Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ;ಶೃದ್ಧಾ ಭಕ್ತಿಯ ಪೂಜೆ

 ನಾಡಿನಾದ್ಯಂತ ಇಂದು ಶುಕ್ರವಾರ ವೈಕುಂಠ ಏಕಾದಶಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಭಗವಾನ್‌ ವಿಷ್ಣುವಿನ ದೇವಾಲಯಗಳಲ್ಲಿ ಭಕ್ತರ ಸಂದೋಹವೇ ನೆರೆದಿದ್ದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ.

ತಿರುಪತಿ ತಿರುಮಲದಲ್ಲೂ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದು ವೆಂಕಟೇಶ್ವರನ ದರ್ಶನಕ್ಕಾಗಿ  ಉದ್ಧನೆಯ ಸರತಿಯ ಸಾಲುಗಳಲ್ಲಿ ನಿಂತಿದ್ದಾರೆ. ತಿರುಮಲದಲ್ಲಿ ಕೇಂದ್ರ ಸಚಿವರು,ರಾಜ್ಯ ಸಚಿವರು , ಶಾಸಕರುಗಳು ಸೇರಿದಂತೆ ವಿವಿಧ ರಾಜ್ಯದಿಂದ ಗಣ್ಯಾತೀಗಣ್ಯರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇಂದು ಸುಮಾರು 2 ಲಕ್ಷ ಭಕ್ತರು ಆಗಮಿಸುವ ಸಾಧ್ಯತೆಗಳಿರುವುದಾಗಿ ಅಂದಾಜಿಸಲಾಗಿದೆ. ಭಕ್ತಿರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೇಜಾವರ ಶ್ರೀಗಳು ಕೃಷ್ಣನ ಮೂರ್ತಿಗೆ ವಿಶೇ ಷ ಅಲಂಕಾರ ನೆರವೇರಿಸಿ  ಪೂಜೆಸಲ್ಲಿಸಿದ್ದಾರೆ. ಉಪವಾಸವಿದ್ದು ವೃತ ಆಚರಿಸಿ ಭಗವಂತನನ್ನು ಪೂಜಿಸುವುದು ಏಕಾದಶಿಯ ವಿಶೇಷವಾಗಿದೆ.

ಬೆಂಗಳೂರಿನ ಇಸ್ಕಾನ್‌ನಲ್ಲೂ ಭಾರೀ ಸಂಖ್ಯೆಯ ಭಕ್ತರು  ಆಗಮಿಸಿ ಪೂಜೆ, ಭಜನೆಗಳಲ್ಲಿ ನಿರತರಾಗಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶ್ರೀನಿವಾಸ ದೇವಾಲಯದಲ್ಲಿ ಕಿಲೋ ಮೀಟರ್‌ನಷ್ಟು ಉದ್ದನೆಯ ಭಕ್ತರ ಸಾಲು ಕಂಡು ಬಂದಿದೆ.ಬೆಳಗಿನ ಜಾವವೇ ಭಕ್ತರು ದೇವಾಲಯಗಳಿಗೆ ಆಗಮಿಸಿ ದರ್ಶನಕ್ಕಾಗಿ ಕಾದು ನಿಂತಿದ್ದಾರೆ.

ಮಲ್ಲೇಶ್ವರದ ವೈಯ್ನಾಲಿಕಾವಲ್‌ನ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಮುಂಜೆ 4.30ರಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.

ಬೆಂಗಳೂರಿನ ಶ್ರೀನಗರದ ವೆಂಕಟೇಶ್ವರ ದೇವಸ್ಥಾನ, ಚಾಮರಾಜಪೇಟೆಯ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿನಗರದ ವೆಂಕಟರಮಣಸ್ವಾಮಿ ದೇವಸ್ಥಾನಗಳೂ ಸೇರಿದಂತೆ ರಾಜ್ಯದ ವಿವಿಧೆಡೆ  ಶ್ರೀನಿವಾಸ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.

ದಕ್ಷಿಣ ಭಾರತದಲ್ಲಿ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ವೈಕುಂಠ ಏಕಾದಶಿಯನ್ನು ಆಂಧ್ರ ಮತ್ತು ತೆಲಂಗಾಣದಲ್ಲಿ ತಿರುಮಲ ಏಕಾದಶಿ ಎಂದು ಕರೆದರೆ, ಕೇರಳದಲ್ಲಿ  ಮುಕ್ಕೋಟಿ ಏಕಾದಶಿ  ಮತ್ತು ಸ್ವರ್ಗಾವತಿಲ್‌ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ.

ಕ್ಷೀರ ಸಾಗರ ಯೋಗ ಮುದ್ರೆಯಲ್ಲಿ ಶೇಷಸಾಯಿ ಮೇಲೆ ಶಯನಿಸಿದ ಶ್ರೀ ಹರಿಯು ಎದ್ದ ದಿನವನ್ನು ಏಕಾದಶಿಯನ್ನಾಗಿ ಆಚರಿಸಲಾಗುತ್ತಿದೆ. ಹಿಂದೂ ಪುರಾಣಗಳ  ಪ್ರಕಾರ ಇಂದು ವೈಕುಂಠದ ಬಾಗಿಲು ತೆರೆದಿರುವುದಾಗಿ ಪ್ರತೀತಿ ಇದ್ದು, ವೃತ ಆಚರಿಸಿದರೆ ಮೋಕ್ಷ ಪ್ರಾಪ್ತಿಯಾಗುವ ನಂಬಿಕೆ ಇದೆ.

No Comments

Leave A Comment