Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಮುಂಬಯಿ:ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ;15ಬಲಿ/15 killed, 19 injured in roof-top pub fire in Mumbai

ಮುಂಬಯಿ: ನಗರದ ಹೃದಯ ಭಾಗದಲ್ಲಿರುವ ಕಮಲಾ ಮಿಲ್ಸ್‌ ಆವರಣದಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಶುಕ್ರವಾರ ನಸುಕಿನ ವೇಳೆ  ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ತೀವ್ರವಾಗಿ ಸುಟ್ಟಗಾಯಗಳಿಗೊಳಗಾಗಿ 15 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಹಲವರು  ಗಂಭೀರವಾಗಿ  ಗಾಯಗೊಂಡು  ಆಸ್ಪತ್ರೆಗೆ ದಾಖಲಿಸಲ್‌ಪಟ್ಟಿದ್ದಾರೆ.

ಮಧ್ಯ ರಾತ್ರಿ ಕಟ್ಟಡದ ಮೇಲ್‌ವುಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲೆಗೆ  ಕಟ್ಟಡಕ್ಕೆ ವ್ಯಾಪಿಸಿಕೊಂಡಿದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ 10 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ  ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.

 ಅವಘಡದ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಬಿಎಂಸಿಯ ವಿಪತ್ತು ನಿರ್ವಹಣಾ ದಳದ ಸದಸ್ಯರು , ಅಂಬುಲೆನ್ಸ್‌ಗಳು ಸ್ಥಳಕ್ಕೆ ದೌಡಾಯಿಸಿ  ರಕ್ಷಣಾ ಕಾರ್ಯವನ್ನೂ ರಾತ್ರಿಯಿಂದಲೇ ನಡೆಸಿದರು.

25 ಕ್ಕೂ ಹೆಚ್ಚು ಗಾಯಾಳುಗಳನ್ನು ರಕ್ಷಿಸಿ ಕೆಇಎಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ  12 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. 9 ಮಂದಿ ಗಾಯಾಳುಗಳಿಗೆ ಭಾಟಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ವರದಿಯಾಗಿದೆ.

ಕಟ್ಟಡದಲ್ಲಿ ವಾಣಿಜ್ಯ ಮಳಿಗೆಗಳು , ಹೊಟೇಲ್‌ಗ‌ಳಿದ್ದವು ಎಂದು ತಿಳಿದು ಬಂದಿದೆ.

Fifteen people were killed and 19 others injured after a major fire broke out in a building in Kamala Mills Compound in central Mumbai’s Lower Parel area, said an official.

The fire broke out shortly after midnight on the third floor of the four-storeyed building on Senapati Bapat Marg, a commercial hub of the city, a civic official said.

“The cooling operations are underway. Some of the injured people are in critical condition,” the official said.

The injured are undergoing treatment at the civic-run KEM and Sion hospitals, the official from the civic body’s disaster management unit said.

Several fire tenders, water tankers, emergency ambulance and police personnel rushed to the spot for rescue operation, he said.

The building, in Central Mumbai, houses some commercial establishments including hotels.

According to the official, the cause of the fire remains to be ascertained.

 

No Comments

Leave A Comment