Log In
BREAKING NEWS >
ಆಗಸ್ಟ್ 18ರ ಭಾನುವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸಮೂಹಿಕ ಚೂಡಿಪೂಜೆ ನಡೆಯಲಿದೆ.ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಪೆಟಾ ವರ್ಷದ ವ್ಯಕ್ತಿ ಅನುಷ್ಕಾ ಶರ್ಮಾ

ಮುಂಬೈ: ಇತ್ತೀಚಿಗಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಪೆಟಾ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.

ಪಿಕೆ, ಜಬ್ ತಕ್ ಹೈ ಜಾನ್ ಮತ್ತು ಏ ದಿಲ್ ಹೈ ಮುಷ್ಕಿಲ್ ಚಿತ್ರಗಳ ಖ್ಯಾತಿಯ ಅನುಷ್ಕಾ ಶರ್ಮಾ ಸಸ್ಯಹಾರಿಯಾಗಿದ್ದು, ನಾಯಿ ಮತ್ತು ಕುದುರೆಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರಿಗೆ ಪ್ರಾಣಿ ದಯೆ ಸಂಘಟನೆ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಅನುಷ್ಕಾ ಶರ್ಮಾ ಪ್ರಾಣಿ ಹಕ್ಕುಗಳ ಪ್ರತಿಪಾದಕರಾಗಿದ್ದು, ಪ್ರಾಣಿಗಳ ಬಗೆಗಿನ ದಯೆ ಮತ್ತು ಕಾರ್ಯತತ್ಪರತೆಗೆ ಯಾವುದೇ ಮಿತಿ ಇಲ್ಲ ಎಂದು ಪೆಟಾದ ಸಚಿನ್‌ ಬಂಗೇರಾ ಅವರು ಹೇಳಿದ್ದಾರೆ.

ಕಳೆದ ವರ್ಷ ನೀಲಿ ತಾರೆ ಸನ್ನಿ ಲಿಯೋನ್ ಅವರು ಪೆಟಾ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು. ಇದಕ್ಕು ಮುನ್ನ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್‌, ಕಪಿಲ್‌ ಶರ್ಮಾ, ಜಾಕ್ವೆಲಿನ್‌ ಫರ್ನಾಂಡಿಸ್‌ ಪೆಟಾ ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದವರಲ್ಲಿ ಪ್ರಮುಖರು.

No Comments

Leave A Comment