೂರು, ಪುಂಜಾಲಕಟ್ಟೆ, ಪುತ್ತೂರು, ವಿಟ್ಲ, ಕಡಬ ಮುಂತಾದ ಭಾಗಗಳಲ್ಲಿ

ಉಡುಪಿ: ಮಂಡ್ಯ ಲೋಕಸಭಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಈ ನಡುವೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ. ನಾನು ಮಂಡ್ಯಕ್ಕೆ ಹೋಗಿ 6

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ ನೀಡಿದ ಕೊಡುಗೆ ಏನು? ಅವರಿಗೇಕೆ ಮತ ಹಾಕ್ತೀರಿ? ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾದ್ಯಮದವರೊಡನೆ ಮಾತನಾಡಿದರು.   "ಮಂಗಳುರಿಗೆ ಮೋದಿ

ನವದೆಹಲಿ: ಭಾರತದ ಮಿಷನ್ ಶಕ್ತಿ ಯೋಜನೆಯ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಉಂಟಾಗಿರುವ ಅವಶೇಷಗಳು ಇನ್ನು 45 ದಿನಗಳಲ್ಲಿ ನಾಶವಾಗಲಿದೆ. ಈ ಬಗ್ಗೆ ಚಿಂತೆ ಬೇಡ ಎಂದು ನಾಸಾಗೆ ಭಾರತದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ತಿರುಗೇಟು ನೀಡಿದೆ. ಕಳೆದ ತಿಂಗಳು ಭಾರತ ನಡೆಸಿದ್ದ ಮಿಷನ್

ನಗರ: ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ರಕ್ಷಣಾ ಪಡೆ ರವಿವಾರ ಬೆಳ್ಳಂಬೆಳಗ್ಗೆ ಕಾಶ್ಮೀರದಲ್ಲಿ ಎನ್ ಕೌಂಟರ್ ಆರಂಭಿಸಿದ್ದು, ಉಗ್ರರನ್ನು ಸದೆಬಡಿಯುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮಿದುರಾ ಟ್ರೈಲ್ ಎಂಬಲ್ಲಿನ ಅರಣ್ಯ ಪ್ರದೇಶದಲ್ಲಿ ಎರಡರಿಂದ ಮೂರು ಉಗ್ರರು ಅವಿತಿರುವ ಖಚಿತ ಮಾಹಿತಿ ಪಡೆದ ರಾಷ್ಟ್ರೀಯ ರೈಫಲ್ಸ್, ವಿಶೇಷ

ಇಂದೋರ್: ಆದಾಯ ತೆರಿಗೆ ಅಧಿಕಾರಿಗಳು ಮಧ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮುಖ್ಯಮಂತ್ರಿ ಕಮಲ್ ನಾಥ್ ಅವರ ವಿಶೇಷ ಕರ್ತವ್ಯದ ಅಧಿಕಾರಿ ಪ್ರವೀಣ್ ಕಕ್ಕಡ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರವಿವಾರ ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಇಂದೋರ್ ನ ವಿಜಯ ನಗರದ ಪ್ರವೀಣ್ ಕಕ್ಕರ್ ನಿವಾಸಕ್ಕೆ ಐಟಿ ಅಧಿಕಾರಿಗಳು

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಪ್ಲಾಸ್ಟಿಕ್ ಫ್ಯಾಕ್ಟರಿಯೊಂದರಲ್ಲಿ ರವಿವಾರ ಬೆಳಗಿನ ಜಾವ ಹತ್ತಿಕೊಂಡ ಬೆಂಕಿಗೆ ಫ್ಯಾಕ್ಟರಿ ಸಂಪೂರ್ಣ ಹೊತ್ತಿ ಉರಿದಿದೆ. ಅವಗಢ ನಡೆದ ಸ್ಥಳಕ್ಕೆ 22 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿವೆ. ಹೊಸದಿಲ್ಲಿಯ ನರೇಲಾ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ರವಿವಾರ ಬೆಳ್ಳಂಬೆಳಗೆ ನಡೆದ ಘಟನೆಗೆ

ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಕಾರಿ ನಾಮ ಸ೦ವತ್ಸರದ ಪ್ರಥಮ ದಿನವಾದ ಶನಿವಾರದ೦ದು ಚಾ೦ದ್ರಮಾನ ಯುಗಾದಿ ಹಬ್ಬವನ್ನು ಸ೦ಭ್ರಮದಿ೦ದ ಆಚರಿಸಲಾಯಿತು. ಶ್ರೀವೆ೦ಕಟೇಶ ದೇವರಿಗೆ "ತಿರುಪತಿವೆ೦ಕಟರಮಣ" ಅಲ೦ಕಾರವನ್ನು ಮಾಡಲಾಯಿತು. 06-04-2019(ಇ೦ದಿನಿ೦ದ) ಪ್ರತಿ ನಿತ್ಯವೂ 8.30ರಿ೦ದ ವಸ೦ತ ಪೂಜೆಯು ನಡೆಯಲಿದೆ.ಜೂನ್ 3ರ೦ದು ಕೊನೆಯ ವಸ೦ತ ಪೂಜೆಯು ಮುಕ್ತಾಯಗೊಳ್ಳಲಿದೆ.

ಉಡುಪಿ:ಮು೦ಬರುವ ಶನಿವಾರದ೦ದು ನಡೆಯಲಿರುವ ಶ್ರೀರಾಮ ನವಮಿಯ ಪ್ರಯುಕ್ತವಾಗಿ ಶನಿವಾರದ೦ದು ಉಡುಪಿಯ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.