Log In
BREAKING NEWS >
ಆಗಸ್ಟ್ 18ರ ಭಾನುವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸಮೂಹಿಕ ಚೂಡಿಪೂಜೆ ನಡೆಯಲಿದೆ.ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಫೇಸ್​ಬುಕ್​ ಅಕೌಂಟ್ ನಲ್ಲಿ ಆಧಾರ್ ನಲ್ಲಿರುವಂತೆ ಹೆಸರು ನಮೂದಿಸಿ

ನವದೆಹಲಿ: ಮೊಬೈಲ್ ಸಿಮ್, ಬ್ಯಾಂಕ್​ ಖಾತೆ ಬಳಿಕ ಇದೀಗ ಫೇಸ್​ಬುಕ್ ಅಕೌಂಟ್ ತೆರೆಯಲೂ ಆಧಾರ್ ಬೇಕು!ಫೇಸ್ ಬುಕ್ ನಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಾಗುತ್ತಿದ್ದು ಇದನ್ನು ತಡೆಯುವ ಸಲುವಾಗಿ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಹೊಸ ಫೇಸ್​ಬುಕ್ ಖಾತೆ ತೆರೆಯುವವರಿಗೆ ಸಂಸ್ಥೆಯು ಆಧಾರ್​ ಕಾರ್ಡ್​ನಲ್ಲಿರುವಂತೆ ಹೆಸರನ್ನು ನಮೂದಿಸುವಂತೆ ಸೂಚನೆ ನೀಡುತ್ತಿದ್ದು ಇದು ನಿಮ್ಮ ಸ್ನೇಹಿತರಿಗೆ ನಿಮ್ಮನ್ನು ಗುರುತಿಸಲು ನೆರವಾಗಲಿದೆ ಎಂದು ಹೇಳಿದೆ .

ಫೇಸ್​ಬುಕ್ ಬಳಸುವ  ನಿಮ್ಮ ಸ್ನೇಹಿತರು ನಿಮ್ಮನ್ನು ಗುರುತಿಸಲು ಇದರಿಂದ ಅನುಕೂಲವಾಗುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ನಮೂದಿಸಿ ಎಂದು ಸೂಚನೆಗಳಲ್ಲಿ ತಿಳಿಸುವ ಸಂಸ್ಥೆ ಮುಂದಿನ ದಿನಗಳಲ್ಲಿ ಆಧಾರ್​ ಕಾರ್ಡ್​ಸಂಖ್ಯೆ ನಮೂದಿಸುವುದನ್ನು ​​ಕಡ್ಡಾಯಗೊಳಿಸಬಹುದು ಎನ್ನಲಾಗಿದೆ.

ಜಗತ್ತಿನಾದ್ಯಂತ ಸುಮಾರು 200 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಒಂದು ವೇಳೆ ಆಧಾರ್​ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದರೆ ಮಾಹಿತಿ ಸೋರಿಕೆಯಾಗುವ ಅಪಾಯವೂ ಇದೆ.

No Comments

Leave A Comment